ಜೆಇಇ ಮೇನ್ಸ್ ಪರೀಕ್ಷೆ: ಎಸ್ಬಿಆರ್‌ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

| Published : Apr 21 2025, 12:48 AM IST

ಸಾರಾಂಶ

ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು 2025ನೇ ಸಾಲಿನ ಜೆಇಇ ಮೇನ್ಸ್ ಹಂತ-2ರ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು 2025ನೇ ಸಾಲಿನ ಜೆಇಇ ಮೇನ್ಸ್ ಹಂತ-2ರ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.

ಈ ಕಾಲೇಜಿನ ಸೋಹಮ್ ರಾಜಕುಮಾರ- ಶೇ.99.59 ಪರ್ಸೆಂಟೈಲ್ ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾನೆ. ಭರತ ಸುರೇಂದ್ರ ಪಾವಲೆ- ಶೇ.99.45 ಪರ್ಸೆಂಟೈಲ್ ದ್ವಿತೀಯ ಸ್ಥಾನ, ಆದಿತ್ಯಾ ರಾಜಶೇಖರ- 99.4462 ಪರ್ಸೆಂಟೈಲ್ ತೃತೀಯ ಸ್ಥಾನವನ್ನು ಪಡೆದುಕೊಂಡು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.ಜೆಇಇ ಮೇನ್ಸ್ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಎರಡೂ ಹಂತಗಳಲ್ಲಿನ ಅತೀ ಹೆಚ್ಚಿನ ಪರ್ಸೆಂಟೈಲ್‍ನ್ನು ಪರಿಗಣಿಸಿ ಜೆ.ಇ.ಇ ಅಡ್ವಾನ್ಸಡ್ ಪರೀಕ್ಷೆ ಬರೆಯಲು ಅರ್ಹತೆ ನೀಡಲಾಗುತ್ತದೆ ಹಾಗೂ ದೇಶದ ಪ್ರತಿಷ್ಟಿತ ಎನ್.ಐ.ಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ.

1 ಹಾಗೂ 2ನೇ ಹಂತದ ಜೆ.ಇ.ಇ. ಮೇನ್ಸ್ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ 243ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎನ್.ಐ.ಟಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ ಮತ್ತು ಜೆ.ಇ.ಇ ಅಡ್ವಾನ್ಸ್‍ಡ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.ಎಸ್ಬಿಆರ್‌ ಕಾಲೇಜಿಲ್ಲಿ ಪರೀಕ್ಷೆ ಬರೆದವರ ಪೈಕಿ ಒಟ್ಟು 111 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ. ಕಾಲಜಿನ ಮೂವರು 99 ಪರ್ಸೆಂಟೈಲ್‌ ಪಡೆದರೆ 7 ಮಂದಿ 98 ಪರ್ಸೆಂಟೈಲ್‌ ಪಡೆದಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿಗಳ ಈ ಸಾಧನೆಯನ್ನು ಗಮನಿಸಿ, ‘ಎಸ್.ಬಿ.ಆರ್ ಕಾಲೇಜಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೋಧನೆ ಮಾಡಲಾಗುತ್ತಿದೆ. ಎನ್.ಟಿ.ಎ ಮಾದರಿಯಲ್ಲಿಯೇ ಸತತವಾಗಿ ಕಂಪ್ಯೂಟರ್ ಆಧಾರಿತ ಟೆಸ್ಟ್(ಸಿ.ಬಿ.ಟಿ)ಗಳನ್ನು ನಡೆಸಲಾಗುತ್ತದೆ, ಅದರ ಪರಿಣಾಮವಾಗಿ ಉತ್ತಮ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಉತ್ತಮ ಫಲಿತಾಂಶವನ್ನು ಪಡೆದು ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ- ಪೂಜ್ಯ ಡಾ. ಶರಣಬಸವಪ್ಪ ಅಪ್ಪ, ಅಧ್ಯಕ್ಷರು,ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ.

‘ಎಸ್.ಬಿ.ಆರ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆಇಇ ಫೇಸ್-2ರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದು ಎಸ್.ಬಿ.ಆರ್ ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಕಲ್ಯಾಣ ಕರ್ನಾಟಕದಲ್ಲೇ ಎಸ್.ಬಿ.ಆರ್ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡುತ್ತಿದೆ’ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಚೇರ್ ಪರ್ಸನ್

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ.‘ಪೂಜ್ಯ ಅಪ್ಪಾಜಿಯವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಅನುಭವಿ ಪ್ರಾಚಾರ್ಯರ ಮಾರ್ಗದರ್ಶನ ಹಾಗೂ ಅದಕ್ಕೆ ತಕ್ಕಂತೆ ಶ್ರಮವಹಿಸುವ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಸತತ ಪ್ರಯತ್ನಕ್ಕೆ ಸಂದ ಫಲಿತಾಂಶವಾಗಿದೆ’ಬಸವರಾಜ ದೇಶಮುಖ , ಕಾರ್ಯದರ್ಶಿ

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ.

ಜೆಇಇ ಮೇನ್ಸ್ ಹಂತ-2 ರ ಫಲಿತಾಂಶದ ಪಟ್ಟಿ: ಸೋಹಮ್‌, ಭರತ, ಆದಿತ್ಯಾ- ಶೇ.99 ಪರ್ಸೆಂಟೈಲ್‌, ಸಿದ್ದಾರೆಡ್ಡಿ, ವಿಶಾಲ ಗೌಡ, ಅನಿಕೇತ್‌ ಸುಲಗೆ, ಸಂಗಮೇಶ, ಸುಧನ್ವ, ಅಕ್ಷಯ ಹಾಗೂ ಕೋರಿಯನ್‌ ಫಾತೀಮಾ- ಶೇ.98 ಪರ್ಸಂಟೈಲ್‌, ಚಂದ್ರಕಾಂತ, ಸಮರ್ಥ, ಪ್ರಜ್ವಲ್‌, ಪ್ರಥಮೇಶ, ವಿನಾಯಕ ದೊರೆ, ಸೃಜನ್‌- ಶೇ.97 ಪರ್ಸಂಟೈಲ್‌, ಮಹೇಶ, ಕಾರ್ತಿಕ, ವೈಭವಿ, ಹಿರೇಮಠ, ಶ್ರೀರಾಜ ರೆಡ್ಡಿ, ಸೌಮ್ಯಶ್ರೀ, ಗಗನ, ನವಮಿ, ಸದಾನಂದ , ವರ್ಶಿತಾ ರೆಡ್ಡಿ ಶೇ.96 ಪರ್ಸೆಂಟೈಲ್‌, ವಿವೇಕ ಹಿರೇಮನಿ, ವರುಣ ತಂಬಾಕೆ, ಶೇಕ್‌ ರಿಯಾನ್‌, ಅಕ್ರಮ, ಸ್ಪರ್ಶ, ಶಶಿಧರ್‌, ತರುಣ, ಶಶಾಂಕ, ಸಿದ್ದನಗೌಡ, ಸಿದ್ದಾರ್ಥ, ರೋಹಿತ್‌, ರಕ್ಷಿತ ಪಾಂಚಾಳ, ಸುದರ್ಶನ, ಮೊಹ್ಮದ್‌ ಅತೀಫ್‌, ಮಧುಸೂಧನ ರೆಡ್ಡಿ, ಅಭಿಶೇಕ ಇವರೆಲ್ಲರೂ ಶೇ.95 ಪರ್ಸೆಂಟೈಲ್‌ ಪಡೆದಿದ್ದಾರೆ.