ನ.9ರಂದು ಪತ್ರಕರ್ತರ ಸಂಘದ ಚುನಾವಣೆ; 45 ಮಂದಿ ಕಣದಲ್ಲಿ: ಶಿವನಂಜಯ್ಯ

| Published : Oct 31 2025, 02:00 AM IST

ಸಾರಾಂಶ

ಕಾರ್ಯನಿರತ ಪತ್ರಕರ್ತರ ಸಂಘದ ಮಂಡ್ಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಸ್ಥಾನಗಳಿಗೆ ನ.9ರಂದು ಚುನಾವಣೆ ನಡೆಯಲಿದೆ. ಅಂತಿಮವಾಗಿ 45 ಮಂದಿ ಸ್ಪರ್ಧಾಕಣದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಸ್ಥಾನಗಳಿಗೆ ನ.9ರಂದು ಚುನಾವಣೆ ನಡೆಯಲಿದೆ. ಅಂತಿಮವಾಗಿ 45 ಮಂದಿ ಸ್ಪರ್ಧಾಕಣದಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿವನಂಜಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಘಟಕದ 24 ಹಾಗೂ ಒಂದು ರಾಜ್ಯ ಕಾರ್ಯಕಾರಿ ಸಮಿತಿ ಸ್ಥಾನಗಳಿಗೆ ಒಟ್ಟು 83 ನಾಮಪತ್ರಗಳ ಸಲ್ಲಿಕೆಯಾಗಿದ್ದವು. ಅ.30ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾದ ಗುರುವಾರ ಕೆಲವರು ಸ್ಪರ್ಧೆಯಿಂದ ಹಿಂದೆ ಸರಿದು ಅಂತಿಮವಾಗಿ 45 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ ಎಂದರು.

ಅಧ್ಯಕ್ಷ ಸ್ಥಾನಕ್ಕೆ ಜೆ.ಎಂ.ಬಾಲಕೃಷ್ಣ ಹಾಗೂ ಕೆ.ಎನ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಡಿ.ಶಶಿಧರ, ಕೆ.ಶಂಭುಲಿಂಗೇಗೌಡ, ಖಜಾಂಚಿ ಸ್ಥಾನಕ್ಕೆ ಎಲ್.ಸಿದ್ದರಾಜು, ಆರ್.ಎನ್.ನಂಜುಂಡಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ರವಿ ಸಾವಂದಿಪುರ, ಸಿ.ಎ.ಲೋಕೇಶ್, ಸಿ.ಎಸ್.ಉಮೇಶ್, ಕೆ.ಸಿ.ಮಂಜುನಾಥ್, ಎ.ಎಲ್.ಸತೀಶ್ (ಅಣ್ಣೂರು ಸತೀಶ್), ನವೀನ, ರವಿ.ಕೆ (ರವಿ ಲಾಲಿಪಾಳ್ಯ), ಕಾರ್ಯದರ್ಶಿ ಸ್ಥಾನಕ್ಕೆ ಎಚ್.ಕೆ.ಅಶ್ವಥ್, ಕೆ.ಎನ್.ನಾಗೇಗೌಡ, ಎನ್.ನಾಗರಾಜು, ಶಿವರಾಜು ಎಚ್. ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಹುದ್ದೆಗೆ ಸಿ.ಎನ್.ಮಂಜುನಾಥ್ ಹಾಗೂ ಎಚ್.ಬಿ.ಸುನೀಲ್‌ಕುಮಾರ್ ಸ್ಪರ್ಧಿಸಿದ್ದಾರೆ ಎಂದರು.

ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಅಶೋಕ್.ಎನ್, ಆನಂದ.ಸಿ, ಚೇತನ್‌ಕುಮಾರ್.ಎ.ಬಿ, ದೀಪಕ್.ಸಿ.ಎಸ್, ಹೇಮಂತ್‌ರಾಜ್.ಆರ್‌ಎಸ್, ಕೆ.ಎನ್.ಪುಟ್ಟಲಿಂಗೇಗೌಡ, ಕೃಷ್ಣ.ಎ, ಕುಮಾರಸ್ವಾಮಿ, ಎಂ.ಜಯಶಂಖರ್ (ಜಯಣ್ಣ), ಮೋಹನ್‌ಕುಮಾರ್, ನಾಗೇಶ.ಎಂ, ಪುಟ್ಟಸ್ವಾಮಿ.ಎಸ್, ರವಿಕುಮಾರ್.ಎಂ.ಸಿ, ರವಿನಂದನ್.ಎಂ, ರೋಹಿತ್.ಡಿ.ಡಿ, ಎಸ್.ಸಿ.ಸಂತೋಷ್, ಎಸ್.ಡಿ.ವೇಣುಗೋಪಾಲ್, ಎಸ್.ರಾಘವೇಂದ್ರ, ಸಿದ್ದೇಗೌಡ, ಶಶಿಧರ್‌ಸಿಂಗ್.ಎಸ್.ಸಿ, ಶೇಷಣ್ಣ.ಎಂ, ಶಿವಶಂಕರ್.ಎಲ್, ಸೌಮ್ಯ.ಆರ್, ತೇಜಸ್ವಿ.ಕೆ.ಎಸ್, ವಿನಯ್.ಕೆ.ಆರ್, ವಿನೋದ.ಕೆ ಸ್ಪರ್ಧಿಸಿದ್ದಾರೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್ ಇದ್ದರು.

ಮತ್ತೀಕೆರೆ ಜಯರಾಮ್, ಸೋಮಶೇಖರ್ ಕೆರಗೋಡು ಪುನರಾಯ್ಕೆ

ಮಂಡ್ಯ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಮ್‌ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತೊರ್ವ ಹಿರಿಯ ಪತ್ರಕರ್ತ ಸೋಮಶೇಖರ್ ಕೆರೆಗೋಡು ರಾಜ್ಯ ಕಾರ್ಯದರ್ಶಿಗಳಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

ಕಳೆದ ಅವಧಿಯಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಮತ್ತೀಕೆರೆ ಜಯರಾಮ್‌ ಅವರು 2014 ಮತ್ತು 2018 ರಿಂದ 2022ರವರೆಗೆ ಸತತ ಎರಡು ಬಾರಿ ರಾಜ್ಯ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದರು. ಮಂಡ್ಯದ ಜೊತೆಗೆ ರಾಮನಗರದಲ್ಲೂ ದೀರ್ಘಕಾಲದಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಕಾರ್ಯದರ್ಶಿಗಳಾಗಿಯಾಗಿ ಆಯ್ಕೆಯಾಗಿರುವ ಮತ್ತೊರ್ವ ಹಿರಿಯ ಪತ್ರಕರ್ತ ಸೋಮಶೇಖರ್ ಕೆರೆಗೋಡು ಕಳೆದ ಅವಧಿಯಲ್ಲಿಯೂ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಇಬ್ಬರ ಅವಿರೋಧ ಆಯ್ಕೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಅಬಿನಂದನೆ ಸಲ್ಲಿಸಿದ್ದಾರೆ.