ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸಮಾಜದ ಸ್ವಾಸ್ಥ್ಯಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ನಗರದ ವರ್ತಕರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಪ್ರಾಮಾಣಿಕ ಪತ್ರಕರ್ತರು ಇದ್ದಾರೆ. ಯಾವುದೇ ತಾರತಮ್ಯಗಳನ್ನು ಮಾಡದೆ ಎಲ್ಲರನ್ನೂ ಸಮನಾಗಿ ಪ್ರೀತಿ ವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಿದ್ದು, ಪತ್ರಕರ್ತರು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರ ವಸ್ತುನಿಷ್ಠ ವರದಿಯಿಂದ ನಮ್ಮಲ್ಲಿ ಏನಾದರೂ ತಪ್ಪುಗಳ ಇದ್ದರೆ ತಿದ್ದುಕೊಳ್ಳಬಹುದು. ನಾವು ನೀವು ಸೇರಿಕೊಂಡು ಜಿಲ್ಲೆ ಅಭಿವೃದ್ಧಿ ಶ್ರಮಿಸೋಣ ಎಂದು ಹೇಳಿದರುಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲ ಪತ್ರಕರ್ತರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯ ಕೋರಿದರು. ಪತ್ರಕರ್ತರ ಕ್ಷೇಮ ನಿಧಿಗೆ 5 ಲಕ್ಷ ರು. ದೇಣಿಗೆ ನೀಡಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಪ್ರತಿಭಾ ಪುರಸ್ಕಾರ ಮಾಡಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ಪತ್ರಿಕಾರಂಗ ಕಾರ್ಯನಿರ್ವಹಿಸುತ್ತದೆ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಯಲ್ಲಿ ಜಿಲ್ಲೆಯ ಪತ್ರಕರ್ತರ ಪಾಲು ಹೆಚ್ಚಾಗಿದೆ. ಜಿಲ್ಲೆಯ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳು ಹೆಚ್ಚಿನ ಮಟ್ಟದಲ್ಲಿ ಸಿಗುವಂತಾಗಬೇಕು ಎಂದು ಹೇಳಿದರು. ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ಶ್ರೀಮತಿ ಗೌರಮ್ಮ- ಬಿ.ರಾಚಯ್ಯ ದತ್ತಿ ಪ್ರಶಸ್ತಿಯನ್ನು ಸುದ್ದಿಸಂಜೆ ಪತ್ರಿಕೆ ವರದಿಗಾರ ಎಂ.ಬಸವರಾಜುಗೆ, ಲಿಂಗಮ್ಮ ಮತ್ತು ಆರ್. ಸಿದ್ದೇಗೌಡ ದತ್ತಿ ಪ್ರಶಸ್ತಿಯನ್ನು ಹನೂರು ತಾಲೂಕಿನ ಆಂದೋಲನ ಪತ್ರಿಕೆ ವರದಿಗಾರ ಎಂ. ಮಹಾದೇಶ ಅವರಿಗೆ, ಸಿದ್ದಲಿಂಗ ದೇವರು ಹಿರಿಯ ಛಾಯಾಗ್ರಾಹಕ ಪ್ರಶಸ್ತಿಯನ್ನು ಪತ್ರಿಕಾ ಛಾಯಾಗ್ರಾಹಕರಾದ ಬದನಗುಪ್ಪೆ ಮಲ್ಲಣ್ಣಗೆ ಮತ್ತು ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ದತ್ತಿ ಪ್ರಶಸ್ತಿಯನ್ನು ಗುಂಡ್ಲುಪೇಟೆ ಮಣಿಕಂಠಗೆ, ಲೇಖಕಿ ಎಚ್.ಕೆ.ವಿಜಯಾ ಅವರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು
ಸಿ.ಬಸಂತ್ ಕುಮಾರ್‌ಗೆ ಹಾಗೂ ಹೊನ್ನಹಳ್ಳಿ ಪಟೇಲ್ ಎಚ್.ಎಂ. ಪುಟ್ಟಮಾದಪ್ಪ ದತ್ತಿ ಪ್ರಶಸ್ತಿಯನ್ನು ವೈ.ಎಂ.ಭಾನುಪ್ರಕಾಶ್ ಗೆ ಪ್ರದಾನ ಮಾಡಲಾಯಿತು.ಜೊತೆಗೆ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪುರಸ್ಕೃತರಾದ ದೇವರಾಜು ಕಪ್ಪಸೋಗೆ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬನಶಂಕರ ಆರಾಧ್ಯ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ:ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ವು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು
ಸಮಾರಂಭದಲ್ಲಿ ಎಎಸ್ಪಿ ಶಶಿಧರ್, ಸಂಘದ ಜಿಲ್ಲಾ ಉಸ್ತುವಾರಿ ಸೋಮಶೇಖರ್ ಕೆರಗೋಡು, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ್ , ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ- ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು.-----ನಕಲಿ ಪತ್ರಕರ್ತರ ಹಾವಳಿ ತಡೆಯದಿದ್ದರೆ ನೈಜ ಪತ್ರಕರ್ತನ ಘನತಗೂ ಧಕ್ಕೆ : ಶಿವಾನಂದ ತಗಡೂರುಕನ್ನಡಪ್ರಭ ವಾರ್ತೆ, ಚಾಮರಾಜನಗರ
ರಾಜ್ಯದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಅದನ್ನು ತಡೆದಿದ್ದರೆ ಸಮಾಜಕ್ಕೆ ಗಂಭೀರ ಸಮಸ್ಯೆ ಉಂಟಾಗುತ್ತದೆ. ಇದು ನೈಜಪತ್ರಕರ್ತರ ಘನತೆಗೂ ಧಕ್ಕೆ ತರುತ್ತದೆ. ಸಮಾಜಕ್ಕೆ ವಸ್ತು ನಿಷ್ಠ, ನೈತಿಕತೆಯಿಂದ ಕೂಡಿದ ವಿಶ್ವಾಸಾರ್ಹ ಪತ್ರಕರ್ತರ ಅವಶ್ಯಕತೆ ತುಂಬಾ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.ನಗರದ ವರ್ತಕರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣ ಮಾಡಿದರು.
ರಾಜ್ಯದಲ್ಲಿ ನಕಲಿ ಪತ್ರಕರ್ತರ ಹಾವಳಿ, ಬ್ಲ್ಯಾಕ್‌ಮೇಲ್ ದಂಧೆ ಹೆಚ್ಚಾಗುತ್ತಿದ್ದು, ನೈಜಪತ್ರಕರ್ತರ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಇಂತಹ ನಕಲಿಪತ್ರಕರ್ತರನ್ನು ಹೊರಹಾಕುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.