ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕಿಗೆ ಜೆಜೆಎಂ(ಜಲ ಜೀವನ್ ಮಿಷನ್) ಕಾಮಗಾರಿಗೆ ಕೇಂದ್ರ ಸರ್ಕಾರ 249 ಕೋಟಿರೂಗಳನ್ನು ಕೊಟ್ಟಿದೆ, ಮನೆ ಮನೆಗೆ ಕುಡಿಯುವ ನೀರನ್ನು ಕಲ್ಪಸುವ ಯೋಜನೆಯಾಗಿದ್ದು ಈ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗಬೇಕು, ಗುಣಮಟ್ಟದ ಪೈಪ್ ಬಳಸಬೇಕು, ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ಡಾ.ಕೆ.ಸುಧಾಕರ್ ಸೂಚಿಸಿದರು.ತಾಲೂಕಿನ ತಿಪ್ಪಗಾನಹಳ್ಳಿಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಮತ್ತು ನಗರದ ಬೈಪಾಸ್ ನ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ವೀಕ್ಷಣೆ ಮಾಡಿದ ಸಂಸದ ಡಾ.ಕೆ.ಸುಧಾಕರ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಅರು ಮಾಧ್ಯಮಗಳ ಜತೆ ಮಾತನಾಡಿದರು..ಬೈಪಾಸ್ ರಸ್ತೆ ಕಾಮಗಾರಿಗರದ ಹೊರವಲಯದ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ನಗರದ ಗುಂಡಾಪುರ ದಿಂದ ಕುರುಬರಹಳ್ಳಿ ಕ್ರಾಸ್ ವರೆಗೂ 6.5 ಕಿಲೋಮಿಟರ್ ನಷ್ಟು 82 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೆದ್ದಾರಿ ಕಾಮಗಾರಿಯ ವೇಗ, ಗುಣಮಟ್ಟ, ಸರ್ವಿಸ್ ರಸ್ತೆ, ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಗಳಿಗೆ ಸೂಚಿಸಿಲಾಗಿದೆ. ಆದಷ್ಟು ಶೀಘ್ರದಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು.ಪ್ರಧಾನಮಂತ್ರಿ ಅವರು ಶೌಚಾಲಯಗಳ ನಿರ್ಮಾಣ, ಉಜ್ವಲ ಯೋಜನೆ ಮುಂತಾದ ಯೋಜನೆಗಳು ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸುವ ಅಂತಹ ಕಾರ್ಯಕ್ರಮಗಳನ್ನು ಕೊಡುತ್ತಿದ್ದಾರೆ ಎಂದು ಹೇಳಿದರು.ಇದೇ ವೇಳೆ ತಹಸೀಲ್ದಾರ್ ಮಹೇಶ್. ಎಸ್.ಪತ್ರಿ, ರಾಷ್ಟ್ರೀಯ ಹೆದ್ದಾರಿ ಎಇಇ ಮಲ್ಲಿಕಾರ್ಜುನ್, ಸಹಾಯಕ ಇಂಜಿನಿಯರ್ ಗಳಾದ ವೆಂಕಟರಮಣಪ್ಪ, ರಾಜರೆಡ್ಡಿ, ಶಿವಣ್ಣ, ನವೀನ್ ಹಾಗೂ ಮುಖಂಡರಾದ ಎನ್.ಎಂ.ರವಿನಾರಾಯಣರಡ್ಡಿ, ಹೆಚ್.ಎಸ್.ಶಶಿಧರ್, ಸಿ.ಆರ್.ನರಸಿಂಹಮೂರ್ತಿ, ಬಿ.ಜಿ.ವೇಣುಗೋಪಾಲರೆಡ್ಡಿ, ಬಿ.ಎನ್.ರಂಗನಾಥ್, ನಟರಾಜ್, ಮುರಳಿಸ್ವಾಮಿ, ಮಾರ್ಕೆಟ್ ಮೋಹನ್, ರಮೇಶ್ ರಾವ್, ಪ್ರಭು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))