ದಂಧೆಕೋರರಿಗೆ ಅನುಕೂಲವಾಗುವಂತೆ ಮತ್ಯಾರಿಗೋ ಕೋಟಿ ಕೋಟಿ ಹಣ ಸಿಗುತ್ತದೆ ಎಂದು ಬೆಂಗಳೂರಿನಿಂದ ಬಂದು ಇನ್ವೆಸ್ಟ್ ಮಾಡಿದ್ದಾರಲ್ಲ, ಅಂತಹ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಅನುಕೂಲ ಮಾಡಿಕೊಡಲು ಈ ಪ್ರಾಜೆಕ್ಟ್ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿ, ೨೦೨೮ ಡಿ.ಕೆ.ಶಿವಕುಮಾರ್ ಮಾಜಿ ಆಗ್ತಾರೆ ೮೦% ಜನ ಒಪ್ಪಿಕೊಂಡಿದ್ದಾರೆ ಅಂತ ಇವರೇ ತೀರ್ಮಾನ ಮಾಡಿಬಿಟ್ಟಿದ್ದಾರೆ, ಸ್ಥಳಕ್ಕೆ ಹೋಗಿ ಇವರೇನಾದರೂ ಪರಿಶೀಲನೆ ಮಾಡಿದ್ದಾರಾ. ಅಧಿಕಾರಿಗಳು ಹಳ್ಳಿಗಳಿಗೆ ಹೋಗಿ ಸಭೆ ನಡೆಸದೆ ಬೇಜವಾಬ್ದಾರಿ ಕೆಲಸ ಮಾಡಿದ್ದಾರೆ. ಅಧಿಕಾರಿಗಳು ಪ್ರಮಾಣಿಕವಾಗಿ ನಿಜವಾದ ರೈತರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಿ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪ್ರಾಜೆಕ್ಟ್ ಹಾಗೂ ಭೂಸ್ವಾಧೀನದ ಬಗ್ಗೆ ಉಪಮುಖ್ಯಮಂತ್ರಿ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಡಿ. ಕೆ. ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ, ೨೦೨೮ಕ್ಕೆ ಮಿಸ್ಟರ್‌ ಡಿ. ಕೆ. ಶಿವಕುಮಾರ್ ಮಾಜಿ ಆಗ್ತಾರೆ, ಇದು ತಲೆಯಲ್ಲಿರಲಿ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ. ಎನ್. ಬಾಲಕೃಷ್ಣ ಅವರ ಪುತ್ರಿಯ ಬೀಗರ ಔತಣಕೂಟದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡುವಾಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.ಅಲ್ಲಿ ಇದ್ದವರು ರೈತರಲ್ಲ, ರಿಯಲ್ ಎಸ್ಟೇಟ್ ದಲ್ಲಾಳಿಗಳು:

ಬೆಂಗಳೂರಿನಲ್ಲಿ ಡಿ. ಕೆ. ಶಿವಕುಮಾರ್ ನಡೆಸಿದ ಸಭೆಯನ್ನು ವ್ಯಂಗ್ಯವಾಡಿದ ನಿಖಿಲ್ ಕುಮಾರಸ್ವಾಮಿ, ಕುಮಾರಣ್ಣ ಹಾಗೂ ದೇವೇಗೌಡರು ಜಂಟಿ ಸುದ್ದಿಗೋಷ್ಠಿ ಮಾಡಿದ ಮೇಲಂತೂ ಇವರ ಒಳಗೆ ತಳಮಳ ಶುರುವಾಗಿದೆ. ಹಾಗಾಗಿಯೇ ಇವತ್ತು ರೈತ ಮುಖಂಡರು ಅಂತಾ ಕೆಲವರನ್ನು ಕರೆಸಿ ನಾಟಕ ಆಡಿದ್ದಾರೆ. ಬೆಂಗಳೂರಿನ ಅವರ ಕಚೇರಿಯಲ್ಲಿ ಕುಳಿತಿದ್ದವರ ಮುಖ ನೋಡಿದ್ದೀರ ಅವರು ಯಾರಾದರೂ ರೈತರ ತರ ಕಂಡಿದ್ದಾರ ಎಂದು ಪ್ರಶ್ನಿಸಿದರು.ಅಲ್ಲಿ ಸಣ್ಣ ರೈತರು ಒಂದು ತುಂಡು ಭೂಮಿ ಇಟ್ಟುಕೊಂಡು ಹೈನುಗಾರಿಕೆ ಮಾಡಿಕೊಂಡು ಗೌರವಯುತವಾಗಿ ಜೀವನ ಮಾಡುತ್ತಿದ್ದಾರೆ. ಇವರು ಆ ಬಡ ರೈತರ ಹೊಟ್ಟೆಗೆ ಕನ್ನ ಹಾಕಲು ಹೊರಟಿದ್ದಾರೆ.ದಂಧೆಕೋರರಿಗೆ ಅನುಕೂಲವಾಗುವಂತೆ ಮತ್ಯಾರಿಗೋ ಕೋಟಿ ಕೋಟಿ ಹಣ ಸಿಗುತ್ತದೆ ಎಂದು ಬೆಂಗಳೂರಿನಿಂದ ಬಂದು ಇನ್ವೆಸ್ಟ್ ಮಾಡಿದ್ದಾರಲ್ಲ, ಅಂತಹ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಅನುಕೂಲ ಮಾಡಿಕೊಡಲು ಈ ಪ್ರಾಜೆಕ್ಟ್ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿ, ೨೦೨೮ ಡಿ.ಕೆ.ಶಿವಕುಮಾರ್ ಮಾಜಿ ಆಗ್ತಾರೆ ೮೦% ಜನ ಒಪ್ಪಿಕೊಂಡಿದ್ದಾರೆ ಅಂತ ಇವರೇ ತೀರ್ಮಾನ ಮಾಡಿಬಿಟ್ಟಿದ್ದಾರೆ, ಸ್ಥಳಕ್ಕೆ ಹೋಗಿ ಇವರೇನಾದರೂ ಪರಿಶೀಲನೆ ಮಾಡಿದ್ದಾರಾ. ಅಧಿಕಾರಿಗಳು ಹಳ್ಳಿಗಳಿಗೆ ಹೋಗಿ ಸಭೆ ನಡೆಸದೆ ಬೇಜವಾಬ್ದಾರಿ ಕೆಲಸ ಮಾಡಿದ್ದಾರೆ. ಅಧಿಕಾರಿಗಳು ಪ್ರಮಾಣಿಕವಾಗಿ ನಿಜವಾದ ರೈತರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಿ. ಈ ದುರಹಂಕಾರದ ದರ್ಪದ ಮಾತು ಬಹಳ ದಿನ ನಡೆಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಇದನ್ನು ಡಿ.ಕೆ.ಶಿ ಅರ್ಥ ಮಾಡಿಕೊಳ್ಳಬೇಕು ಆ ಅರಿವು ಅವರ ತಲೆಯಲ್ಲಿ ಇರಲಿ ಎಂದು ಖಾರವಾಗಿ ಎಚ್ಚರಿಸಿದರು.ಇದೇ ವೇಳೆ ತಮ್ಮ ರಾಜಕೀಯ ಭವಿಷ್ಯ ಹಾಗೂ ಸ್ಟೇಟಸ್ ಕುರಿತು ಮಾತನಾಡಿದ ಅವರು ನನ್ನ ಸ್ಟೇಟಸ್ ಬಗ್ಗೆ ಯಾರೂ ಚರ್ಚೆ ಮಾಡುವುದು ಬೇಡ. ಅಧಿಕಾರ ಅನ್ನೋದು ಯಾರಿಗೂ ಶಾಶ್ವತ ಅಲ್ಲ ಎಂದರು.