ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಏಸುಕ್ರಿಸ್ತನು ಪುರ ಪ್ರವೇಶ ಮಾಡಿದ ದಿನವನ್ನು ಕ್ರೈಸ್ತರು ಕರ್ಜೂರದ ಭಾನುವಾರ ದಿನವನ್ನಾಗಿ ವಿಶ್ವದೆಲ್ಲೆಡೆ ಆಚರಿಸುತ್ತಿದ್ದು, ಇದರ ಅಂಗವಾಗಿ ತುಮಕೂರಿನಲ್ಲಿ ಪವಿತ್ರ ಕರ್ಜೂರದ ದಿನವನ್ನು ಶ್ರದ್ದಾ, ಭಕ್ತಿಯಿಂದ ಆಚರಿಸಿದರು.ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ತುಮಕೂರು ಕ್ಷೇತ್ರಾಧ್ಯಕ್ಷ ರೆವರೆಂಡ್ ಮನೋಜಕುಮಾರ್ ಮಾತನಾಡಿ, ಏಸು ಸ್ವಾಮಿಯು ಅರಸನಂತೆ ಝರೆಸುಲಮ್ ನಗರವನ್ನು ಪ್ರವೇಶ ಮಾಡಿದ ದಿನವನ್ನು ಖರ್ಜೂರದ ಗರಿಗಳ ಭಾನುವಾರ ಎಂದು ಆಚರಿಸಲಾಗುತ್ತಿದೆ. ಏಸುವಿನ ಜನನದಲ್ಲಿಯೇ ಅನಂತ ಅರಸುತನವನ್ನು ಮೂಡಣ ದೇಶದ ಪಂಡಿತರು ಗುರುತಿಸಿದರು. ಸಾಮಾನ್ಯವಾಗಿ ಇತಿಹಾಸದಲ್ಲಿ ಅರಸರು ಕುದುರೆಯನ್ನೇರಿ ಬರುವುದು ವಾಡಿಕೆ. ಆದರೆ ಏಸು ಸ್ವಾಮಿಯು ಕತ್ತೆಯ ಮರಿಯನ್ನು ಹತ್ತಿದವನಾಗಿ ಬರುತ್ತಾನೆ. ಇದರ ಅರ್ಥ ಏನೆಂದರೆ, ಆತನು ಯುದ್ಧ ವೀರನಾಗಿ ಬರುವುದಿಲ್ಲ. ಬದಲಾಗಿ ದೀನತೆಯ ಅಸರನಾಗಿ ಮಾನವಕುಲದ ಪಾಪದಿಂದ ಬಿದ್ದು ಹೋಗಿದ್ದ ದೇವ ಮಾನವ ಸಂಬಂಧವನ್ನು ಸಂಧಾನ ಮಾಡುವುದಕ್ಕಾಗಿ ಬಂದಂತ ಅರಸನಾಗಿದ್ದಾನೆ ಎಂದು ತಿಳಿಸಿದರು. ಆತನ ಗುಣಲಕ್ಷಣಗಳು ಏನೆಂದರೆ,ಆತನು ನ್ಯಾಯವಂತನು, ಸುರಕ್ಷಿತನು, ಶಾಂತಗುಣವುಳ್ಳವನು, ಸ್ವಾರ್ಥ ರಹಿತನು, ದೇವರ ಚಿತ್ತಕ್ಕೆ ಒಪ್ಪಿಸಿ ಕೊಟ್ಟವನು ಎಂದು ಅರ್ಥ ಎಂದರು. ತುಮಕೂರು ಕ್ಷೇತ್ರ ಹಾಗೂ ವೆಸ್ಲಿ ಸಭೆಯ ಸಹಯೋಗದೊಂದಿಗೆ ಮೆರವಣಿಗೆಯನ್ನು ಪ್ರತಿ ವರ್ಷವೂ ನಡೆಸುತ್ತ ಬಂದಿದ್ದೇವೆ ಎಂದರು.
ಮೆರವಣಿಗೆಯಲ್ಲಿ ವೆಸ್ಲಿ, ಟಾಮ್ಲಿನ್ ಸನ್, ಸಾಡೇಪುರ ಚರ್ಚ್ ದೇವನೂರು, ಗಿಲ್ ಚರ್ಚ್, ಶಾಂತಿ ಚರ್ಚ್ ಸ್ಪೀನ್ ಸ್ಮಾರಕ ಚರ್ಚ್, ಕುಣಿಗಲ್ ಚರ್ಚ್, ಏಸುಕೃಪಾಲಯ ಹಾಗೂ ಚರ್ಚ್ ಅನುಯಾಯಿಗಳು ಪಾಲ್ಗೊಂಡು ಪವಿತ್ರ ಖರ್ಜೂರ ಗರಿಗಳ ಭಾನುವಾರ ಮೆರವಣಿಗೆಯನ್ನು ಯಶಸ್ವಿಗೊಳಿಸಿದರು.ಈ ಮೆರವಣಿಗೆಯಲ್ಲಿ ಉಪಾಧ್ಯಕ್ಷ, ಸುಧೀರ್, ಮಾರ್ಗನ್ ಸಂದೇಶ, ವಿಕ್ಟರ್ ಹೆಬಿಕ್, ಎಲಿಜಬೆತ್, ಮಿಥುನ್‌ಕುಮಾರ್, ಸುನೀತ್, ಶ್ವೇತಾ, ಇಮ್ಯಾನುವೆಲ್ ಜಾನ್ಸಿ, ಸ್ಯಾಮುವೆಲ್, ಸಂಜಯ್, ಶಾಂಶನ್, ಎರಿಯಾ ಖಜಾಂಚಿ ಸಾವಂತ್, ಕುಸುಮಾಂಜಲಿ, ಕ್ರೈಸ್ತ ಮುಖಂಡರುಗಳಾದ ಸಂಜೀವಕುಮಾರ್,ಯೇಸುದಾಸ್, ನರೋನಅಬ್ರಹಾಂ, ಅನಿಲ್ ಕುಮಾರ್, ಡಾ.ನಿಯೆಲ್, ಶೇಖರ್, ಎಡ್ವಿನ್, ಪಿಲೀಪ್, ಜಾನ್ ಸುರೇಶಬಾಬು, ಹೇಮಂತ್ ಇತರರಿದ್ದರು.