ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಭಾರತವನ್ನು ಕ್ಷಯ ರೋಗ ಮುಕ್ತಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಪಂ ಸಿಇಒ ಡಾ.ಪ್ರವೀಣ್.ಪಿ.ಬಾಗೇವಾಡಿ ಹೇಳಿದರು.ನಗರದ ಜಿ.ಪಂ ಸಭಾಂಗಣದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ೨೦೨೫ರಲ್ಲಿ ದೇಶವನ್ನು ಸಂಪೂರ್ಣ ಕ್ಷಯ ರೋಗ ಮುಕ್ತವಾಗಿಸುವ ಘೋಷಣೆ ಮಾಡಿದೆ, ಈ ದಿಸೆಯಲ್ಲಿ ಕಾರ್ಯ ಚಟುವಟಿಕೆಗಳೂ ನಡೆದಿವೆ ಎಂದರು.
ಜನಪ್ರತಿನಿಧಿಗಳ ಸಹಕಾರಕ್ಷಯ ರೋಗ ನಿರ್ಮೂಲನೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿಯ ಪಾತ್ರವೂ ಬಹಳ ಮುಖ್ಯ ಎಂದು ಹೇಳಿದರು.
ಡಿಎಚ್‌ಒ ಶ್ರೀನಿವಾಸ, ಮಾತನಾಡಿ, ಪ್ರಸಕ್ತ ವರ್ಷ ಕ್ಷಯ ರೋಗ ನಿಯಂತ್ರಣದಲ್ಲಿ ಜಿಲ್ಲೆ ಗಣನೀಯ ಪ್ರಗತಿ ಸಾಧಿಸಿದೆ. ಈಗ ಹ್ಯಾಂಡ್ ಹೆಲ್ಡ್ ಕ್ಷ-ಕಿರಣ ಯಂತ್ರದೊಂದಿಗೆ ರೋಗಿಗಳು ಇರುವ ಗ್ರಾಮ, ಸಂತೆ, ಜಾತ್ರೆ, ಉತ್ಸವ ಮೊದಲಾದ ಕಡೆಗೆ ಹೋಗಿ ಕ್ಷಯ ರೋಗ ತಪಾಸಣೆ ಮಾಡಲಾಗುತ್ತಿದೆ. ರೋಗ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಪೌಷ್ಠಿಕ ಆಹಾರಕ್ಕಾಗಿ ಕಡು ಬಡ ರೋಗಿಗಳ ಖಾತೆಗೆ ಹಣ ಸಹ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ತಾಲೂಕಿನ ಕ್ಷಯಮುಕ್ತ ಗ್ರಾಮಗಳುಕ್ಷಯ ರೋಗ ಮುಕ್ತ ಗ್ರಾಪಂ ಯೋಜನೆಯಡಿ ಕೋಲಾರ ತಾಲ್ಲೂಕಿನ ಅಮ್ಮನಲ್ಲೂರು, ಅರಭಿಕೊತ್ತನೂರು, ಅರಹಳ್ಳಿ, ಬೆಗ್ಲಿಹೊಸಹಳ್ಳಿ, ಬೆಳಮಾರನಹಳ್ಳಿ, ಚನ್ನಸಂದ್ರ, ಚೌಡದೇನಹಳ್ಳಿ, ಹರಟಿ, ಹೋಳೂರು, ಕ್ಯಾಲನೂರು, ಮಾರ್ಜೇನಹಳ್ಳಿ, ಸುಗಟೂರು, ಸೂಲೂರು, ತೊರದೇವಂಡಹಳ್ಳಿ. ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ, ದೊಲಪಲ್ಲಿ, ಗುಮ್ಮಕಲ್ಲು, ಹೆಚ್.ಗೊಲ್ಲಹಳ್ಳಿ, ಕೊಪ್ಪಲಮಡುಗು, ಮೊತ್ತಕಪಲ್ಲಿ, ಮುಡಿಗೆರೆ, ರಾಜೇಂದ್ರಹಳ್ಳಿ, ಉತ್ತನೂರು. ಬಂಗಾರಪೇಟೆ ತಾಲ್ಲೂಕಿನ ಎ.ಜೋತೆನಹಳ್ಳಿ, ದೊಡ್ಡೂರು, ಗುಲ್ಲಹಳ್ಳಿ, ಮಾಗೊಂದಿ ಸೇರಿದಂತೆ ೩೭ ಗ್ರಾಪಂಗಳನ್ನು ಕ್ಷಯ ರೋಗ ಮುಕ್ತ ಗ್ರಾಪಂಗಳೆಂದು ಘೋಷಿಸಿದೆ ಎಂದು ಹೇಳಿದರು. ಈ ವೇಳೆ ಜಿಲ್ಲಾ ಕ್ಷಯ ರೋಗ ನಿವಾರಣಾಧಿಕಾರಿ ಡಾ.ಜಿ.ಪ್ರಸನ್ನಕುಮಾರ್ ಇದ್ದರು.