ಜೆಎಸ್‌ಎಸ್‌ ವತಿಯಿಂದ ಮಹಿಳೆಯರಿಗಾಗಿ 5ನೇ ಬಾರಿಗೆ ಮಹಿಳೆಯರ ಉದ್ಯೋಗ ಮೇಳ ಆಯೋಜಿಸುತ್ತಿದೆ. ಮೇಳದಲ್ಲಿ 18ರಿಂದ 40 ವರ್ಷದ ಮಹಿಳೆಯರು ಭಾಗವಹಿಸಬಹುದು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಸೇರಿದಂತೆ ಇನ್ನೂ ಕಡಿಮೆ ವಿದ್ಯಾರ್ಹತೆ ಪಡೆದವರಿಗೆ ಉದ್ಯೋಗ ಅವಕಾಶಗಳಿವೆ.

ಧಾರವಾಡ:

ಇಲ್ಲಿಯ ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ರ್‍ಯಾಪಿಡ್‌ ಸಂಸ್ಥೆ ಮತ್ತು ಮೂರ್ತಿ ಟ್ರಸ್ಟ್ ಆಶ್ರಯದಲ್ಲಿ ಡಿ. 14ರಂದು ಜೆಎಸ್‌ಎಸ್‌ ಆವರಣದಲ್ಲಿ ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಮಹಿಳೆಯರಿಗಾಗಿ 5ನೇ ಬಾರಿಗೆ ಮಹಿಳೆಯರ ಉದ್ಯೋಗ ಮೇಳ ಆಯೋಜಿಸುತ್ತಿದೆ. ಮೇಳದಲ್ಲಿ 18ರಿಂದ 40 ವರ್ಷದ ಮಹಿಳೆಯರು ಭಾಗವಹಿಸಬಹುದು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಸೇರಿದಂತೆ ಇನ್ನೂ ಕಡಿಮೆ ವಿದ್ಯಾರ್ಹತೆ ಪಡೆದವರಿಗೆ ಉದ್ಯೋಗ ಅವಕಾಶಗಳಿವೆ. 35ಕ್ಕೂ ಹೆಚ್ಚು ಕಂಪನಿಗಳಲ್ಲಿ ಧಾರವಾಡ-ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಎರಡು ಸಾವಿರ ಉದ್ಯೋಗ ಅವಕಾಶಗಳಿವೆ. ಆಯ್ಕೆಯಾಗುವವರಿಗೆ ₹ 8ರಿಂದ ₹ 35000 ವೇತನ ಇರಲಿದೆ. ಸಂದರ್ಶನದಲ್ಲಿ ಹಾಜರಾಗುವ ಮಹಿಳೆಯರು ತಮ್ಮ ಸ್ವ ವಿವರಗಳೊಂದಿಗೆ ಆಧಾರ್ ಕಾರ್ಡ್, ಪೋಟೋ, ಮಾರ್ಕ್ಸ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳ ಝೇರಾಕ್ಸ್ ಪ್ರತಿ ತೆಗೆದುಕೊಂಡು ಬರಬೇಕು. ಹೆಚ್ಚಿನ ಮಾಹಿತಿಗೆ 8073831784, 0836-3566952 ಅಥವಾ ಕ್ಯೂ ಆರ್ ಕೋಡ್ ಲಿಂಕ್ ಬಳಸಬಹುದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಎಸ್‌ಎಸ್‌ ಸಂಸ್ಥೆಯ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ರ್‍ಯಾಪಿಡ್‌ ಸಂಸ್ಥೆಯ ಮಾಳವಿಕ ಕಡಕೋಳ, ಪ್ರಾಚಾರ್ಯ ಮಹಾವೀರ ಉಪಾದ್ಯೆ ಇದ್ದರು.