ಅಪಾರ ಸಂಖ್ಯೆಯ ಮಹಿಳೆಯರು ಮತ್ತು ಮುಖಂಡರು ಜೆಡಿಎಸ್ ತೊರೆದು ಬಿಜೆಪಿ ಮುಖಂಡರಾದ ಚಿದಾನಂದ್ ಸಿ ಆರ್‌ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಅಂಕನಹಳ್ಳಿ ಗ್ರಾಮದ ಯುವ ಮುಖಂಡರು ಮತ್ತು ಹಿರಿಯ ಮುಖಂಡರಾದ ಚರಣ್, ಸಂತೋಷ್, ಯೋಗೇಶ್, ವಸಂತು, ಮೋಹನ, ಮನು, ಶ್ರೀಧರ, ಆನಂದ, ಮಹೇಶ, ಶಿವರಾಜ್, ಅಣ್ಣ ಅಪ್ಪಾಜಣ್ಣ, ಪಾರ್ವತಮ್ಮ ಇನ್ನು ಅಪಾರ ಸಂಖ್ಯೆಯ ಮಹಿಳೆಯರು ಮತ್ತು ಮುಖಂಡರು ಜೆಡಿಎಸ್ ತೊರೆದು ಬಿಜೆಪಿ ಮುಖಂಡರಾದ ಚಿದಾನಂದ್ ಸಿ ಆರ್‌ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.