2022ರಲ್ಲಿ ಕಾರ್ಯಾರಂಭ ಮಾಡಿದ ತಳಕಲ್ಲ ಕೌಶಲ್ಯ ಕೇಂದ್ರದಲ್ಲಿ ಇದು ಪ್ರಥಮ ಉದ್ಯೋಗ ಮೇಳ ಸಹ ಆಗಿದೆ

ಕುಕನೂರು: ತಾಲೂಕಿನ ವಿಟಿಯು ಸ್ನಾತಕೋತ್ತರ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ 1ಎಂ1ಬಿ ಗ್ರೀನ್ ಸ್ಕೀಲ್ಸ್ ಅಕಾಡೆಮಿ ಸಂಯುಕ್ತದಲ್ಲಿ ಬೃಹತ್ ಉದ್ಯೋಗ ಮೇಳ ಜ. 25ರಂದು ಜರುಗಲಿದೆ. ಕಾರ್ಯಕ್ರಮವನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಉದ್ಘಾಟಿಸಲಿದ್ದಾರೆ.

ಬರೋಬ್ಬರಿ 25ಕ್ಕೂ ಅಧಿಕ ಕಂಪನಿ, ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗುತ್ತಿದ್ದು, ಆರು ಸಾವಿರ ಹುದ್ದೆ ಭರ್ತಿ ಭರವಸೆ ಇದೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪುತ್ರಿ ಮಮತಾ ರಾಯರಡ್ಡಿ ರಾಷ್ಟ್ರೀಯ ಮಟ್ಟದಲ್ಲಿ ನಾನಾ ಸಂಸ್ಥೆಯವರ ಸಹಭಾಗಿತ್ವದಲ್ಲಿ 1ಎಂ1ಬಿ ಗ್ರೀನ್ ಸ್ಕೀಲ್ ಅಕಾಡೆಮಿ ಹಾಗೂ ವಿಟಿಯು ಸ್ನಾತಕೋತ್ತರ ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ ಸಂಯೋಜನೆ ಮಾಡಿದ್ದಾರೆ.

ರಾಜ್ಯದಲ್ಲಿಯೇ ಬಹುದೊಡ್ಡ ಕೌಶಲ್ಯ ಕೇಂದ್ರ ತಳಕಲ್ಲ ಸಹ ಆಗಿದ್ದು, 2022ರಲ್ಲಿ ಕಾರ್ಯಾರಂಭ ಮಾಡಿದ ತಳಕಲ್ಲ ಕೌಶಲ್ಯ ಕೇಂದ್ರದಲ್ಲಿ ಇದು ಪ್ರಥಮ ಉದ್ಯೋಗ ಮೇಳ ಸಹ ಆಗಿದೆ. ಈಗಾಗಲೇ ಕೌಶಲ್ಯ ಕೇಂದ್ರದಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗಿದೆ.

ಕಾರ್ಯಕ್ರಮದ ಘನುಪಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸದ ಕೆ.ರಾಜಶೇಖರ ಹಿಟ್ನಾಳ, ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ವಿಪ ಸದಸ್ಯರಾದ ಶಶೀಲ ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಪಾಟೀಲ, ಹೇಮಲತಾ ನಾಯಕ ಹಾಗೂ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ತಳಕಲ್ಲ ಗ್ರಾಪಂ ಅಧ್ಯಕ್ಷೆ ಜಹೀರಾ ಬೇಗಂ ಜಾಕೀರ ಹುಸೇನ ಆಗಮಿಸಲಿದ್ದಾರೆ. ಬೆಳಗಾವಿ ವಿಟಿಯು ಕುಲಸಚಿವ ಪ್ರಸಾದ ಬಿ ರಾಂಪೂರ, ಮೌಲ್ಯಮಾಪನ ಕುಲಸಚಿವ ಡಾ. ಉಜ್ವಲ್,ವಿಟಿಯು ಹಣಕಾಸು ಅಧಿಕಾರಿ ಡಾ.ಪ್ರಶಾಂತ, ಜಿಲ್ಲಾ ಕೌಶಾಲ್ಯಾಧಿಕಾರಿ ಗವಿಶಂಕರ, ವಿಟಿಯು ಕೌಶಾಲ್ಯಾಭಿವೃದ್ಧಿ ನಿರ್ದೇಶಕಿ ಡಾ.ಸಂದ್ಯಾ ಅಣವೆಕರ್, ಜಿಲ್ಲಾ ಉದ್ಯೋಗ ಅಧಿಕಾರಿ ಮಂಜುಳಾ ಉಪ್ಪಾರ, ತರಬೇತಿ ಅಧಿಕಾರಿ ಶ್ರೀದೇವಿ, 1ಎಂ1ಬಿ ಗ್ರೀನ್ ಸ್ಕಿಲ್ ಅಕಾಡೆಮಿಯ ನಿರ್ದೇಶಕ ಅಬಿರಾಂ, ಉದ್ಯೋಗ ಮೇಳದ ಸಂಯೋಜಕಿ ಮಮತಾ ರಾಯರಡ್ಡಿ, ತಳಕಲ್ಲ ವಿಟಿಯು ಸ್ನಾತಕೋತ್ತರ ಅಧ್ಯಯನ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದ ಉಪನಿರ್ದೇಶಕ ಡಾ.ಬಸವರಾಜಪ್ಪ ವೈ.ಎಚ್,ಬೆಳಗಾವಿ ವಿಟಿಯು ಕುಲಪತಿ ಡಾ.ವಿದ್ಯಾಂಕರ ಎಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್, ಡಿಸಿ ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಕ, ಯುವತಿಯರು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದಾರೆ.