ನಂಜನಗೂಡಿನಲ್ಲಿ ಜಮೀರ್ ವಿರುದ್ಧ ಜೆಡಿಎಸ್ ಪ್ರತಿಭಟನೆ

| Published : Nov 13 2024, 12:48 AM IST

ಸಾರಾಂಶ

ಒಬ್ಬ ಜವಾಬ್ದರಿಯುತ ಸಚಿವರಾಗಿ ಕೇಂದ್ರ ಸಚಿವರ ವಿರುದ್ಧ ವರ್ಣನಿಂದನೆ ಮಾತುಗಳನ್ನು ಹೇಳಿರುವುದು ಕೀಳು ಮಟ್ಟದ ನೈತಿಕ ಮಟ್ಟವನ್ನು ತೋರಿಸುತ್ತದೆ.

ನಂಜನಗೂಡು: ಸಚಿವರಾದ ಜಮೀರ್ ಅಹಮ್ಮದ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ವರ್ಣನಿಂದನೆ ಮಾಡಿರುವುದನ್ನು ಕುರಿತು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಜೆಡಿಎಸ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ತಾಲೂಕು ಆಡಳಿತ ಕಚೇರಿ ಮುಂಭಾಗ ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್.ವಿ. ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಜಮೀರ್ ಅಹಮದ್ ಅವರು ದೇವೇಗೌಡರ ಕಾಲಿನ ಧೂಳಿಗೂ ಸಮಾನರಲ್ಲ, ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿ ಮಾತನಾಡಿರುವ ಜಮೀರ್ ಕೂಡಲೇ ಕ್ಷಮೆಯಾಚಿಸಬೇಕು ಎಂದರು.

ಒಬ್ಬ ಜವಾಬ್ದರಿಯುತ ಸಚಿವರಾಗಿ ಕೇಂದ್ರ ಸಚಿವರ ವಿರುದ್ಧ ವರ್ಣನಿಂದನೆ ಮಾತುಗಳನ್ನು ಹೇಳಿರುವುದು ಕೀಳು ಮಟ್ಟದ ನೈತಿಕ ಮಟ್ಟವನ್ನು ತೋರಿಸುತ್ತದೆ. ಇವರ ವಿರುದ್ಧ ಕರ್ನಾಟಕ ಸರ್ಕಾರವು ಕಾನೂನಿನ ರೀತಿಯ ಸೂಕ್ತ ಕ್ರಮವನ್ನು ತಕ್ಷಣ ಕೈಗೊಳ್ಳಬೇಕು. ಸರ್ಕಾರವು ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ನಾವು ಮುಂದೆ ಉಗ್ರ ಸ್ವರೂಪವಾದ ಚಳುವಳಿಯನ್ನು ಕೈಗೂಳ್ಳುತ್ತೇವೆ ಎಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ರವರಿಗೆ ಮನವಿ ಪತ್ರ ಸಲ್ಲಿಸಿದರು.

ಜೆಡಿಎಸ್ ಮುಖಂಡರಾದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಂಜಯ್, ಎನ್. ನಾಗೇಂದ್ರ, ಕೆ. ಪ್ರಕಾಶ್, ಎಂ. ಮಹದೇವು, ಎನ್.ಕೆ. ನಂಜಪ್ಪ, ಶಿವನಂಜೇಗೌಡರು ಭಾಗವಹಿಸಿದ್ದರು.