ಚಿಕ್ಕಮಗಳೂರುಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದು ಅರಸು ಜನಾಂಗ. ಮೇಲು-ಕೀಳು ಎನ್ನದೇ ಸಮಚಿತ್ತದಿಂದ ಸಾಗುವ ಮೂಲಕ ಗ್ರಾಮದ ಹಾಗೂ ಸಮಸ್ತ ಜನಾಂಗದ ಅಭಿವೃದ್ಧಿಗೆ ಕೈಜೋಡಿಸಿದೆ ಎಂದು ಜಿಲ್ಲಾ ಅರಸು ಸಂಘದ ಅಧ್ಯಕ್ಷ ಕೆ.ಜೆ. ಮಂಜುನಾಥ್‌ ರಾಜೇ ಅರಸ್ ಹೇಳಿದರು.

ಅರಸು ಭವನದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ೧೩ ಕೊಠಡಿಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದು ಅರಸು ಜನಾಂಗ. ಮೇಲು-ಕೀಳು ಎನ್ನದೇ ಸಮಚಿತ್ತದಿಂದ ಸಾಗುವ ಮೂಲಕ ಗ್ರಾಮದ ಹಾಗೂ ಸಮಸ್ತ ಜನಾಂಗದ ಅಭಿವೃದ್ಧಿಗೆ ಕೈಜೋಡಿಸಿದೆ ಎಂದು ಜಿಲ್ಲಾ ಅರಸು ಸಂಘದ ಅಧ್ಯಕ್ಷ ಕೆ.ಜೆ. ಮಂಜುನಾಥ್‌ ರಾಜೇ ಅರಸ್ ಹೇಳಿದರು.

ನಗರದ ತೇಗೂರು ಸಮೀಪದ ಅರಸು ಭವನದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ೧೩ ಕೊಠಡಿಗಳನ್ನು ಪೂಜಾ ಕೈಂಕಾರ್ಯದೊಂದಿಗೆ ಗುರುವಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಅರಸು ಭವನ ನಿರ್ಮಾಣಗೊಂಡು ಅನೇಕ ವರ್ಷಗಳು ಕಳೆದಿವೆ. ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭವನಕ್ಕೆ ಅಚ್ಚುಕಟ್ಟಾದ ಕೆಲಸವನ್ನು ಕೈ ಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಭವನದ ಆವರಣದಲ್ಲೇ ದೇಗುಲ ಮಂದಿರ ನಿರ್ಮಿಸುವ ಮೂಲಕ ಶುಭಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಶಾಸಕ ಎಚ್.ಡಿ.ತಮ್ಮಯ್ಯನವರು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದು 6-7 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಒಟ್ಟಾರೆ ಭವನ ಬಡ ಹಾಗೂ ಹಿಂದುಳಿದ ವರ್ಗದವರಿಗೆ ಶುಭ ಕಾರ್ಯ ನೆರವೇರಿಸಲು ಅನುಕೂಲ ಮಾ ಡಿಕೊಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಆನಂದ್ರಾಜ್ಅರಸ್, ಉಪಾಧ್ಯಕ್ಷ ಮೋಹನ್‌ ರಾಜ್‌ ಅರಸ್, ಟಿ.ಕೆ.ಮಂಜುನಾಥ್‌ ರಾಜೇ ಅರಸ್, ಹೊನ್ನರಾಜ್ಅರಸ್, ಸಹ ಕಾರ್ಯದರ್ಶಿಗಳಾದ ಕೃಷ್ಣಕುಮಾರ್ ಅರಸ್, ಕುಮಾರ್ ಅರಸ್, ನಿರ್ದೇಶಕರಾದ ಶಿವರಾಜ್ ಅರಸ್, ಯಲ್ಲಾರಾಜು ಅರಸ್, ಮುಕುಂದರಾಜ್ ಅರಸ್, ರಂಗರಾಜ್ ಅರಸ್, ಜಯರಾಮ್ ಅರಸ್, ಯಶೋಧರ್ ಅರಸ್, ಉಮೇಶ್ ಅರಸ್, ಲಕ್ಷ್ಮಣ್ ಅರಸ್ ಮತ್ತಿತರರಿದ್ದರು.9 ಸಿಕೆಎಂ1ತೇಗೂರು ಸಮೀಪದ ಅರಸು ಭವನದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ 12 ಕೊಠಡಿಗಳನ್ನು ಪೂಜಾಕೈಂಕಾರ್ಯದೊಂದಿಗೆ ಗುರುವಾರ ಜಿಲ್ಲಾ ಅರಸು ಸಂಘದ ಅಧ್ಯಕ್ಷ ಕೆ.ಜೆ.ಮಂಜುನಾಥ್ರಾಜೇ ಅರಸ್ ಉದ್ಘಾಟಿಸಿದರು.