ಸಾರಾಂಶ
-ರಾಯಚೂರು ನಗರದ ಹಳೆದ ಡಿಸಿ ಕಚೇರಿಗೆ ಭೇಟಿ ನೀಡಿದ ಪಾಲಿಕೆ ಹೊಸ ಆಯುಕ್ತ ಜುಬೇನ ಮೋಹಪಾತ್ರ
---ಕನ್ನಡಪ್ರಭ ವಾರ್ತೆ ರಾಯಚೂರು
ಮೇಲ್ದರ್ಜೇಗೇರಿರುವ ರಾಯಚೂರು ಮಹಾನಗರ ಪಾಲಿಕೆಯ ಹೊಸ ಆಯುಕ್ತರಾಗಿ ಜುಬೇನ ಮೋಹಪಾತ್ರ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.ಸ್ಥಳೀಯ ಪಾಲಿಕೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಅವರು ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಸ್ವಾಗತಿಸಿದರು. ನಂತರ ಹಳೆ ಜಿಲ್ಲಾಡಳಿತ ಕಚೇರಿಗೆ ತೆರಳಿದ ಆಯುಕ್ತರು ಸ್ಥಳಾಂತರಗೊಂಡಿರುವ ಪಾಲಿಕೆ ಕಚೇರಿಗೆ ಅಗತ್ಯವಾದ ಸವಲತ್ತುಗಳನ್ನು ಕಲ್ಪಿಸಿಕೊಡುವುದರ ಕುರಿತು ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಈ ವೇಳೆ ಮಾತನಾಡಿದ ಅವರು, ಹೊಸದಾಗಿ ಕಾರ್ಯಾರಂಭಗೊಂಡಿರುವ ಮಹಾನಗರ ಪಾಲಿಕೆಯಡಿ ನಿವಾಸಿಗಳಿಗೆ ಮೂಲಭೂತ ಸವಲತ್ತುಗಳೊಂದಿಗೆ, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಲಾಗುವುದು.ಮುಂದಿನ ದಿನಗಳಲ್ಲಿ ಅಧಿಕಾರಿ,ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಎಲ್ಲರ ಸಲಹೆ ಸೂಚನೆಗಳನ್ನು ಪಡೆದು ಯೋಜನಾಪೂರ್ವಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.
ಸ್ಥಳೀಯ ಆಡಳಿತಗಳಲ್ಲಿ ಸಮಸ್ಯೆಗಳಿರುವುದು ಸಹಜ, ಅವುಗಳನ್ನು ಅರಿತುಕೊಂಡು ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು, ನಗರದಲ್ಲಿ ಮೂಲಭೂತ ಸವಲತ್ತುಗಳಾದ ಕುಡಿಯುವ ನೀರು, ಸ್ವಚ್ಛತೆ,ರಸ್ತೆ, ಚರಂಡಿ, ಬೀದಿ ದೀಪ, ತೆರಿಗೆ ವಸೂಲಿ ಸೇರಿದಂತೆ ಇತರೆ ಸಮಸ್ಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.ರಾಯಚೂರು ನಗರಕ್ಕೆ ತನ್ನದೇ ಆದಂತಹ ಮಹತ್ವವಿದ್ದು, ಐತಿಹಾಸಿಕ ಸ್ಥಾನಹೊಂದಿರುವ ಪ್ರದೇಶದಲ್ಲಿ ಜನರು ಅನುಭವಿಸುತ್ತಿರುವ ತೊಂದರೆಗಳು, ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಈಗಾಗಲೇ ಮೇಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಸ್ಥಳೀಯ ಪರಿಸರ, ಸಮಸ್ಯೆಗಳು ಹಾಗೂ ಅಭಿವೃದ್ಧಿಗೆ ಅಗತ್ಯವಾದ ಅಂಶಗಳನ್ನು ಅರಿತು ಹಂತಹಂತವಾಗಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಹಿರಿಯ ಸದಸ್ಯರಾದ ಜಯಣ್ಣ, ಜಿಂದಪ್ಪ,ನಾಗರಾಜ, ವಲಯ ಆಯುಕ್ತ ಮಹೆಬೂಬ್ ಜಿಲಾನಿ,ಉಪ ಆಯುಕ್ತ ಗುರುಸಿದ್ದಯ್ಯ ಸೇರಿ ಅಧಿಕಾರಿ, ಸಿಬ್ಬಂದಿ ಇದ್ದರು.-------------------
29ಕೆಪಿಆರ್ಸಿಆರ್ 03ಮತ್ತು04: ರಾಯಚೂರು ನಗರದ ಹಳೆದ ಡಿಸಿ ಕಚೇರಿಗೆ ಭೇಟಿ ನೀಡಿದ ಪಾಲಿಕೆ ಹೊಸ ಆಯುಕ್ತ ಜುಬೇನ ಮೋಹಪಾತ್ರ ಅವರು ಸ್ಥಳಾಂತರಗೊಂಡ ಪಾಲಿಕೆ ಕಚೇರಿಗೆ ಅಗತ್ಯವಾದ ಸವಲತ್ತುಗಳ ಕುರಿತು ಪರಿಶೀಲನೆ ನಡೆಸಿದರು.