ಸುರಕ್ಷಿತ ದೇಶ ನಿರ್ಮಾಣಕ್ಕೆ ಕೈ ಜೊಡಿಸಿ

| Published : Apr 23 2024, 12:54 AM IST

ಸಾರಾಂಶ

ದೇಶದಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣ ಮತ್ತು ಸದೃಢ ಭಾರತ ಕಟ್ಟಲು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೊದಿ ಅವರನ್ನು ಗೆಲ್ಲಿಸಿ. ಕಳೆದ 10 ವರ್ಷಗಳಲ್ಲಿ ದೇಶ ಸುಭದ್ರತೆ ಜೊತೆಗೆ ವಿಕಾಶಶೀಲ ದೇಶವಾಗಿ ಹೊರಹೊಮ್ಮುತ್ತಿದ್ದು, ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರನ್ನು ಗೆಲ್ಲಿಸುವ ಮೂಲಕ ಸುರಕ್ಷಿತ ದೇಶ ನಿರ್ಮಾಣಕ್ಕೆ ಕೈ ಜೊಡಿಸಿ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳ ಕಾಲಾವಧಿಯಲ್ಲಿ ಅಣ್ಣಾಸಾಹೇಬ ಜೊಲ್ಲೆಯವರು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದನೆ ನೀಡಿದ್ದಾರೆ. ಅಲ್ಲದೆ ಕೇಂದ್ರ ಹಲವು ಯೋಜನೆಗಳ ಮೂಲಕ ಕ್ಷೇತ್ರಕ್ಕೆ ಸುಮಾರು ₹8 ಸಾವಿರ ಕೋಟಿಗಳ ಅನುದಾನವನ್ನು ತರುವ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೋವಿಡ್ ಕಾಲದಲ್ಲಿ ಜನರ ಕಷ್ಟಗಳಿಗೆ ಸ್ಪಂದನೆ ನೀಡಿದ್ದಾರೆ. ಕೃಷ್ಣಾ ನದಿಗೆ ಪ್ರವಾಹ ಬಂದ ವೇಳೆ ನದಿ ತೀರದ ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳಿಗೆ ಪೂರಕವಾಗಿ ಕೆಲಸ ಮಾಡಿದ್ದು ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೆಲಸ ಮಾಡಿದ್ದು ಕೆಲಸ ಬಾರಿ ಕೆಲಸಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು. ಅನ್ನುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕನಿಷ್ಠ 25 ಸಂಸದರನ್ನು ಬಿಜೆಪಿ ಕಾರ್ಯಕರ್ತರು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ ಎಂದು ಮತದಾರರಲ್ಲಿ ಮನವಿ ಮಾಡಿದರು.

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸಿದ್ದಣ್ಣ ಮುದಕಣ್ಣವರ ಮಾತನಾಡಿ, ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಪ್ರೀ ಭಾಗ್ಯಗಳನ್ನು ಕೊಟ್ಟಿದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು, ಸರ್ಕಾರ ಸಾಲದ ಭಾರವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಚುನಾವಣೆಯಾದ ಮೇಲೆ ರಾಜ್ಯದಲ್ಲಿ ಇರುವ ಎಲ್ಲ ಗ್ಯಾರಂಟಿಗಳನ್ನು ಬಂದ್ ಮಾಡುವುದು ಖಚಿತ. ಚಿಕ್ಕೋಡಿ ಲೋಕಸಭೆ ಸದಸ್ಯರಾಗಿ ಕಳೆದ 5 ವರ್ಷಗಳನ್ನು ಕ್ಷೇತ್ರ ಅಭಿವೃದ್ಧಿಯನ್ನು ಕಂಡಿದ್ದು ಅದೇ ನಿಟ್ಟಿನಲ್ಲಿ ಮಂದಿನ 5 ವರ್ಷಗಳ ಅವಧಿಗೆ ಅಣ್ಣಾಸಾಹೇಬ ಜೊಲ್ಲೆಯವರನ್ನು ಬೆಂಬಲಿಸಿ ಗೆಲ್ಲಿಸಬೇಕಿದೆ ಎಂದು ಕೋರಿದರು.

ಈ ವೇಳೆ ಮುಖಂಡರಾದ ಉಮೇಶ ಬಂಟೋಡಕರ, ಗಿರೀಶ ಬುಟಾಳೆ, ಸಿದ್ದಪ್ಪ ಮುದಕನ್ನವರ, ದರೆಪ್ಪ ಟಕನ್ನವರ, ಪ್ರಭಾಕರ ಚವ್ಹಾನ, ರವಿ ಪೂಜಾರಿ, ಮಹಾವೀರ ಪಡನಾಡ, ಸಂತೋಷ ಕಕಮರಿ, ಪ್ರಕಾಶ ನಾಯಿಕ, ಅವೀನಾಶ ನಾಯಿಕ, ಮಹಾತೇಶ ನಾಯಿಕ, ವರ್ದಮಾನ ಹಗ್ಗೇದ, ಪರಮಾನಂದ ಧರಿಗೌಡ, ಸುಮಲತಾ ಚನ್ನಗೌಡರ, ಶಂಕುತಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.