ಸಾರಾಂಶ
ಅನೀಲಕುಮಾರ್ ದೇಶಮುಖ್
ಕನ್ನಡಪ್ರಭ ವಾರ್ತೆ, ಔರಾದ್ಜೆಸ್ಕಾಂನ ಔರಾದ್ ಉಪ ವಿಭಾಗ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವಾಂತರಗಳ ಕುರಿತು ''''''''ಕನ್ನಡಪ್ರಭ'''''''' ಸರಣಿ ವರದಿಗಳ ಮೂಲಕ ಅಧಿಕಾರಿಗಳಲ್ಲಿ ಚುರುಕು ಮುಟ್ಟಿದಂತಾಗಿದ್ದು ಕಮಲನಗರ ಹಾಗೂ ಔರಾದ್ ತಾಲೂಕಿನಾದ್ಯಂತ ವಿದ್ಯುತ್ ಕೆಲಸಗಳ ಜೋರು ಹಿಡಿದಿದ್ದಲ್ಲದೆ ಅಧಿಕಾರಿಗಳು, ಸಿಬ್ಬಂದಿ ಅವರವರ ಕೇಂದ್ರ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸಬೇಕೆಂಬ ಆದೇಶ ಹೊರಡಿಸಿದ್ದು, ಜೆಸ್ಕಾಂ ಹೈ ಅಲರ್ಟ್ ಆದಂತಾಗಿದೆ.
ಕಳೆದ ಎರಡು ವಾರಗಳಿಂದ ಜೆಸ್ಕಾಂ ಅಧಿಕಾರಿಗಳ ಅವಾಂತರ, ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ಕರ್ತವ್ಯ ನಿಯಮಾವಳಿಗಳ ಉಲ್ಲಂಘನೆ ಕುರಿತು ಸಮಗ್ರವಾಗಿ ಸರಣಿ ವರದಿಗಳ ಮೂಲಕ ಜೆಸ್ಕಾಂ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.ಡೊಂಗರಗಾಂವ್- ವಾಗನಗೇರಾ ಭಾಗದಲ್ಲಿ ವಿದ್ಯುತ್ ದೋಷವಾಗಿ ಮೂರು ದಿನಗಳ ಕಾಲ ಚಿಮ್ಮೆಗಾಂವ್ ಗ್ರಾಪಂ ವ್ಯಾಪ್ತಿಯ 9 ಗ್ರಾಮಗಳು ಕತ್ತಲೆ ಕೂಪದಲ್ಲಿರುವದನ್ನು ವಿವರವಾಗಿ ''''''''ಕನ್ನಡಪ್ರಭ'''''''' ಪ್ರಕಟಿಸಿದ್ದಕ್ಕೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಜೆಸ್ಕಾಂ ಇಇ ರಮೇಶ ಪಾಟೀಲ್ ಅವರು ಪರಿಸ್ಥಿತಿ ಅವಲೋಕನ ನಡೆಸಿ ಅಂದಾಜು ಒಟ್ಟು 7 ಕಿ.ಮೀ. ಉದ್ದದ ನಿರಂತರ ಜ್ಯೋತಿ ಯೋಜನೆಯ ವಿದ್ಯುತ್ ಕಂಬಗಳ ಮೇಲಿನ ಇನ್ಸುಲೇಟರ್‌ಗಳನ್ನು ಸಮರೋಪಾದಿಯಲ್ಲಿ ಎರಡು ದಿನದಲ್ಲಿಯೇ ಬದಲಾವಣೆ ಮಾಡಿ ಆ ಭಾಗದ ವಿದ್ಯುತ್ ಕಣ್ಣಾ ಮುಚ್ಚಾಲೆಗೆ ಶಾಶ್ವತ ಪರಿಹಾರ ನೀಡಿದ್ದಾರೆ.
ಅಲ್ಲದೆ, ವಿದ್ಯುತ್ ನಿಯಂತ್ರಕಗಳ ಸುತ್ತ ಆವರಿಸಿಕೊಂಡ ಗಿಡ ಗಂಟೆಗಳು ಅಪಾಯಕ್ಕೆ ಕಾದು ಕೂತಂತೆ ಸಾರ್ವಜನಿಕ ಸ್ಥಳಗಳಲ್ಲಿದ್ದ ಟ್ರಾನ್ಸ್‌ಫಾರಂಗಳ ಪೈಕಿ ಬಹುತೇಕ ಎಲ್ಲ ಟ್ರಾನ್ಸಫಾರಂಗಳ ಸ್ವಚ್ಛಗೊಳಿಸಿ ಅವುಗಳ ಸುತ್ತಲೂ ಬೆಳೆದಿದ್ದ ಗಿಡ ಗಂಟಿಗಳು ತೆರವುಗೊಳಿಸಿದ್ದಾರೆ.ಪಟ್ಟಣದ ಜೆಸ್ಕಾಂ ಎಇಇ ಅವರ ವಸತಿ ನಿಲಯ ಮೂಲೆ ಗುಂಪಾಗಿರುವುದನ್ನು ವರದಿ ಬಳಿಕೆ ಸರಿಪಡಿಸಿದ ಜೆಸ್ಕಾಂ ಅಧಿಕಾರಿ ವಸತಿ ಕಟ್ಟಡ ಸ್ವಚ್ಛಗೊಳಿಸಿ ಕಂಗೊಳಿಸುವಂತೆ ಮಾಡಿದ್ದಲ್ಲದೆ ಕಚೇರಿಯ ಸುತ್ತಲೂ ಆವರಿಸಿಕೊಂಡ ಹುಲ್ಲಿನ ಕೂಪವನ್ನು ತೆರವುಗೊಳಿಸಿ ಕ್ರಮ ಕೈಗೊಂಡಿದ್ದಾರೆ.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡದಿರುವದಕ್ಕೆ ಸಮಸ್ಯೆ ಉಲ್ಬಣಗೊಳ್ತಿದ್ದು ಸ್ಥಳೀಯ ಎಇಇ ಹಾಗೂ ಜೆಇಇಗಳು ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡುತ್ತಿರುವ ಕುರಿತಾದ ವರದಿಗೆ ಸ್ಪಂದಿಸಿದ ಇಇ ರಮೇಶ ಪಾಟೀಲ್ ಅವರು ಇಲಾಖೆಯ ಗಮನಕ್ಕೆ ತಂದು ಜಿಲ್ಲೆಗೆ ಅನ್ವಯ ವಾಗುವಂತೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿಯೇ ಕಡ್ಡಾಯವಾಗಿ ವಾಸ ಮಾಡುವ ಮೂಲಕ ಸೇವೆ ಸಲ್ಲಿಸುವಂತೆ ಆದೇಶ ಮಾಡಿರು ವುದಾಗಿ ಇಇ ರಮೇಶ ಪಾಟೀಲ್ ಅವರು ''''''''ಕನ್ನಡಪ್ರಭ''''''''ಕ್ಕೆ ಮಾಹಿತಿ ನೀಡಿದ್ದಾರೆ.ಹಿರಿ ಅಧಿಕಾರಿಗಳ ಆದೇಶಕ್ಕೆ ಕಿಮ್ಮತ್ತು ನೀಡಲಿ
ಕೇಂದ್ರ ಸ್ಥಾನದಲ್ಲಿ ಎಇಇ ಹಾಗೂ ಶಾಖಾಧಿಕಾರಿಗಳು ವಾಸ್ತವ್ಯ ಮಾಡುವುದಕ್ಕೆ ಹಿಂದೇಟು ಹಾಕಿರುವುದು ಕಂಡು ಬಂದಿದ್ದು ಜೆಸ್ಕಾಂ ಇಲಾಖೆ ಆದೇಶ ಮಾಡಿ ದರೂ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲೆ ವಾಸ್ತವ್ಯ ಮಾಡ್ತಿರುವ ಈ ಅಧಿಕಾರಿಗಳ ವರ್ತನೆಯಲ್ಲಿ ಬದಲಾವಣೆ ಆಗಬೇಕಿದೆ. ಅಧಿಕಾರಿಗಳ ತಂಡ ಕೇಂದ್ರ ಸ್ಥಾನ ಬಿಡುತ್ತಿರುವುದರಿಂದ ಕ್ಷೇತ್ರದಲ್ಲಿ ಸಾಕಷ್ಟು ಅವಾಂತರಗಳು ಹಾಗೂ ಅವಘಡಗಳು ನಡೆದಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಇಂದಿಗೂ ಸಾಕ್ಷಿ ಯಾಗಿದ್ದು, ಮೇಲಾಧಿಕಾರಿಗಳು ಈ ನಿಟ್ಟನಲ್ಲಿ ನಿಗಾ ವಹಿಸುವ ಅಗತ್ಯವಿದೆ ಅಂತಾರೆ ಸ್ಥಳೀಯ ಹೋರಾಟಗಾರರು.