ಸಾರಾಂಶ
ತುಮಕೂರು: ನಗರದ ಎಂ.ಜಿ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಿಜ್ಞಾನ ಕಾಲೇಜು ಬಾಲಕರ ವಿದ್ಯಾರ್ಥಿನಿಲಯಕ್ಕೆ ಅಪರಿಚಿತ ವ್ಯಕ್ತಿಗಳು ನುಗ್ಗಿ ದಾಂಧಲೆ ನಡೆಸಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಹಿತಿ ನೀಡಿದ ಅಧಿಕಾರಿಗಳು ವಿದ್ಯಾರ್ಥಿ ನಿಲಯದಲ್ಲಿದ್ದ ವಾರ್ಡನ್, ರಾತ್ರಿ ಕಾವಲುಗಾರರು ಹಾಗೂ ವಿದ್ಯಾರ್ಥಿಗಳನ್ನು ವಿಚಾರಿಸಿ ವಿದ್ಯಾರ್ಥಿಗಳಿಂದ ಹೇಳಿಕೆ ಪಡೆಯಲಾಗಿದೆ. ನಿಲಯ ಪಾಲಕರು ರೂ.ನಂ:17ರಲ್ಲಿ ವಾಸ್ತವ್ಯವಿದ್ದ ವಿದ್ಯಾರ್ಥಿಗಳಾದ ನಾಗರಾಜು ಜಿ.ಹೆಚ್, ಗೋಪಲ್‌ರೆಡ್ಡಿ ಹಾಗೂ ರವಿಚಂದ್ರ ಅವರನ್ನು ಕಚೇರಿಗೆ ಕರೆಸಿ ನಿಮ್ಮ ಕೊಠಡಿಯಲ್ಲಿ ಯಾರದಾರು ಅಪರಿಚತರು ಇದ್ದಾರೆಯೇ ಎಂದು ಕೇಳಿದ್ದು ಆಗ ನಾವು ಯಾರು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ನಂತರ ಪೊಲೀಸ್ ರವರು ಒಬ್ಬ ವ್ಯಕ್ತಿಯ ಭಾವ ಚಿತ್ರವನ್ನು ತೋರಿಸಿ ಇವರು ಏನಾದರೂ ತಮ್ಮ ಕೊಠಡಿಗೆ ಬಂದಲ್ಲಿ ನಮಗೆ ಮಾಹಿತಿ ನೀಡಲು ತಿಳಿಸಿ ಅವರನ್ನು ತಮ್ಮ ಕೊಠಡಿಗೆ ವಾಪಸ್ಸು ಕಳುಹಿಸಿಕೊಡಲಾಗಿದೆ. ವಿವಿಧ ಸಾಮಾಜಿಕ ಜಾಲ ತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು ಯಾವುದೇ ರೀತಿಯ ಚಟುವಟಿಕೆಗಳು ನಿಲಯದಲ್ಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ.