ಪಟ್ಟಣದಲ್ಲಿ ಮಾ.17ರಂದು ಮೋಹನ್ ಎನ್‌ಕ್ಲೇವ್ ಮಾಲೀಕ ಎಚ್.ಬಿ.ಮೋಹನ್ ಮನೆಯಲ್ಲಿ ಕಳವಾಗಿದ್ದ 109 ಗ್ರಾಂ ತೂಕದ ಒಟ್ಟು ₹5.5 ಲಕ್ಷ ಮೌಲ್ಯದ ಒಡವೆಗಳ ಸಮೇತ ಹೊನ್ನಾಳಿ ಪೊಲೀಸರು ಆರೋಪಿ, ಶಿಕಾರಿಪುರ ತಾಲೂಕಿನ ಚುರ್ಚುಗುಂಡಿ ಗ್ರಾಮದ ಶಿವರಾಜ ಎಂಬಾತನನ್ನು ಒಂದೇ ದಿನದಲ್ಲಿ ಬಂಧಿಸಿದ್ದಾರೆ.

- ಶಿಕಾರಿಪುರದ ಶಿವರಾಜ್ ಆರೋಪಿ: ಸ್ಯಾಮ್ ವರ್ಗೀಸ್ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದಲ್ಲಿ ಮಾ.17ರಂದು ಮೋಹನ್ ಎನ್‌ಕ್ಲೇವ್ ಮಾಲೀಕ ಎಚ್.ಬಿ.ಮೋಹನ್ ಮನೆಯಲ್ಲಿ ಕಳವಾಗಿದ್ದ 109 ಗ್ರಾಂ ತೂಕದ ಒಟ್ಟು ₹5.5 ಲಕ್ಷ ಮೌಲ್ಯದ ಒಡವೆಗಳ ಸಮೇತ ಹೊನ್ನಾಳಿ ಪೊಲೀಸರು ಆರೋಪಿ, ಶಿಕಾರಿಪುರ ತಾಲೂಕಿನ ಚುರ್ಚುಗುಂಡಿ ಗ್ರಾಮದ ಶಿವರಾಜ ಎಂಬಾತನನ್ನು ಒಂದೇ ದಿನದಲ್ಲಿ ಬಂಧಿಸಿದ್ದಾರೆ.

ಹೊನ್ನಾಳಿ ಠಾಣೆಯಲ್ಲಿ ಈ ಕುರಿತು ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು. ಪಟ್ಟಣದ ಸರ್ವರ್‌ ಕೇರಿಯ ನಿವಾಸಿ ಮೋಹನ್ ಎಂಬವರ ಮನೆಯವರೆಲ್ಲರೂ ಬೆಂಗಳೂರಿಗೆ ಹೋಗಿದ್ದರು. ಆ ಸಮಯದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಶಿಕಾರಿಪುರ ತಾಲೂಕಿನ ಚುರ್ಚುಗುಂಡಿ ಗ್ರಾಮದ ಶಿವರಾಜ್ ಹೆಂಚು ತೆಗೆದು ಮನೆಯೊಳಗೆ ಇಳಿದಿದ್ದಾನೆ. ಮೋಹನ್ ಅವರ ಸೊಸೆ ಸಾಗರೀಕಗೆ ಸೇರಿದ ತಾಳಿಸರ, ಬ್ರೇಸ್‌ಲೈಟ್, ಮುತ್ತುಗಳ್ಳುಳ್ಳ ಬಂಗಾರದ ಚೈನ್, ಆರು ಜೊತೆ ಕಿವಿಯೋಲೆ ಹಾಗೂ ಉಂಗುರ ಸೇರಿ ಒಟ್ಟು 109 ಗ್ರಾಂ ತೂಕದ ಬಂಗಾರ ಹಾಗೂ 25 ಗ್ರಾಂನ ಕಾಲ್‌ಚೈನ್‌ ಕದ್ದಿದ್ದನು.

ಸಾಗರೀಕ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಇನ್‌ಸ್ಪೆಕ್ಟರ್‌ ಸುನೀಲ್‌ಕುಮಾರ್ ಪ್ರಕರಣದಲ್ಲಿ ವಿಶೇಷ ಗಮನಹರಿಸಿ, ತನಿಖಾ ತಂಡ ರಚನೆ ಮಾಡಿದ್ದರು. ತಂಡವು ಘಟನೆ ನಡೆದ 24 ತಾಸಿನೊಳಗೆ ಆರೋಪಿಯನ್ನು ಬಲೆಗೆ ಕೆಡವಿದೆ.

ಪ್ರಶಂಸೆ:

ಒಡವೆ ಕಳ್ಳನನ್ನು ಒಂದೇ ದಿನದೊಳಗೆ ಪತ್ತೆ ಹಚ್ಚಿದ ಹೊನ್ನಾಳಿ ಪೊಲೀಸ್‌ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್, ಪಿಎಸ್‌ಐ ಕುಮಾರ್, ಎಎಸ್‌ಐ ಹರೀಶ್ ತಂಡಕ್ಕೆ ದಾವಣಗೆರೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಎಎಸ್‌ಪಿಗಳಾದ ವಿಜಯಕುಮಾರ್ ಸಂತೋಷ್, ಸ್ಯಾಂ ವರ್ಗಿಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆ ತಂಡದಲ್ಲಿ ಬೆರಳು ಮುದ್ರೆ ಘಟಕದ ಸಿಪಿಐ ಇಸ್ಮಾಯಿಲ್, ಎಎಸ್‌ಐ ಹರೀಶ್, ಸಿಬ್ಬಂದಿ ಜಗದೀಶ್, ರವಿ, ರಾಜಶೇಖರ್, ಸುರೇಶ್‌ ನಾಯ್ಕ್, ಅಕ್ತರ್, ಮಹೇಂದ್ರ ನಂಜಪ್ಪನವರ, ವೀರೇಶ್, ನಾಗರಾಜ್ ಇತರರು ಇದ್ದರು.

- - - -19ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಪಟ್ಟಣದಲ್ಲಿ ಮೋಹನ್ ಎನ್‌ಕ್ಲೇವ್ ಮಾಲೀಕರ ಮನೆಯಲ್ಲಿ ಒಡವೆಗಳನ್ನು ಕದ್ದ ಕಳ್ಳನನ್ನು ಒಂದೇ ದಿನದೊಳಗೆ ಹೊನ್ನಾಳಿ ಪೊಲೀಸರು ಬಂಧಿಸಿ, ಮಾಲು ವಶಕ್ಕೆ ಪಡೆದರು.