ಶರಣರ ದೃಷ್ಟಿಯಲ್ಲಿ ಗಗನವೇ ಲಿಂಗವಾಗಿತ್ತು, ಅವರು ದೇವರನ್ನು ಹೊರ ಹುಡುಕದೆ ತಮ್ಮೊಳಗೇ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಿದರು.

ಕನ್ನಡಪ್ರಭ ವಾರ್ತೆ ಮೈಸೂರುಶರಣರ ದೇವರು ಅನೂಹ್ಯ, ಅನುಪಮ, ಅನಂತ, ಆತನ ಅಗಲ ಜಗದಗಲ, ಮುಗಿಲಗಲ, ಮಿಗೆಯಗಲ, ಆತನ ಶ್ರೀಚರಣ ಪಾತಾಳದಿಂದತ್ತತ್ತ, ಆತನ ಶ್ರೀಮುಕುಟ ಬ್ರಹ್ಮಾಂಡದಿಂದತ್ತತ್ತ, ಆತ ಅಗಮ್ಯ, ಅಗೋಚರ, ಸರ್ವಾಂತರ್ಯಾಮಿ, ಒಂದೇ ಮಾತಲ್ಲಿ ಹೇಳುವುದಾದರೆ ಅರಿವೇ ಅವರ ಗುರು, ಅವರ ಇಷ್ಟಲಿಂಗವೇ ಅವರ ನಿರಾಕಾರ ದೇವರ ಸಾಕಾರ ಸ್ವರೂಪ ಎಂದು ಕವಿ ಜಯಪ್ಪ ಹೊನ್ನಾಳಿ ಹೇಳಿದರು.ನಗರದ ವಿದ್ಯಾರಣ್ಯಪುರಂನ ಜ್ಞಾನಜ್ಯೋತಿ ಪ್ರತಿಷ್ಠಾನವು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ''''''''ಶರಣರ ಪರಿಕಲ್ಪನೆಯಲ್ಲಿ ದೇವರು'''''''' ಎಂಬ ವಿಷಯ ಕುರಿತು ಅವರು ಮಾತನಾಡಿದರು.ಶರಣರ ದೃಷ್ಟಿಯಲ್ಲಿ ಗಗನವೇ ಲಿಂಗವಾಗಿತ್ತು, ಅವರು ದೇವರನ್ನು ಹೊರ ಹುಡುಕದೆ ತಮ್ಮೊಳಗೇ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಕಾಯಕದಲ್ಲೇ ಕೈಲಾಸ ಕಂಡರು, ಇವನಾರವ ಇವನಾರವನೆನ್ನದೆ, ಕೂಡಲ ಸಂಗಮನ ಮನೆಯ ಮಕ್ಕಳಾದ ಅವರು ಸಮಷ್ಟಿಯ ಹಿತದಲ್ಲೇ ತಮ್ಮ ಹಿತ ಕಾಣುವ, ದಯೆಯಿಂದಲೇ ತುಂಬಿದ, ಜೀವಕಾರುಣ್ಯದಿಂದಲೇ ತುಳುಕಿದ, ಮಮತೆಯ ಸಮತೆಯ ಮಾನವೀಯ ಧರ್ಮವನ್ನು ತಮ್ಮ ಧರ್ಮವನ್ನಾಗಿಸಿಕೊಂಡಿದ್ದಾಗಿ ಅವರು ಹೇಳಿದರು.ವಿಶ್ರಾಂತ ಪ್ರಾಧ್ಯಾಪಕಿ ಡಾ.ಸಿ.ಜಿ. ಉಷಾದೇವಿ ಶರಣರ ಪರಿಕಲ್ಪನೆಯಲ್ಲಿ ದೇವರು ಕುರಿತು ಉಪನ್ಯಾಸ ನೀಡಿದರು. ಜ್ಞಾನಜ್ಯೋತಿ ಪ್ರತಿಷ್ಠಾನದ ವಿದ್ಯಾರ್ಥಿನಿಯರು ವಚನಗಾಯನ ಸ್ಪರ್ಧೆಯಲ್ಲಿ ಸಾಮೂಹಿಕವಾಗಿ ಭಾಗವಹಿಸಿ, ಬಹುಮಾನ ಪಡೆದರು.ಮುಖ್ಯ ಅತಿಥಿಯಾಗಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್ ಭಾಗವಹಿಸಿದ್ದ ಈ ಸಮಾರಂಭದಲ್ಲಿ ದತ್ತಿ ದಾನಿಗಳಾದ ಡಾ.ಎಚ್. ಮುದ್ದುಮಲ್ಲೇಶ್, ಡಾ.ಪಿ.ಬಿ. ತ್ರಿಶೂಲಿ, ನಿಲಯ ಪಾಲಕರು, ನಿಲಯದ ಕಾರ್ಯದರ್ಶಿ ನಂಜುಂಡಸ್ವಾಮಿ, ವಸಂತ ಕುಮಾರಯ್ಯ, ರಾಕೇಶ್ ಮೊದಲಾದವರು ಇದ್ದರು.ವೀಣಾ ಮುದ್ದುಮಲ್ಲೇಶ್ ವಚನ ಗಾಯನ ಪ್ರಸ್ತುತಪಡಿಸಿದರು. ಪರಿಷತ್ತಿನ ಕಾರ್ಯದರ್ಶಿ ಬಿ.ಎನ್. ನಂದೀಶ್ವರ್ ನಿರೂಪಿಸಿದರು.