ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆಸ್ವಾಮೀಜಿಗಳು, ಲಿಂಗಾಯತರ ಬಗ್ಗೆ ಹಿಂದಿನಿಂದಲೂ ಪ್ರಹ್ಲಾದ ಜೋಷಿ ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯುವುದರಲ್ಲಿ ಜೋಷಿ ಪ್ರಮುಖ ಪಾತ್ರ ವಹಿಸಿದವರು ಎಂದು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದರು. ಮಂಗಳವಾರ ಹರಿಹರದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ನಾಯಕರನ್ನು ತುಳಿಯುವುದರಲ್ಲಿ ಪ್ರಹ್ಲಾದ ಜೋಷಿಯ ಅವರದ್ದು ಪ್ರಮುಖ ಪಾತ್ರವಿದೆ. ಆ ಭಾಗದ ಎಲ್ಲ ಸಮುದಾಯಗಳ ಜನರು ಸಹ ನನ್ನ ರಾಜಕೀಯ ಪ್ರವೇಶ ಸ್ವಾಗತಿಸಿದ್ದಾರೆ ಎಂದರು.
ಬ್ರಾಹ್ಮಣ ಸಮಾಜದವರು ಸಹ ಅತ್ಯಂತ ಪ್ರಮುಖವಾಗಿ ನಮ್ಮ ರಾಜಕೀಯ ಪ್ರವೇಶ ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ. ಸಮಾಜ ಸೇವೆಗೆ ಹೆಚ್ಚಿನ ಅವಕಾಶಕ್ಕೆ ಭಕ್ತರು ಸ್ಪಂದಿಸಲಿದ್ದು, ಅಂತಹ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ. ನಾನು ಬಿಜೆಪಿ ಬಂಡಾಯ ಅಲ್ಲ, ಕಾಂಗ್ರೆಸ್ ಪಕ್ಷದ ಬಂಡಾಯನೂ ಅಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.ಧಾರವಾಡ ಕ್ಷೇತ್ರದಲ್ಲಿ ಚುನಾವಣೆ ಫಿಕ್ಸಿಂಗ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಹ್ಲಾದ ಜೋಷಿಯೇ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಹ ಘೋಷಣೆ ಸಹ ಮಾಡಿಸಿದ್ದಾರೆಂದು ಕ್ಷೇತ್ರದ ಜನರೇ ಮಾತನಾಡುತ್ತಿದ್ದಾರೆ. ಈ ಎರಡೂ ಪಕ್ಷಗಳ ಜನರು ನನ್ನನ್ನು ಬಯಸಿ, ಬೆಂಬಲಿಸುತ್ತಿದ್ದಾರೆ. ಲಿಂಗಾಯತ ನಾಯಕರು, ಸ್ವಾಮೀಜಿಗಳ ಬಗ್ಗೆ ಹಿಂದಿನಿಂದಲೂ ಜೋಷಿ ಅಪಪ್ರಚಾರ ಮಾಡುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಅವರು ದೂರಿದರು.
- - - ಬಾಕ್ಸ್ದಿಂಗಾಲೇಶ್ವರ ಸ್ವಾಮೀಜಿಗೆ ಬೆಂಬಲಿಸಲು ಸಭೆ: ವಚನಾನಂದ ಶ್ರೀ
ದಾವಣಗೆರೆ: ಕಲುಷಿತಗೊಂಡ ರಾಜಕೀಯದ ಶುದ್ಧೀಕರಣಕ್ಕಾಗಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ಧಿಸುವುದನ್ನು ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸ್ವಾಗತಿಸಿದ್ದಾರೆ.ಹರಿಹರದ ಪೀಠಕ್ಕೆ ಮಂಗಳವಾರ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತದಂತೆ ಕರ್ನಾಟಕದಲ್ಲೂ ಮಠಾಧೀಶರು ರಾಜಕಾರಣಕ್ಕೆ ಬರಬೇಕಿದೆ. ರಾಜಕಾರಣದಲ್ಲಿ ಬೇರೂರಿಸುವ ಅಶುದ್ಧಿಯನ್ನು ಶುದ್ಧಿ ಮಾಡಲಿಕ್ಕೆ ಪರಮಪೂಜ್ಯರು ಬಹಳ ಯೋಗ್ಯರು ಎಂಬುದಾಗಿ ನನಗೆ ಅನಿಸುತ್ತಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಆ ಭಾಗದಲ್ಲಿ ಲಿಂಗಾಯತ ನಾಯಕರನ್ನು ತುಳಿಯುವಂತಹ ಕೆಲಸ ಮಾಡಿದ್ದಾರೆ. ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ ಎಂದು ಅವರು ತಿಳಿಸಿದರು. ಪಂಚಮಸಾಲಿ ಸಮುದಾಯವು ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಬೆಂಬಲ ನೀಡುವ ವಿಚಾರದ ಬಗ್ಗೆ ಶೀಘ್ರವೇ ಧಾರವಾಡ ಜಿಲ್ಲೆಯಲ್ಲಿ ಸಭೆ ಮಾಡಿ, ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಅವರು ಪ್ರತಿಕ್ರಿಯಿಸಿದರು.- - --10ಕೆಡಿವಿಜಿ1, 2, 3:ಹರಿಹರದ ಪಂಚಮಸಾಲಿ ಪೀಠಕ್ಕೆ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ನೀಡಿ, ಶ್ರೀ ವಚನಾನಂದ ಸ್ವಾಮೀಜಿ ಜೊತೆ ಚರ್ಚಿಸಿದರು.