ಸಾಮಾಜಿಕ ಸ್ವಾಸ್ಥ್ಯ ಕಾಪಾಡಿದ ಪತ್ರಕರ್ತರು

| Published : Jul 20 2025, 01:20 AM IST

ಸಾರಾಂಶ

ಬದುಕಿನಲ್ಲಿ ಜ್ಞಾನ ಅತಿ ಮುಖ್ಯವಾಗಿದೆ. ಸಮಾಜದಲ್ಲಿರುವ ಅಂಕು-ಡೊಂಕು ತಿದ್ದಿ, ಸುಂದರ ಸಮಾಜ ನಿರ್ಮಿಸುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ.

ಕೊಪ್ಪಳ:

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದ್ದು ಅವರಿಗೆ ಸಾಮಾಜಿಕ ಕಳಕಳಿ ಅತಿ ಅವಶ್ಯವಾಗಿದೆ ಎಂದು ಕುಕನೂರಿನ ಮಹಾದೇವ ಸ್ವಾಮೀಜಿ ಹೇಳಿದರು.

ತಾಲೂಕಿನ ಅಳವಂಡಿ ಗ್ರಾಮದ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅಳವಂಡಿ ಹೋಬಳಿ ಪತ್ರಕರ್ತರು ಹಾಗೂ ಎಸ್ಎಸ್ ಪಿಯು ಕಾಲೇಜಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಎನ್ಎಸ್ಎಸ್ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ಬದುಕಿನಲ್ಲಿ ಜ್ಞಾನ ಅತಿ ಮುಖ್ಯವಾಗಿದೆ. ಸಮಾಜದಲ್ಲಿರುವ ಅಂಕು-ಡೊಂಕು ತಿದ್ದಿ, ಸುಂದರ ಸಮಾಜ ನಿರ್ಮಿಸುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾಗಿ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ, ಉಪನ್ಯಾಸಕರಾದ ಡಾ. ಪ್ರವೀಣಕುಮಾರ ಪೊಲೀಸ್‌ಪಾಟೀಲ, ಸಂತೋಷಕುಮಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಕವಿ ಸಮಿತಿಯ ವ್ಯವಸ್ಥಾಪಕ ಶಿವಪ್ರಕಾಶಸ್ವಾಮಿ ಇನಾಮದಾರ, ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಗ್ರಾಪಂ ಸದಸ್ಯರಾದ ಗುರು ಬಸವರಾಜ ಹಳ್ಳಿಕೇರಿ, ಅನ್ವರ ಗಡಾದ, ಪಿಎಸ್ಐ ಪ್ರಹ್ಲಾದ್ ನಾಯಕ, ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ, ಉಪನ್ಯಾಸಕ ಬಾಳಪ್ಪ, ಎ‌ಸ್.ಎಸ್. ಅಂಗಡಿ, ದೇವಮ್ಮ, ನೀಲಪ್ಪ ಹಕ್ಕಂಡಿ, ಪತ್ರಕರ್ತರಾದ ಸುರೇಶ ಸಂಗರಡ್ಡಿ, ಮಲ್ಲಿಕಾರ್ಜುನ ಪಾಟೀಲ, ಜುನಸಾಬ ವಡ್ಡಟ್ಟಿ, ಬಿ.ಎನ್. ಹೋರಪೇಟಿ ಇದ್ದರು.