ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಯಾವುದೇ ಸಹಕಾರಿ ಸಂಸ್ಥೆಯಾಗಲಿ ಅಥವಾ ವ್ಯಕ್ತಿಯಾಗಲಿ ಅವರಲ್ಲಿ ಪರಿವರ್ತನೆ ಬಹಳ ಮುಖ್ಯ. ಬದಲಾವಣೆಯ ಮೂಲಕವೇ ಪ್ರಗತಿಯು ತನ್ನ ನಿಜವಾದ ದಿಕ್ಕನ್ನು ಪಡೆಯುತ್ತದೆ ಎಂದು ನೀಡಸೋಶಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.ನಿಪ್ಪಾಣಿ ನಗರದ ಹೊರವಲಯದಲ್ಲಿರುವ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ 2024-25ನೇ ಸಾಲಿನ ಹಬೆಜನಕದ ಅಗ್ನಿಪ್ರದಿಪನ ನೆರವೇರಿಸಿ ಮಾತನಾಡಿ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಕಳೆದ ಹಲವು ವರ್ಷಗಳಿಂದಲೂ ನಾನು ಗಮನಿಸುತ್ತಿದ್ದೇನೆ, ಕಾರ್ಖಾನೆಯಲ್ಲಿ ಅಮೂಲಾಗ್ರ ಸುಧಾರಣೆಗಳೊಂದಿಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಎಥೆನಾಲ್ ಘಟಕದ ಜತೆಗೆ ಕಾರ್ಖಾನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆ ನಿಜವಾದ ಅರ್ಥದಲ್ಲಿ ಪ್ರಗತಿಯ ದಿಕ್ಕನ್ನು ಪಡೆದಿದೆ ಎಂದು ಅಭಿಪ್ರಾಯಪಟ್ಟರು.ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಸಹಕಾರಿ ಕ್ಷೇತ್ರದ ಹಲವು ಸಂಸ್ಥೆಗಳಿಗೆ ಶಕ್ತಿ ತುಂಬಿದ್ದಾರೆ. ಸಹಕಾರಿ ಸಂಘಗಳ ಚಿಕ್ಕ ಸಸಿಗಳನ್ನು ನೆಟ್ಟು ಆಲದ ಮರವನ್ನಾಗಿ ಪರಿವರ್ತಿಸಿದ್ದಾರೆ. ಕಟ್ಟುನಿಟ್ಟಿನ ನಿರ್ವಹಣೆ ಮತ್ತು ಪ್ರಾಮಾಣಿಕ ಸೇವೆಯಿಂದ ಮಾತ್ರ ಇದು ಸಾಧ್ಯವಾಗಿದೆ. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಈ ಭಾಗದ ಕಬ್ಬು ಬೆಳೆಗಾರ ರೈತರಿಗೆ, ಸದಸ್ಯರಿಗೆ ಹಾಗೂ ಕಾರ್ಮಿಕರಿಗೆ ವರದಾನವಾಗಿದ್ದಲ್ಲದೆ, ಅವರ ಹಿತಾಶಕ್ತಿಗಳನ್ನು ಪೋಷಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದ ಅಗ್ರಗಣ್ಯ ಕಾರ್ಖಾನೆಯಾಗಿ ಗುರುತಿಸಲ್ಪಡಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಎಂ.ಪಿ.ಪಾಟೀಲ, ಮುಚ್ಚುವ ಸ್ಥಿತಿಯಲ್ಲಿದ್ದ ಕಾರ್ಖಾನೆಗೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಚೈತನ್ಯ ಬಂದಿದೆ. ಕಳೆದ ವರ್ಷ ಕಾರ್ಖಾನೆಯ ಮೂಲಕ 7 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದ್ದು, ಈ ಅವಧಿಯಲ್ಲಿ 10 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. 15 ದಿನಕ್ಕೊಮ್ಮೆ ಕಬ್ಬಿನ ಬಿಲ್ ಪಾವತಿಸುವ ಮೂಲಕ ಕಾರ್ಖಾನೆ ಇತಿಹಾಸ ಸೃಷ್ಟಿಸಿದೆ. ಕಾರ್ಖಾನೆಗೆ ಹೆಚ್ಚಿನ ಕಬ್ಬು ಕಳುಹಿಸಿ ಬರುವ ಹಂಗಾಮು ಯಶಸ್ವಿಗೊಳಿಸಿ ಎಂದು ಸಲಹೆ ನೀಡಿದರು.ಬೆಳಗ್ಗೆ ನಿರ್ದೇಶಕ ವಿನಾಯಕ ಪಾಟೀಲ ಪೂಜೆ ನೆರವೇರಿಸಿದರು. ನಂತರ ಅಪ್ಪಾಚಿವಾಡಿ ಶ್ರೀ ಹಾಲಸಿದ್ಧನಾಥ ದೇವಸ್ಥಾನದ ವಾಲಂಗವನ್ನು ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು.
ಉಪಾಧ್ಯಕ್ಷ ಪವನ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ರಾಮಗೊಂಡ ಪಾಟೀಲ, ಸಮಿತ ಸಾಸನೆ, ಜಯಕುಮಾರ ಖೋತ, ಪ್ರಕಾಶ ಶಿಂಧೆ, ರಮೇಶ ಪಾಟೀಲ, ರಾವಸಾಹೇಬ ಫರಾಳೆ, ಶರದ್ ಜಾಂಗಟೆ, ಸುಹಾಸ ಗೂಗೆ, ಗೀತಾ ಪಾಟೀಲ, ರಾಜು ಗುಂದೆಶಾ, ಮಹಾಲಿಂಗ ಕೋಠಿವಾಲೆ, ಮಿಥುನ ಪಾಟೀಲ, ಸರ್ಜೇರಾವ ಪಾಟೀಲ, ಶ್ರೀಕಾಂತ ಕನಗಲಿ, ಯೂನಸ್ ಮುಲ್ಲಾನಿ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಕಿರಣ ನಿಕಾಡೆ, ರೈತರು, ಸದಸ್ಯರು, ಸಿಬ್ಬಂದಿ ಇದ್ದರು. ನಿರ್ದೇಶಕ ಶ್ರೀಕಾಂತ ಬನ್ನೆ ಸ್ವಾಗತಿಸಿದರು. ನಿರ್ದೇಶಕ ಜಯವಂತ ಭಾಟಲೆ ವಂದಿಸಿದರು.