ಎಂಪಿ ಚುನಾವಣೇಲಿ ಹಾಸನದಲ್ಲಿ ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಲಿದೆ: ಪ್ರೀತಂಗೌಡ
KannadaprabhaNewsNetwork | Published : Oct 06 2023, 01:13 AM IST / Updated: Oct 06 2023, 01:14 AM IST
ಎಂಪಿ ಚುನಾವಣೇಲಿ ಹಾಸನದಲ್ಲಿ ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಲಿದೆ: ಪ್ರೀತಂಗೌಡ
ಸಾರಾಂಶ
ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲ, ದಳದವರೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮೈತ್ರಿ ಬಗ್ಗೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲ, ದಳದವರೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ: ಮೈತ್ರಿ ಬಗ್ಗೆ ಪ್ರೀತಂ ಪರೋಕ್ಷ ವಿರೋಧದ ನುಡಿರಾಮಲಿಂಗಾರೆಡ್ಡಿ ಅವರೇ ನಿಮಗೂ ಮಕ್ಕಳು ಮೊಮ್ಮಕ್ಕಳಿದ್ದಾರೆ. ಅವರ ಭವಿಷ್ಯ ಯೋಚಿಸಿ ಮಾತನಾಡಿ: ಮಾಜಿ ಶಾಸಕರ ತಿರುಗೇಟು ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದ್ದರೂ ಟಿಕೆಟ್ ಯಾರ ಪಾಲಾಗುತ್ತದೆಯೋ ಎನ್ನುವುದು ನಿರ್ಧಾರ ಆಗಿಲ್ಲ. ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲಿದೆ ಎಂದು ಮಾಜಿ ಶಾಸಕ ಪ್ರೀತಂ ಜೆ. ಗೌಡ ಹೇಳಿದರು. ನಗರದಲ್ಲಿ ಗುರುವಾರ ಪೆಂಡಾಲ್ ಗಣಪತಿಯ ದರ್ಶನ ಪಡೆದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಮೈತ್ರಿ ಬಗ್ಗೆ ನಮ್ಮ ನಾಯಕರು ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಹಿರಿಯರ ತೀರ್ಮಾನವನ್ನು ಕಾರ್ಯಕರ್ತನಾಗಿ ಒಪ್ಪಿಕೊಳ್ಳುತ್ತೇನೆ. ನಾವು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೆಡಿಎಸ್‌ನವರು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರೋದು ಎಂದು ಹೇಳುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮಾಜಿ ಶಾಸಕ ಪ್ರೀತಂಗೌಡ ಪರೋಕ್ಷವಾಗಿ ವಿರೋಧದ ಮಾತನಾಡಿದರು. ಯಾಕೆಂದರೆ ನಮ್ಮದು ನ್ಯಾಷನಲ್ ಪಾರ್ಟಿ. ೩೦೩ ಸೀಟ್ ತಗೊಂಡಿದ್ದಂತವರು. ಒಂದು ಸೀಟ್ ತೆಗೆದುಕೊಂಡಿದ್ದವರು ೩೦೩ ಸೀಟ್‌ನವರ ಜೊತೆ ಬಂದಿದ್ದಾರೆ. ಬಂದಿರುವಂತಹ ನೆಂಟರು ಮೂಲ ಮನೆಯವರ ಜೊತೆ ಹೊಂದಾಣಿಕೆ ಆಗಿ ಎಲ್ಲವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಜೆಡಿಎಸ್ ನವರು ನೆಂಟರು ಎಂದು ಬಣ್ಣಿಸಿದರು. ಬಿಜೆಪಿಯಲ್ಲಿ ವಂಶಪಾರಂಪರ್ಯಕ್ಕೆ ಅವಕಾಶ ಇಲ್ಲ: ಜೆಡಿಎಸ್‌ನವರು ನಮ್ಮ ಸಂಬಂಧ ಬೆಳೆಸಿದ ಮೇಲೆ ನಮ್ಮ ಬಗ್ಗೆ ತಿಳಿದುಕೊಂಡಿರುತ್ತಾರೆ. ಬಿಜೆಪಿಯದ್ದು ನಮ್ಮದು ರಾಷ್ಟ್ರೀಯತೆ. ದೇಶ ಮೊದಲು ವ್ಯಕ್ತಿ ಕೊನೆ ಅನ್ನೋ ಅಜೆಂಡಾವಾಗಿದೆ. ಈ ಎಲ್ಲವನ್ನೂ ಒಪ್ಕೊಂಡು ಬರುವುದಾದರೇ ಬೇಡ ಅಂತೇಳೋದಕ್ಕೆ ನಾನು ಯಾರು? ನಮ್ಮಲ್ಲಿ ವಂಶಪಾರಂಪರ್ಯಕ್ಕೆ ಅವಕಾಶ ಇರೋದಿಲ್ಲ. ನಮ್ಮಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇರೋದಿಲ್ಲ. ಈ ಎಲ್ಲಾ ಅಂಶಗಳನ್ನು ಅವರು ಮನದಟ್ಟು ಮಾಡ್ಕೊಂಡು ದೇಶದ ಹಿತದೃಷ್ಟಿಯಿಂದ ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗುವುದರಿಂದ ಬಹಳ ಸ್ವಾಗತ ಮಾಡೋ ವಿಚಾರವಾಗಿದೆ. ಹಾಸನ ಬಿಜೆಪಿ ಪಾಲಾಗುತ್ತೋ, ಆರ್.ಪಿ.ಐ. ಪಾಲಾಗುತ್ತೋ, ಜೆಡಿಎಸ್ ಪಾಲಾಗುತ್ತೋ! ಎನ್.ಡಿ.ಎ. ಮೈತ್ರಿಕೂಟ ಪಕ್ಷಗಳು ಬಹಳಷ್ಟಿದೆ. ರಾಷ್ಟ್ರೀಯ ನಾಯಕರು ಹಾಸನ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡ್ತಾರೆ. ಆರ್.ಪಿ.ಐ. ಬಿಜೆಪಿ, ಜೆಡಿಎಸ್ ಯಾರನ್ನ ಅಭ್ಯರ್ಥಿ ಆಗ್ತಾರೋ ನೋಡೋಣ? ಎಂದು ಹೇಳಿಕೆ ನೀಡುವುದರ ಮೂಲಕ ಆರ್‌ಪಿಐ ಹೆಸರು ಪ್ರಸ್ತಾಪಿಸಿ ಜೆಡಿಎಸ್‌ಗೆ ಟಿಕೆಟ್‌ನೀಡೋದಕ್ಕೆ ಪ್ರೀತಂ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರು ಪ್ರೀತಂಗೌಡಗೆ ಗಾಳ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪ್ರೀತಂಗೌಡ ರಾಜಕಾರಣಕ್ಕೆ ಬಂದಿರೋದು ತತ್ವ ಸಿದ್ದಾಂತದ ಆಧಾರದ ಮೇಲೆ. ಚುನಾವಣೆ ಮಾಡಬೇಕು ಅಂತಾ ಬಂದಾಗ ಹಾಸನದಲ್ಲಿ ಬಿಜೆಪಿ 61000 ಓಟು. ಈಗ ೭೮ ಸಾವಿರಕ್ಕೆ ಹೋಗಿದ್ದು. ಕಾರ್ಯಕರ್ತರ ತಂಡವೇ ಇಲ್ಲಿದ್ದು, ಇದನ್ನ ಬಿಟ್ಟು ನಾಲ್ಕು ಸಾವಿರ ಓಟು ತೆಗೆದುಕೊಂಡ ಪಕ್ಷಕ್ಕೆ ಯಾರಾದ್ರೂ ಹೋಗ್ತಾರಾ! ಬೇರೆ ಮನೆ ಹೊಸದಾಗಿ ಕಟ್ಟೋ ಅವಶ್ಯಕತೆ ಏನಿದೆ? ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯೇ ಕ್ಯಾಂಡಿಡೇಟ್ ಆಗ್ತಾರೆ. ಜೆಡಿಎಸ್ ಅಲೆಯನ್ಸ್ ಆಗಿರೋದ್ರಿಂದ ಬಿಜೆಪಿಗೆ ಸಹಾಯ ಮಾಡೋ ಅನಿವಾರ್ಯತೆ ಇರುತ್ತದೆ. ಅವರು ಹೇಳಿದ್ದಾರೆ ಲಾಂಗ್ ಟರ್ಮ್ ರಿಲೆಶನ್ ಅಂತಾ ಎಂದು ವ್ಯಂಗ್ಯವಾಡಿದರು. ಶಿವಮೊಗ್ಗ ಗಲಾಟೆ ಬಗ್ಗೆ ಮಾಜಿ ಶಾಸಕ ಪ್ರೀತಂಗೌಡ ಹೇಳಿಕೆ, ಶಿವಮೊಗ್ಗದಲ್ಲಿ ಪದೇಪದೇ ಜಿಹಾದಿ ಮನಸ್ಥಿತಿ ಇರುವ ವ್ಯಕ್ತಿಗಳು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಳಿಗೆ ಯಾರು ಮಾಹಿತಿ ಕೊಡ್ತಾರೆ ಅವರ ಮನಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲಾಗಿ ಇವರೇ ಅವರಿಗೆ ಕ್ಲೀನ್ ಚಿಟ್ ಕೊಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಆಗಿರುವಂತದ್ದು ನಾಳೆ ಬಿಟಿಎಂ ಲೇಔಟ್‌ನಲ್ಲಿ ಇರುವ ರಾಮಲಿಂಗಾರೆಡ್ಡಿ ಮನೆಯ ಮೇಲೆ ಆದರೆ ಯಾರು ಜವಾಬ್ದಾರರು. ಸಾಮಾನ್ಯ ಜ್ಞಾನ ಇಲ್ಲದೆ ತುಷ್ಟಿಕರಣ ರಾಜಕಾರಣ ಮಾಡಲಿಕ್ಕೆ ಹೊರಟರೆ ಪಶ್ಚಿಮ ಬಂಗಾಳದಲ್ಲಿ, ಜಮ್ಮು ಕಾಶ್ಮೀರದ ಮುಂಚಿನ ಸ್ಥಿತಿಯನ್ನೇ ಕರ್ನಾಟಕಕ್ಕೆ ತರಲು ಹೊರಟಿದ್ದಾರೆ. ಹಾಗಾಗಿ ನಾನು ಇದನ್ನು ಖಂಡಿಸುತ್ತೇನೆ. ರಾಜಕಾರಣವನ್ನು ಬದಿಗೊತ್ತಿ ನಿಮ್ಮ ಮಕ್ಕಳು ಮೊಮ್ಮಕ್ಕಳು ಮುಂದಿನ ಪೀಳಿಗೆಗಾಗಿ ಈ ರೀತಿಯ ಮನಸ್ಥಿತಿ ಇರುವಂತ ಯಾವುದೇ ಧರ್ಮದ ವ್ಯಕ್ತಿಗಳನ್ನು ಸಹಿಸುವಂತಹ ಕೆಲಸವನ್ನು ಮಾಡಬಾರದು ಎಂದರು. ರಾಮಲಿಂಗ ರೆಡ್ಡಿ ಅವರೇ ಸ್ವಲ್ಪ ಸಮಾಧಾನದಲ್ಲಿರಿ. ನಿಮಗೂ ಸಂಸಾರ ಇದೆ, ಮಕ್ಕಳಿದ್ದಾರೆ, ಮೊಮ್ಮಕ್ಕಳಿದ್ದಾರೆ ಅವರಿಗೂ ಮಕ್ಕಳಿರ್ತಾರೆ. ಇನ್ನು ೧೦ ವರ್ಷ ಆದಮೇಲೆ ನಿಮ್ಮ ಈ ಮನಸ್ಥಿತಿ ಮುಂದುವರೆದರೆ ದೇಶ ಯಾವ ಸ್ಥಿತಿಗೆ ಹೋಗುತ್ತೆ. ಆಫ್ಘಾನಿಸ್ತಾನದಲ್ಲಿ, ಪಾಕಿಸ್ತಾನದಲ್ಲಿ ಏನಾಗ್ತಿದೆ ಎಂಬುದನ್ನು ಸಾಮಾನ್ಯ ನಾಗರಿಕನಾಗಿ ನಾನು ನಿಮಗೆ ಕೇಳುತ್ತೇನೆ ಎಂದು ಹೇಳಿದರು. ಇದೆ ವೇಳೆ ಬಿಜೆಪಿ ಮುಖಂಡರಾದ ಲಲಾಟ್ ಮೂರ್ತಿ, ಹೆಚ್.ಪಿ. ಕಿರಣ್, ವೇಣುಗೋಪಾಲ್, ಇತರರು ಉಪಸ್ಥಿತರಿದ್ದರು.