ನವೆಂಬರ್‌ 22ರಂದು ಜೆಡಿಎಸ್ ರಜತ ಮಹೋತ್ಸವ ಸಮಾರಂಭ

| Published : Nov 20 2025, 01:00 AM IST

ನವೆಂಬರ್‌ 22ರಂದು ಜೆಡಿಎಸ್ ರಜತ ಮಹೋತ್ಸವ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಅಸ್ತಿತ್ವಕ್ಕೆ ಬಂದು 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಪಿ ಭವನದಲ್ಲಿ ನ. 22ರಂದು ರಜತ ಮಹೋತ್ಸವ ಸಮಾರಂಭ ನಡೆಯಲಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಕಮ್ಮಾರ ಅವರು ಹೇಳಿದರು.

ಹಾವೇರಿ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಅಸ್ತಿತ್ವಕ್ಕೆ ಬಂದು 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಪಿ ಭವನದಲ್ಲಿ ನ. 22ರಂದು ರಜತ ಮಹೋತ್ಸವ ಸಮಾರಂಭ ನಡೆಯಲಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಕಮ್ಮಾರ ಅವರು ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕನ್ನಡಿಗರ ಧ್ವನಿಯಾಗಿ ಕಳೆದ 25 ವರ್ಷಗಳಿಂದ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿ ಜೆಡಿಎಸ್ ಹೋರಾಟ ಮಾಡುತ್ತಾ ಬಂದಿದೆ. ಮಾಜಿ ಪ್ರಧಾನಿ, ಪಕ್ಷದ ಸ್ಥಾಪಕ ಎಚ್.ಡಿ. ದೇವೇಗೌಡ ಅವರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವದಿಂದ ಜೆಡಿಎಸ್ 25 ವರ್ಷ ಯಶಸ್ವಿಯಾಗಿ ಪೂರೈಸಿದೆ. ನ. 22ರಂದು ನಡೆಯುವ ರಜತ ಮಹೋತ್ಸವ ಸಮಾರಂಭವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅನೇಕ ಹಿರಿಯರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ, ಕಿರುಚಿತ್ರ ಹಾಗೂ ಪಕ್ಷ ಬೆಳೆದು ಬಂದ ಹಾದಿಯ ಪ್ರದರ್ಶಿನಿಯ ಉದ್ಘಾಟನೆ ನಡೆಯಲಿದೆ. ಜಿಲ್ಲೆಯಿಂದಲೂ ಸುಮಾರು 200 ಕಾರ್ಯಕರ್ತರು ತೆರಳಲಿದ್ದಾರೆ. ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಪ್ರದರ್ಶಿನಿಗಳು ಹಾಗೂ ಕಾರ್ಯಕರ್ತರ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.

ರಾಮನಗೌಡ ಪಾಟೀಲ, ಮೂಕಪ್ಪ ಪಡಿಯಪ್ಪನವರ, ಶ್ರೀಕಾಂತಗೌಡ ಪಾಟೀಲ, ಅಮೀರಜಾನ್ ಬೇಫಾರಿ, ರಮೇಶ ಮಾರನಬೀಡ, ಈರನಗೌಡ ಕೋಣನತಲಿ, ಇಬ್ರಾಹಿಂ ಯಲಗಚ್ಚ, ವಿರೂಪಾಕ್ಷಪ್ಪ ಅರವಟಗಿ, ಸಿದ್ದಪ್ಪ ಗುಡಿಮುಂದಿನವರ, ಬಸವರಾಜ ಬಾಳಿಹಳ್ಳಿ, ಕಾಳಪ್ಪ ತಳವಾರ, ಗೌಸ್‌ ಮೋಹಿದ್ದೀನ್‌ ಆಲದಕಟ್ಟಿ, ನೀಲಮ್ಮ ಸೀಮನಹಳ್ಳಿ, ಚಂದ್ರಕಲಾ ಕಟ್ಟಿಮನಿ, ನೇತ್ರಾವತಿ ಇದ್ದರು.