ಬೇಲೂರಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ರೈತ ಸಂಘಕ್ಕೆ ಪತ್ರಕರ್ತ ಹೆಬ್ಬಾಳು ಹಾಲಪ್ಪ ಚಾಲನೆ

| Published : Mar 25 2024, 12:49 AM IST / Updated: Mar 25 2024, 12:50 AM IST

ಬೇಲೂರಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ರೈತ ಸಂಘಕ್ಕೆ ಪತ್ರಕರ್ತ ಹೆಬ್ಬಾಳು ಹಾಲಪ್ಪ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಆಶೋತ್ತರದಂತೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಕೇಂದ್ರದಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ರೈತ ಸಂಘಕ್ಕೆ ಚಾಲನೆ ನೀಡಲಾಯಿತು.

ಕೃಷಿಗೆ ಪೂರಕ

ಬೇಲೂರು: ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಆಶೋತ್ತರದಂತೆ ತಾಲೂಕಿನ ಅರೇಹಳ್ಳಿ ಹೋಬಳಿ ಕೇಂದ್ರದಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ರೈತ ಸಂಘಕ್ಕೆ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ಪತ್ರಕರ್ತ ಹೆಬ್ಬಾಳು ಹಾಲಪ್ಪ, ‘ಪುಷ್ಪಗಿರಿ ಶ್ರೀ ಈಗಾಗಲೇ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇಂದು ಹೆಮ್ಮಾರವಾಗಿದೆ. ಮುಂದಿನ ದಿನದಲ್ಲಿ ಕೃಷಿಗೆ ಉತ್ತೇಜನ ಮತ್ತು ಅಧುನಿಕ ಕೃಷಿ ಜತೆಯಲ್ಲಿ ದೇಶೀಯ ಪರಂಪರೆ ಉಳಿಸುವ ಕೃಷಿಗೆ ಪೂರಕವಾಗಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ರೈತ ಸಂಘವನ್ನು ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಚಾಲನೆ ನೀಡಿದಂತೆ ಇಂದು ಅರೇಹಳ್ಳಿ ಹೋಬಳಿ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ. ಇತ್ತೀಚಿನ ದಿನದಲ್ಲಿ ಕೃಷಿ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರಳ ಕೃಷಿ-ಸುಸ್ಥಿರ ಕೃಷಿಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನುತಧನಂಜಯ್ ಮಾತನಾಡಿ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಹಿಳಾ ಸ್ವಸಹಾಯ ಸಂಘಗಳು ಈಗಾಗಲೇ ಉತ್ತಮ ಕಾರ್ಯಕ್ಷಮತೆಯಿಂದ ಛಾಪು ಮೂಡಿಸುತ್ತ ಬಂದಿವೆ. ಪೂಜ್ಯ ಪುಷ್ಪಗಿರಿ ಜಗದ್ಗುರುಗಳು ಕೃಷಿಗೆ ಪ್ರೋತ್ಸಾಹ ನೀಡಬೇಕು ಎಂಬ ಹಂಬಲದಿಂದ ಯುವರೈತ ಸಂಘ ಮತ್ತು ವಿದ್ಯಾರ್ಥಿ ಘಟಕಗಳನ್ನು ಸ್ಥಾಪಿಸಲು ಆದೇಶ ನೀಡಿದ್ದಾರೆ. ಯುವ ಸಮುದಾಯ ರಾಷ್ಟ್ರದ ಅಮೂಲ್ಯ ಸಂಪತ್ತು, ಅವರಿಗೆ ಇಂತಹ ಕಾರ್ಯಕ್ರಮದ ತಿಳುವಳಿಕೆ ನೀಡಬೇಕು. ಆಗ ಮಾತ್ರ ಕೃಷಿಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.

ಅರೇಹಳ್ಳಿ ಪುಷ್ಪಗಿರಿ ಮಹಿಳಾ ಸಂಘದ ಪ್ರತಿನಿಧಿ ಗೀತಾ ಶಿವರಾಜ್, ತುಂಬದೇವರಹಳ್ಳಿ ಗ್ರಾಪಂ ಅಧ್ಯಕ್ಷ ಮಲ್ಲೇಶ್, ನಿವೃತ್ತ ಸೈನಿಕ ಶಿವರಾಜ್, ಮಹೇಶ್, ಚಂದ್ರು, ಸತೀಶ್, ಭರತ್, ಸಂದೇಶ್, ವಿನಯ್, ದಿಲೀಪ್. ಮಾಂತೇಶ್, ಶಿವಕುಮಾರ್, ಗಂಗಾಧರ್, ಬಾಲರಾಜ್, ವಿಶ್ವನಾಥ್, ಪ್ರಕಾಶ್ ಹಾಜರಿದ್ದರು.ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ರೈತ ಸಂಘವನ್ನು ಉದ್ಘಾಟನೆ ಮಾಡಲಾಯಿತು.