15 ಸಾಧಕರಿಗೆ ಜೋಗಾ ಸಿಂಗ್‌ ಕಲ್ಯಾಣ ಕರ್ನಾಟಕ ಪ್ರಶಸ್ತಿ

| Published : Jan 29 2024, 01:34 AM IST

15 ಸಾಧಕರಿಗೆ ಜೋಗಾ ಸಿಂಗ್‌ ಕಲ್ಯಾಣ ಕರ್ನಾಟಕ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಲಿಂಗ ಪಟ್ಟದ್ದೇವರು, ಎಸ್.ಬಲಬೀರ ಸಿಂಗ್ ಇತರರಿಗೆ ಪ್ರದಾನ. ಬೀದರ್‌ನ ಜಿಎನ್‌ಡಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ, ಸಚಿವ ಈಶ್ವರ ಖಂಡ್ರೆ ಭಾಗಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಬೀದರ್

ಇಲ್ಲಿನ ನಾನಕ್‌ ಝಿರಾ ಸಾಹೇಬ್ ಫೌಂಡೇಷನ್ ವತಿಯಿಂದ ಗುರುನಾನಕ್‌ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ಸರ್ದಾರ್ ಜೋಗಾಸಿಂಗ್‌ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಗುರುನಾನಕ್‌ ದೇವ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 15 ಜನರಿಗೆ ಸರ್ದಾರ್ ಜೋಗಾಸಿಂಗ್‌ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಾಂದೇಡನ್ ಬಾಬಾ ಬಲವೀಂದ್ರ ಸಿಂಗ್‌ ಅವರನ್ನು ಸಮಾಜ ಸೇವಾ ಧುರಿಣ ಪ್ರಶಸ್ತಿ, ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ದಿವ್ಯ ಚೇತನ ಪ್ರಶಸ್ತಿ, ಪದ್ಮಶ್ರೀ ಎಸ್.ಬಲಬೀರ ಸಿಂಗ್ ಸಿಚೇವಾಲ್ ಸಮಾಜ ಸೇವಾ ಧುರೀಣ ಪ್ರಶಸ್ತಿ, ಪದ್ಮಶ್ರೀ ಶಾಹ ರಶೀದ ಅಹ್ಮದ ಖಾದ್ರಿ ಕೌಶಲ್ಯ ರತ್ನ ಪ್ರಶಸ್ತಿ, ಪದ್ಮಶ್ರೀ ಲಚಮಾ ಶೇಖರ ನಾಯಕ ಕ್ರೀಡಾ ರತ್ನ ಪ್ರಶಸ್ತಿ, ಡಾ.ಎಸ್. ಪರವೀಂದ್ರ ಸಿಂಗ್ ಪಸರಿಚಾ ಪ್ರಜಾ ರಕ್ಷಕಾ ಪ್ರಶಸ್ತಿ, ಸರದಾರ ಪ್ರೀತಮ ಸಿಂಗ್ ಜೀವಮಾನ ಸಾಧನೆ ಪ್ರಶಸ್ತಿ, ಶಂಕರ ಬಿದರಿ ಪ್ರಜಾ ರಕ್ಷಕ ಪ್ರಶಸ್ತಿ, ಡಾ. ರಾಜೇಂದ್ರ ಸಿಂಗ್ ಚಡ್ಡಾ ಪರೋಪಕಾರಿ ಪ್ರಶಸ್ತಿ, ರಿಯಾರ್ ಅಡ್ಮಿರಲ್ ಗುಣಿಂದರ ಸಿಂಗ್ ಗವಾಂಡಾ ಪ್ರಮುಖ ಅಲುಮಿನಿ ಪ್ರಶಸ್ತಿ, ನಿತಿನ್‌ ಕಾಮತ್‌ ತಂತ್ರೋದ್ಯಮ ಶ್ರೇಷ್ಠತೆ ಪ್ರಶಸ್ತಿ, ಡಾ. ಪೀಟರ್ ಮಚಾಡೋ ವಿದ್ಯಾವಿಕಾಸ ಪ್ರಶಸ್ತಿ, ಹ್ಯಾರಿವಿಕರ್‌ ಪ್ರಮುಖ್ಯ ಅಲುಮ್ನಿ, ಕಮಲ ಬಾಲಿ ಉದ್ಯೋಗ ರತ್ನ ಪ್ರಶಸ್ತಿ, ಡಾ. ವಿಕ್ಟರ್ ಲೋಬೋ ವಿದ್ಯಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ನಾನಕ ಝಿರಾ ಸಾಹೆಬ್ ಫೌಂಡೆಷನ್‌ನ ಅಧ್ಯಕ್ಷ ಡಾ.ಎಸ್.ಬಲಬೀರಸಿಂಗ್, ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್, ಐಎಸ್‌ಬಿಆರ್‌ನ ನಿದೇರ್ಶಕ ಡಾ. ಸಿ. ಮನೋಹರ್, ಕಾರ್ಯದರ್ಶಿ ಸರದಾರ್‌ ಗುರುನಾನಕ್‌ ಸಿಂಗ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಸಮಾಜದಲ್ಲಿ ಒಂದು ಒಳ್ಳೆಯ ಉದ್ದೇಶದಿಂದ ಬಾಳಬೇಕು ಮತ್ತು ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕು. ಇದಕ್ಕೆ ಸರದಾರ್‌ ಜೋಗಾ ಸಿಂಗ್‌ಜಿ ಒಂದು ಉದಾಹರಣೆಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಾಗಲಿ, ಸಮಾಜ ಸೇವೆ, ಆರೋಗ್ಯ ಸೇವೆ ಮತ್ತು ವಿವಿಧ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ. ಜೋಗಾ ಸಿಂಗ್ ಅವರ ಕಾರ್ಯವನ್ನು ಅವರ ಪುತ್ರನಾದ ಡಾ. ಬಲಬೀರಸಿಂಗ್ ಅವರು ಮುಂದುವರಿಸಿದ್ದಾರೆ.

ಭಗವಂತ ಖೂಬಾ, ಕೇಂದ್ರ ಸಚಿವರುಬೀದರ್‌ಗೆ ಒಂದು ಇತಿಹಾಸವಿದೆ. ಇಲ್ಲಿ ಕಾಲಕಾಲಕ್ಕೆ ಸಂತರು, ಸೂಫಿಗಳು, ಮತ್ತು ಮಹನೀಯರು ಉಪದೇ ನೀಡಿದರು. ಸುಂದರ ಸಮಾಜ ನಿರ್ಮಿಸಲು ಮಹನೀಯರ ಸೇವೆ ನೆನೆಪಿಸಿಕೊಳ್ಳಬೇಕಾಗಿದೆ. ಮತ್ತು ಅದನ್ನು ಮುಂದುವರಿಸಬೇಕಾಗಿದೆ. ನಾನಕ ಝಿರಾ ಸಾಹೇಬ್ ಫೌಂಡೇಷನ್ ಮಾಡುತ್ತಿರುವ ವಿವಿಧ ಸೇವೆಗಳು ಮೆಚ್ಚುಗೆ ಪಡುವಂತಹದ್ದಾಗಿವೆ.

ಈಶ್ವರ ಖಂಡ್ರೆ, ಅರಣ್ಯ ಸಚಿವರು