ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಕುಷ್ಟರೋಗ ಮುಕ್ತ ದೇಶ ಮಾಡುವ ಸಂಕಲ್ಪ ಮಾಡಿರುವ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೂಡ ಸಹಕರಿಸಿ, ರೋಗಮುಕ್ತ ಭಾರತ ಮಾಡುವ ನಿರ್ಧಾರಕ್ಕೆ ಕೈಜೋಡಿಸಬೇಕು ಎಂದು ವೈದ್ಯಾಧಿಕಾರಿ ಡಾ. ಕೆ ಜೆ . ತಿಮ್ಮರಾಜು ಹೇಳಿದರು. ಅವರು ತಾಲೂಕಿನ ಗೌಡಗೆರೆ ಹೋಬಳಿಯ ಚಂಗಾವರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಕುಷ್ಟರೋಗ ನಿವಾರಣಾ ದಿನ ಹಾಗೂ ಮಹಾತ್ಮ ಗಾಂಧೀಜಿ ಹುತಾತ್ಮ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ತಾಮ್ರ ವರ್ಣದ ಮಚ್ಚೆ ಕಂಡು ಬಂದಲ್ಲಿ ಯಾವುದೇ ಸಂಕೋಚವಿಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಸಂಪರ್ಕಿಸಿ ಇದು ಕುಷ್ಟರೋಗದ ಮಚ್ಚೆಯೇ ಅಥವಾ ಬೇರೆಯೇ ಎಂಬುದನ್ನು ದೃಢಪಡಿಸಿಕೊಂಡು, ಒಂದು ವೇಳೆ ಕುಷ್ಠ ರೋಗದ ಮಚ್ಚೆ ಎಂದು ಪರೀಕ್ಷೆಯಲ್ಲಿ ದುಡಪಟ್ಟರೆ ಸೂಕ್ತ ಚಿಕಿತ್ಸೆ ಪಡೆದು ಕುಷ್ಟರೋಗದಿಂದ ಮುಕ್ತಿ ಹೊಂದಬಹುದು ಎಂದ ಅವರು ಗ್ರಾಮ ಮತ್ತು ಮನೆ ಸ್ವಚ್ಛತೆ ಕಾಪಾಡಿಕೊಂಡರೆ ರೋಗಗಳು ಹರಡುವುದಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಪೋಷಕರು ಸಹಕರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಗ್ರಾಮ ಪಂಚಾಯತಿ ಸದಸ್ಯೆ ಜಾನಕಮ್ಮ ಆನಂದ್, ಮುಖ್ಯ ಶಿಕ್ಷಕ ಪಿ. ಜಿ. ಮಂಜುನಾಥ್, ಶಿಕ್ಷಕರಾದ ಮಹಲಿಂಗಪ್ಪ, ಜಗದೀಶ್, ಮಂಜುನಾಥ ಸ್ವಾಮಿ, ನಟರಾಜು, ಫಯಿಮ್ ಉನ್ನಿಸಾ, ಸುಮಿತ್ರ, ಎಂ. ದೇವರಾಜು, ಆರೋಗ್ಯ ಇಲಾಖೆಯ ವಿಜಯಲಕ್ಷ್ಮೀ ನಿರಂಜನ್, ಲಲಿತಮ್ಮ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.