ಸಾರಾಂಶ
ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಕ್ರಿಯಾಶೀಲ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಸ್. ಜಯಣ್ಣ ತಿಳಿಸಿದರು.
ತಿಪಟೂರು: ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಕ್ರಿಯಾಶೀಲ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಸ್. ಜಯಣ್ಣ ತಿಳಿಸಿದರು.
ನಗರದ ಶ್ರೀ ಕ್ರಿಯಾಶೀಲ ವಿದ್ಯಾಸಂಸ್ಥೆಯಲ್ಲಿ ಇನ್ನರ್‌ವೀಲ್ ಕ್ಲಬ್ ವತಿಯಿಂದ ನಡೆದ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹೋರಾಟಗಾರರ ತ್ಯಾಗ, ಬಲಿದಾನದಿಂದ ದೊರಕಿರುವ ಸ್ವಾತಂತ್ರ್ಯವನ್ನು ಯುವ ಪೀಳಿಗೆ ಕಾಪಾಡಿಕೊಂಡು ಹೋಗಬೇಕು. ದೇಶದ ಪ್ರಗತಿಗೆ ಶ್ರಮಿಸುವ ಗುಣ ಬೆಳೆಸಿಕೊಳ್ಳಬೇಕೆಂದರು. ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಟಿ.ಎಸ್. ಸುಮಿತ್ರಾ ಮಾತನಾಡಿ, ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಗೌರವಿಸುವ ಮೂಲಕ ರಾಷ್ಟ್ರೀಯ ಹಬ್ಬಗಳನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು ಎಂದರು. ದಿನಪತ್ರಿಕೆ ವಿತರಕರಿಗೆ ಜರ್ಕಿನ್ ಹಾಗೂ ಶಾಲಾ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕ್ಲಬ್‌ನ ಮಾಜಿ ಅಧ್ಯಕ್ಷ ಸ್ವರ್ಣಗೌರಿ, ಭಾಗ್ಯಮೂರ್ತಿ, ಉಪಾಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಸುಜಾತರಾಜ್, ಸದಸ್ಯರಾದ ರಮಾ, ಪ್ರಭಾವಿಶ್ವನಾಥ್, ಪಂಕಜ, ಶೋಭಾ, ಐಎಸ್‌ಓ ಕಾತ್ಯಾಯಿನಿ ಭಾಗವಹಿಸಿದ್ದರು.