ತುಮಕೂರು : ರೈಲಿಗೆ ಸಿಲುಕಿ ಪತ್ರಕರ್ತ ಹಾಗೂ ಲೇಖಕ ನಾಗೇಶ್ ಗುಬ್ಬಿ ಸಾವು - ಘಟನೆ ಬಗ್ಗೆ ಹಲವು ಶಂಕೆ

| Published : Sep 28 2024, 01:25 AM IST / Updated: Sep 28 2024, 12:41 PM IST

ಸಾರಾಂಶ

ಪತ್ರಕರ್ತ ಹಾಗೂ ಲೇಖಕ ನಾಗೇಶ್ ಗುಬ್ಬಿ ಅವರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಗುರುವಾರ ಸಂಜೆ ಮನೆಗೆ ದಿನಸಿ ತರಲೆಂದು ಹೋದ ನಾಗೇಶ್ ಗುಬ್ಬಿ ಅವರು ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

  ತುಮಕೂರು  : ಪತ್ರಕರ್ತ ಹಾಗೂ ಲೇಖಕ ನಾಗೇಶ್ ಗುಬ್ಬಿ ಅವರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.ಗುರುವಾರ ಸಂಜೆ ಮನೆಗೆ ದಿನಸಿ ತರಲೆಂದು ಹೋದ ನಾಗೇಶ್ ಗುಬ್ಬಿ ಅವರು ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಪೋಷಕರು ನಾಗೇಶ್‌ ಸಹೋದರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ರೈಲಿಗೆ ಸಿಲುಕಿದ ವಿಷಯ ಬಹಿರಂಗಗೊಂಡಿದೆ. 

ಕೂಡಲೇ ರೈಲ್ವೆ ಪೊಲೀಸರು ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಶುಕ್ರವಾರ ಸಂಜೆ ಗಾರ್ಡನ್ ರಸ್ತೆಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ ಎಂಬುದು ಖಚಿತವಾಗಿಲ್ಲ. 44 ವರ್ಷ ವಯಸ್ಸಿನ ನಾಗೇಶ್ ಗುಬ್ಬಿ ಅವಿವಾಹಿತರಾಗಿದ್ದು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.