ಸಾರಾಂಶ
ಸಿದ್ದರಾಮಯ್ಯ ಸರ್ಕಾರದಿಂದ ದುರಾಡಳಿತ । ಜಿಲ್ಲೆಯಲ್ಲಿ ಮರಳು ದಂಧೆ ಅವ್ಯಾಹತಕನ್ನಡಪ್ರಭ ವಾರ್ತೆ ಕೊಪ್ಪಳ
ಹಾಲು, ಬಸ್ ದರ ಏರಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ನಗರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಜೆಡಿಎಸ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿತು.ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ಭ್ರಷ್ಟಾಚಾರ, ನಿರಂತರ ಬೆಲೆ ಏರಿಕೆ ಹಾಗೂ ದುರಾಡಳಿತದಲ್ಲಿ ನಿರತವಾಗಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಂತ್ಯ ಸನ್ನಿಹಿತವಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕೊಪ್ಪಳದ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ರಸ್ತೆಗಳೇ ಮಾಯವಾಗಿವೆ. ಮರಳು ದಂಧೆ ಹೇಳತಿರದಾಗಿದೆ. ಹಿರೇಹಳ್ಳದಲ್ಲಿ ಸುಮಾರು ಒಂದು ನೂರು ಯಂತ್ರಗಳು ಪ್ರತಿನಿತ್ಯ ಮರಳಿಗೆ ಕನ್ನ ಹಾಕುತ್ತಿವೆ. ಶಾಸಕರು ಹಾಗೂ ಸಂಸದರ ಸಹೋದರರು ಕುಟುಂಬ ರಾಜಕಾರಣದಲ್ಲಿ ತೊಡಗಿರೆ. ನಮ್ಮ ಕ್ಷೇತ್ರ ಕೊಪ್ಪಳ ರಿಪಬ್ಲಿಕ್ ಆಗಿ ಪರಿವರ್ತನೆಗೊಂಡಿದೆ. ಮೂರನೇ ಸಲ ಶಾಸಕರಾದರೂ ಅಭಿವೃದ್ಧಿಯನ್ನೇ ಮಾಡದ ಇವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಮಾತನಾಡಿ, ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಜನರ ಭಾವನೆಗಳಿಗೆ ಸಿದ್ದರಾಮಯ್ಯನವರು ಕೊಳ್ಳಿ ಇಟ್ಟಿದ್ದಾರೆ. ಬಸ್, ಹಾಲು, ಸ್ಟ್ಯಾಂಪ್ ಪೇಪರ್ ದರ ಹೆಚ್ಚಿಸಲಾಗಿದೆ. ಗುತ್ತಿಗೆದಾರರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಒಳಜಗಳ ತಾರಕಕ್ಕೇರಿದೆ. ಇದರಿಂದ ಅಭಿವೃದ್ಧಿ ಕುಂಠಿತಗೊಂಡು ಜನ ಹಿಡಿಶಾಪ ಹಾಕುವಂತಾಗಿದೆ ಎಂದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ ಮಾತನಾಡಿದರು. ಸಹಾಯಕ ಆಯುಕ್ತ ಮಹೇಶ ಮಾಲಗಿತ್ತಿ ಮನವಿ ಸ್ವೀಕರಿಸಿದರು.ಈ ಸಂದರ್ಭ ಜೆಡಿಎಸ್ ನಾಯಕರಾದ ದೇವಪ್ಪ ಕಟ್ಟಿಮನಿ, ಶರಣಪ್ಪ ಜಡಿ, ವೀರೇಶಗೌಡ ಬಗನಾಳ, ಮಾರುತಿ ಪೇರಮಿ, ರಮೇಶ ಡಂಬರಳ್ಳಿ, ಹುಚ್ಚ್ಚಪ್ಪ ಚೌದ್ರಿ, ಮಂಜುನಾಥ ಕುಣಕೇರಿ, ಯಮನಪ್ಪ ಕಟಿಗಿ, ಸೋಮನಗೌಡ, ಶಾಂತಕುಮಾರ, ಆನಂದ ಕರ್ಕಿಹಳ್ಳಿ, ಮೂರ್ತಪ್ಪ ಗೀಣಗೇರಿ, ಮಹೇಶ ಆಗಳಕೇರಿ, ದೇವರಾಜ ಆಗಳಕೇರಿ, ಮೆಹಮೂದ ಹುಸೇನಿ ಬಲ್ಲೆ, ವಿರೂಪಾಕ್ಷಗೌಡ, ವಸಂತ ಹಟ್ಟಿ, ಪ್ರವೀಣ ಇಟಗಿ, ರುದ್ರೇಶ ಕೊಪ್ಪಳ, ಮಲ್ಲಪ್ಪ ಹಂದ್ರಾಳ, ಮಹೇಶ ಮಾದನೂರ, ಯಂಕಪ್ಪ ಕಲಕೇರಿ, ಮಹೇಶ ಕಂದಾರಿ, ಸಿದ್ದರೆಡ್ಡಿ, ಶರಣಪ್ಪ ಸಾಲಮನಿ, ಭೀಮರಡ್ಡಿ ಗದ್ದಿಕೇರಿ, ವಿಜಯ ಕುಮಾರ್ ಪೂಜಾರ, ಮಂಜುನಾಥ್ ಸೊರಟೂರ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.