ಬನ್ನಂಗಾಡಿ ಗ್ರಾಪಂ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಬಿ.ಜಿ.ಪ್ರಭಾಕರ್ ಆಯ್ಕೆ

| Published : Apr 02 2024, 01:01 AM IST

ಸಾರಾಂಶ

17 ಮಂದಿ ಸದಸ್ಯರ ಸಂಖ್ಯಾಬಲ ಇರುವ ಬನ್ನಂಗಾಡಿ ಗ್ರಾಪಂನಲ್ಲಿ ಹಿಂದಿನ ಅಧ್ಯಕ್ಷ ಯೋಗೇಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ ಬಿ.ಜಿ.ಪ್ರಭಾಕರ್ ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ ಬಿ.ಎನ್.ರವಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಬೆಂಬಲಿತ ಬಿ.ಜಿ.ಪ್ರಭಾಕರ್-13 ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ ಬಿ.ಎನ್.ರವಿ-4 ಮತ ಪಡೆದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬನ್ನಂಗಾಡಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಿ.ಜಿ.ಪ್ರಭಾಕರ್ ಅವರು ರೈತಸಂಘ- ಕಾಂಗ್ರೆಸ್ ಬೆಂಬಲಿತನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು.

17 ಮಂದಿ ಸದಸ್ಯರ ಸಂಖ್ಯಾಬಲ ಗ್ರಾಪಂನಲ್ಲಿ ಹಿಂದಿನ ಅಧ್ಯಕ್ಷ ಯೋಗೇಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ ಬಿ.ಜಿ.ಪ್ರಭಾಕರ್ ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ ಬಿ.ಎನ್.ರವಿ ನಾಮಪತ್ರ ಸಲ್ಲಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ, ತಾಪಂ ಇಒ ಲೋಕೇಶ್ ಮೂರ್ತಿ ಅವರು ಅಧ್ಯಕ್ಷ ಸ್ಥಾನಕ್ಕೆ ಗುಪ್ತ ಮತದಾನದ ಮೂಲಕ ಚುನಾವಣೆ ನಡೆಸಿದರು. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಿ.ಜಿ.ಪ್ರಭಾಕರ್-13 ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ ಬಿ.ಎನ್.ರವಿ-4 ಮತ ಪಡೆದರು.

13 ಮತಗಳನ್ನು ಪಡೆದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಿ.ಜೆ.ಪ್ರಭಾಕರ್ ಅವರನ್ನು ನೂತನ ಅಧ್ಯಕ್ಷರಾಗಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾದ ತಾಪಂ ಇಒ ಲೋಕೇಶ್‌ಮೂರ್ತಿ ಘೋಷಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಸದಸ್ಯರಾದ ಬಿ.ವಿ.ಯೋಗೇಶ್, ಕೆ.ಭಾಗ್ಯ, ಬಿ.ಜಿ.ಪ್ರಭಾಕರ್, ಪದ್ಮಮ್ಮ, ಬಲರಾಮಶೆಟ್ಟಿ, ಬಿ.ಎಂ.ಸವಿತ, ರಾಮಶೆಟ್ಟಿ, ಜಯಲಕ್ಷ್ಮಮ್ಮ, ಕೆ.ಎಂ.ಶೃತಿ, ಎ.ಜೆ.ಮಂಜಯ್ಯ, ಗಾಯಿತ್ರಿ, ಸಿ.ಎಸ್.ಪೂರ್ಣಿಮ, ತಮ್ಮೇಗೌಡ, ಬಿ.ಬಿ.ಆಶಾ, ಡಿ.ವಿ.ವಸಂತ, ರವಿ.ಬಿ.ಎನ್., ರವಿಕುಮಾರ್ ಭಾಗವಹಿಸಿದ್ದರು.

ನೂತನ ಅಧ್ಯಕ್ಷರಾಗಿ ಬಿ.ಜಿ.ಪ್ರಭಾಕರ್ ಘೋಷಣೆಯಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನಂತರ ಮಾತನಾಡಿದ ಅವರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜಣ್ಣರ ಆಶೀರ್ವಾದ ಹಾಗೂ ಎಲ್ಲಾ ಸದಸ್ಯರು ಬೆಂಬಲದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮುಖಂಡರಾದ ತಾಪಂ ಮಾಜಿ ಸದಸ್ಯ ಬಿ.ಪಿ.ಶ್ರೀನಿವಾಸ್, ಬಿ.ಡಿ.ಹುಚ್ಚೇಗೌಡ, ಗಿರಿಯಾರಹಳ್ಳಿ ವಾಸು, ಬಿ.ಎಸ್. ಶ್ರೀನಿವಾಸ್, ಯ.ಶ್ರೀಕಂಠೇಗೌಡ, ಚಲುವೇಗೌಡ, ಶಿವೇಗೌಡ, ಬಿ.ಎಸ್.ಶ್ರೀನಿವಾಸ್, ಕರೀಗೌಡ, ಬಿ.ಆರ್.ಪ್ರಸನ್ನ, ಚಲುವಚಾರಿ, ಡೇರಿ ಅಧ್ಯಕ್ಷ ಚಂದ್ರಶೇಖರ್, ವಿಶ್ವನಾಥ್‌ ಮೆಡಿಕಲ್, ಯೋಗಣ್ಣ, ಬಿ.ಸಿ.ನಾಗಣ್ಣ, ಬಸವರಾಜು, ಪುಟ್ಟಪ್ಪ, ನಾಗೇಶ್, ಪ್ರಭುಸ್ವಾಮಿ, ತ್ಯಾಗರಾಜು, ಪಿಡಿಓ ಲಕ್ಷ್ಮೇಗೌಡ, ಕಾರ್‍ಯದರ್ಶಿ ಆಶಾ ಹಾಜರಿದ್ದರು.