ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಇತ್ತೀಚೆಗೆ ಅಗಲಿದ ಪತ್ರಕರ್ತರಿಗೆ ಶುಕ್ರವಾರ ಸಂತಾಪ ಸಭೆ ಏರ್ಪಡಿಸಿ ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ಸಭೆಯಲ್ಲಿ ಮಾತನಾಡಿದ ಗಣ್ಯರು, ‘ಸುದ್ದಿಮನೆಯ ಒತ್ತಡಗಳಿಗೆ ಪತ್ರಕರ್ತರ ಆಯಸ್ಸು ಕುಗ್ಗುತ್ತಿದೆ. ಇದು ನೋವಿನ ಸಂಗತಿ’ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಂದಾಯ ಭವನದಲ್ಲಿರುವ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಇತ್ತೀಚೆಗೆ ಅಗಲಿದ ಪತ್ರಕರ್ತರಾದ ಬೀದರನ ನಾಗಶೆಟ್ಟಿ ಧರಂಪುರ, ಸಂಜೆವಾಣಿ ದೊಡ್ಡಬೊಮ್ಮಯ್ಯ, ಸಂಯುಕ್ತ ಕರ್ನಾಟಕದ ಭೀಮಸೇನ ಪದಕಿ, ಬೆಳಗಾವಿಯ ಎಂ.ಎನ್.ಪಾಟೀಲ, ಸಕಲೇಶಪುರದ ಎಂ.ಎನ್.ಶಿವಕುಮಾರ್, ಪ್ರಜಾವಾಣಿಯ ಬಾವು ಪತ್ತಾರ, ಕಲಬುರ್ಗಿ ಪ್ರಭುಲಿಂಗ ನೀಲೂರೆ, ರಾಯಚೂರು ನಹೀಮ್ ಅಶ್ರ್, ಮೈಸೂರಿನ ಸೂರಜ್, ವಿಜಯಪುರದ ಧಾವಲ್ ಘೋರ್ಪಡೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಪತ್ರಕರ್ತರ ವೃತ್ತಿ ಬದುಕು ಕಷ್ಟದಿಂದ ಕೂಡಿದೆ ಎನ್ನುವುದು ಎಲ್ಲರಿಗೂ ಗೊತ್ತು. ಹಲವು ಕಾರಣಗಳಿಗೆ ಕಡಿಮೆ ವಯಸ್ಸಿನಲ್ಲಿಯೇ ಬದುಕು ಅಂತ್ಯವಾಗುವುದು ನೋವಿನ ಸಂಗತಿ. ಅವರ ಸಹಾಯಕ್ಕಾಗಿ ತಮ್ಮ ನಿವೃತ್ತಿ ವೇತನದ ತಿಂಗಳ ಹಣವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಕಳುಹಿಸಿಕೊಡುವುದಾಗಿ ಪ್ರಕಟಿಸಿದರು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮಾಜಿ ಅಧ್ಯಕ್ಷ ವಿ.ವೆಂಕಟೇಶ್, ರಾಜ್ಯ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ, ಕೋಲಾರವಾಣಿ ಸಂಪಾದಕ ಮುರುಳಿಧರ್ ಇದ್ದರು.