ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಬಾಗಲಕೋಟೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಬುಧವಾರ ಗುಳೇದಗುಡ್ಡ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಯೋಜನೆಯ ಕಾಮಗಾರಿಗಳನ್ನು, ಸರ್ಕಾರಿ ಆಸ್ಪತ್ರೆ, ಶಾಲೆ, ಅಂಗನವಾಡಿ ಕಟ್ಟಡಗಳನ್ನು ಭೇಟಿ ಮಾಡಿ ಕಾಮಗಾರಿ ವೀಕ್ಷಿಸಿ ಸಂಬಂಧಿಸಿದ ಅಧಿಕಾರಿ, ಗುತ್ತಿಗೆದಾರರಿಗೆ ಸಲಹೆ, ಸೂಚನೆ ನೀಡಿದರು.ತಾಲೂಕಿನ ಕಟಗೇರಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸ್ಟಾಕ್ ಯಾರ್ಡ್‌ನಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ (ಪ್ಯಾಕೇಜ್-2) ಕಾಮಗಾರಿಗೆ ಸಂಬಂಧಿಸಿದ ಪೈಪ್‌ಲೈನ್‌ಗಳನ್ನು ಪರಿಶೀಲಿಸಿದರು. ನಂತರ ತೋಗುಣಸಿ ಕ್ರಾಸ್ ಹತ್ತಿರ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ 29 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯ (ಪ್ಯಾಕೇಜ್-4) ಕಾಮಗಾರಿಯ ಪರೀಶಿಲನೆ ಮಾಡಿದರು. ಮುರಡಿ ಹಾಗೂ ಪರ್ವತಿ ಗ್ರಾಮಕ್ಕೆ ಸಂಬಂಧಿಸಿದ ಜೆ.ಜೆ.ಎಂ. ಕಾಮಗಾರಿಗಳನ್ನು ಪರಿವೀಕ್ಷಿಸಿದರು. ನಂತರ ಕೋಟೆಕಲ್, ಲಾಯದಗುಂದಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಜಾಕವೇಲ್, ನೀರು ಶೇಖರಣಾ ಕೆರೆ ಮತ್ತು ನೀರು ಶುದ್ಧೀಕರಣ ಘಟಕಗಳನ್ನು ಪರಿವೀಕ್ಷಿಸಿ ಸರಿಯಾದ ಪ್ರಮಾಣದಲ್ಲಿ ಅಲಮ್ ಮತ್ತು ಕ್ಲೋರಿನೇಶನ ಮಾಡಿ ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಲು ಸೂಚನೆ ನೀಡಿದರು.
ತಾಲೂಕಿನ ಕೆಲವಡಿ ಗ್ರಾಪಂ ವ್ಯಾಪ್ತಿಯ ತಿಮ್ಮ ಸಾಗರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ, ಕಟಗೇರಿ ಗ್ರಾಪಂ ವ್ಯಾಪ್ತಿಯ ಕಾಮಗಾರಿಗಳು, ಪರ್ವತಿ ಗ್ರಾಪಂ ಖಾನಾಪೂರ ಎಸ್.ಸಿ.ಗ್ರಾಮದ ಪ.ಪಂ. ಕಾಲೋನಿಯ ಪ್ರಾಥಮಿಕ ಶಾಲೆ ಕಟ್ಟಡ, ಲಾಯದಗುಂದಿ ಗ್ರಾಪಂಯಲ್ಲಿ ಕಲ್ಯಾಣಿ ಕಾಮಗಾರಿ, ಎನ್.ಆರ್.ಎಲ್.ಎಂ.ಶೆಡ್, ಪಂಪ್‌ಹೌಸ್, ಜಿ.ಎಲ್.ಎಸ್.ಆರ್. ಟ್ಯಾಂಕ್ ರಿಪೇರಿ ಮಾಡುವ ಕಾಮಗಾರಿ, ನೀರಿನ ಶುದ್ಧೀಕರಣ ಮಾಡುವ ಕುರಿತು, ನಾಗಾರಾಳ ಎಸ್. ಪಿ. ಗ್ರಾಪಂ ಅಂಗನವಾಡಿ ಕಟ್ಟಡ ಕಾಮಗಾರಿ ಹಾಗೂ 5 ಪ್ರಿಯಾರಿಟಿ ಕಾಮಗಾರಿಗಳನ್ನು ಪರಿಶೀಲಿಸಿದರು. ಗುಳೇದಗುಡ್ಡ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಹಾಗೂ ಹೊಸ ಆರೋಗ್ಯ ಕೇಂದ್ರ ನಿರ್ಮಾಣದ ಕಾಮಗಾರಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ, ಬಾದಾಮಿಯ ಪಿಆರ್‌ಇಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ತೋಪಲಕಟ್ಟಿ, ವೈದ್ಯಾಧಿಕಾರಿ ಡಾ.ನಾಗರಾಜ ಕುರಿ, ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಪಂ ಪಿಡಿಒಗಳು ಹಾಜರಿದ್ದರು.