ಸಾರಾಂಶ
ನಗರದ ಶ್ರೀ ಶಿವಕುಮಾರಸ್ವಾಮೀಜಿ ಯುವಕರ ಬಳಗದಿಂದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಬಸವೇಶ್ವರ ಕಪ್ -೨೦೨೪ ಕ್ರಿಕೆಟ್ ಪಂದ್ಯಾವಳಿ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಶ್ರೀ ಶಿವಕುಮಾರಸ್ವಾಮೀಜಿ ಯುವಕರ ಬಳಗದಿಂದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಬಸವೇಶ್ವರ ಕಪ್ -೨೦೨೪ ಕ್ರಿಕೆಟ್ ಪಂದ್ಯಾವಳಿ ಚಾಲನೆ ನೀಡಲಾಯಿತು. ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಿಂದ ೩೦ಕ್ಕು ಹೆಚ್ಚು ತಂಡಗಳು ಭಾಗವಹಿಸಿದ್ದು, ಕ್ರಿಕೆಟ್ ಪಂದ್ಯಾವಳಿಗೆ ಹರವೆ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ ಹಾಗೂ ಮೂಡುಗೂರು ಮಠದ ಶ್ರೀ ಉದ್ದಾನ ಸ್ವಾಮೀಜಿ ಪಂದ್ಯಾವಳಿಗೆ ಚಾಲನೆ ನೀಡಿ, ಶುಭ ಕೋರಿದರು.
ಶ್ರೀ ಸರ್ಪಭೂಷಣಸ್ವಾಮೀಜಿ, ಕ್ರೀಡೆಗಳು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಶ್ರೀ ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಶ್ರೀ ಶಿವಕುಮಾರಸ್ವಾಮಿಗಳ ಬಳಗ ಆಯೋಜನೆ ಮಾಡಿರುವ ಕ್ರಿಕೆಟ್ ಪಂದ್ಯ ಯಶಸ್ವಿಯಾಗಲಿ, ಕ್ರೀಡಾಕೂಟವು ಪರಸ್ಪರ ಪ್ರೀತಿ, ಸಹಬಾಳ್ವೆಯನ್ನು ತೋರಿಸುತ್ತವೆ. ಸದಾ ಚಟುವಟಿಕೆಯಿಂದ ಇರಲು ಕ್ರೀಡೆಗಳ ಸಹಕಾರಿಯಾಗಿವೆ. ಸೋಲು ಗೆಲುವು ಮುಖ್ಯವಲ್ಲ. ಗೆಲುವಿಗೆ ಸಂಘಟನಾತ್ಮಕ ಸಹಕಾರ ಹಾಗೂ ಶ್ರದ್ಧೆ, ಪರಿಸರ ಬೇಕು. ಸೋತಾಗ ನಡೆಯುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನುಗ್ಗುವುದು ಜೀವನ ಪಾಠವಾಗಿದೆ. ದುಷ್ಚಟಗಳಿಂದ ದೂರವಿದ್ದು, ಸಮಾಜ, ಹುಟ್ಟಿದೂರು ಹಾಗೂ ತಂದೆತಾಯಿಗಳಿಗೆ ಪ್ರೀತಿಯನ್ನು ಗಳಿಸಿ, ಪ್ರಗತಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.ಈ ವೇಳೆ ವೀರಶೈವ ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ಡಿ.ನಾಗೇಂದ್ರ, ಖಜಾಂಚಿ ಬಸವರಾಜು, ಹಿರಿಬೇಗೂರು ಗುರುಸ್ವಾಮಿ, ಬಳಗದ ರಾಜೇಶ್ ಬೂದಂಬಳ್ಳಿ, ಮಾಯಿ ಉಡಿಗಾಲ, ವೀರನಪುರ ಸುಪ್ರೀತ್, ಮೂಡ್ಲುಪುರ ಶಂಕರ್, ಶಮಿತ್, ಗುರು, ಸಂಜು ಮೊದಲಾದವರು ಇದ್ದರು.