ಸಾರಾಂಶ
ತೊರೆಮಾವಿನಹಳ್ಳಿ, ಕರಿಗೊಂಡನಹಳ್ಳಿ ಮತ್ತು ಹರಿದಾಸನಹಳ್ಳಿಯಲ್ಲಿ ಮನೆ ಮನೆಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಜಲಜೀವನ್ ಯೋಜನೆ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ತೊರೆಮಾವಿನಹಳ್ಳಿ, ಕರಿಗೊಂಡನಹಳ್ಳಿ ಮತ್ತು ಹರಿದಾಸನಹಳ್ಳಿಯಲ್ಲಿ ಮನೆ ಮನೆಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಜಲಜೀವನ್ ಯೋಜನೆಯ ಸುಮಾರು 365 ಮನೆಗಳಿಗೆ 44 ಲಕ್ಷ ರೂ ವೆಚ್ಚದಲ್ಲಿ ನೀರು ಸರಬರಾಜು ಮಾಡಲಾಗುವ ಯೋಜನೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಹರಿದಾನಹಳ್ಳಿಯಲ್ಲಿ ಸುಮಾರು 100 ಮನೆಗಳಿಗೆ ನೀರು ಸರಬರಾಜು ಮಾಡಲಾಗುವುದು. ಇಲ್ಲಿ ಸುಮಾರು 30 ಲಕ್ಷ ರು. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ಸಹಿತ ಕಾಮಗಾರಿ ಮಾಡಲಾಗುತ್ತಿದೆ ಎಂದರು. ಕರಿಗೊಂಡನಹಳ್ಳಿಯಲ್ಲಿ ಸುಮಾರು 113 ಮನೆಗಳಿಗೆ 36 ಲಕ್ಷ ರು ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ಸಹಿತ ಕಾಮಗಾರಿ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ಈ ಸಂದರ್ಭದಲ್ಲಿ ತೊರೆಮಾವಿನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ, ಮುಖಂಡರಾದ ದೇವರಾಜು, ಈಶ್ವರಪ್ಪ, ಮಲ್ಲಿಕಾರ್ಜುನ್, ಕಾರ್ಯದರ್ಶಿ ಫರ್ಜಾನಾ, ಬಿಲ್ ಕಲೆಕ್ಟರ್ ಮೂರ್ತಿ, ಇಂಜಿನಿಯರ್ ರವಿಕುಮಾರ್, ಹರಿದಾಸನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹರೀಶ್, ಇದ್ದಲು ರಾಜಣ್ಣ, ಮಂಜುನಾಥ್, ಅಂಗಡಿ ನಾಗಣ್ಣ, ಬಾಬು, ಗುತ್ತಿಗೆದಾರರಾದ ಅನಿಲ್ ಕುಮಾರ್, ಹಂಸ ಶಶಿಧರ್, ಕೋಳಘಟ್ಟ ಸೊಸೈಟಿ ನಿರ್ದೇಶಕರಾದ ವೆಂಕಟರಾಮಯ್ಯ ಸೇರಿದಂತೆ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))