ಕೆಎಂಸಿ ಆಸ್ಪತ್ರೆಯಲ್ಲಿ ಕೀಲು, ಮೂಳೆ ಚಿಕಿತ್ಸಾ ಹೋರರೋಗಿ ವಿಭಾಗ ಆರಂಭ

| Published : Jun 23 2024, 02:08 AM IST

ಸಾರಾಂಶ

ಹಿರಿಯ ವೈದ್ಯರುಗಳಾದ ಡಾ. ಎಂ. ಶಾಂತಾರಾಮ ಶೆಟ್ಟಿ, ಡಾ. ಬಿ. ಸೀತಾರಾಮ ರಾವ್, ಡಾ. ಉಮಾನಂದ ಮಲ್ಯ, ಡಾ. ಸುರೇಂದ್ರ ಯು. ಕಾಮತ್ ಮತ್ತು ಡಾ. ಕೆ. ರಾಮಚಂದ್ರ ಕಾಮತ್ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ನವೀಕರಿಸಿದ ಕೀಲು ಮತ್ತು ಮೂಳೆ ಚಿಕಿತ್ಸಾ ಹೊರ ರೋಗಿ ವಿಭಾಗದ ಉದ್ಘಾಟನೆಯನ್ನು ಗುರುವಾರ ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಉಪಕುಲಪತಿ ಡಾ. ಶರತ್ ಕುಮಾರ್ ರಾವ್ ಕೆ. ಉದ್ಘಾಟಿಸಿದರು. ನಿಟ್ಟೆ ವಿಶ್ವವಿಧ್ಯಾಲಯದ ಪ್ರೊ ಚಾನ್ಸೆಲರ್‌ ಡಾ. ಎಂ. ಶಾಂತರಾಮ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಎಲುಬು ಮತ್ತು ಕೀಲು ಚಿಕಿತ್ಸಾ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರುಗಳಾದ ಡಾ. ಎಂ. ಶಾಂತಾರಾಮ ಶೆಟ್ಟಿ, ಡಾ. ಬಿ. ಸೀತಾರಾಮ ರಾವ್, ಡಾ. ಉಮಾನಂದ ಮಲ್ಯ, ಡಾ. ಸುರೇಂದ್ರ ಯು. ಕಾಮತ್ ಮತ್ತು ಡಾ. ಕೆ. ರಾಮಚಂದ್ರ ಕಾಮತ್ ಅವರನ್ನು ಗೌರವಿಸಲಾಯಿತು.

ಮಂಗಳೂರು ಕೆಎಂಸಿ ಆಸ್ಪತ್ರೆಯ ಡೀನ್‌ ಡಾ. ಬಿ ಉನ್ನಿಕೃಷ್ಣನ್, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಜಾನ್ ರಾಮಪುರಂ, ಡಾ. ಆತ್ಮಾನಂದ ಎಸ್. ಹೆಗ್ಡೆ ಇದ್ದರು.

ಎಲುಬು ಮತ್ತು ಕೀಲು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಆತ್ಮಾನಂದ ಎಸ್. ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಡಾ. ಪ್ರೇಮ್ಜೀತ್ ಸುಜೀರ್ ವಂದಿಸಿದರು. ಎಲುಬು ಮತ್ತು ಕೀಲು ಚಿಕಿತ್ಸಾ ವಿಭಾಗದ ಡಾ. ವಿಹಾರ್ ಜೋಶಿ ನಿರೂಪಿಸಿದರು.