ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮೇ 5ರಿಂದ ನ್ಯಾಯಮೂರ್ತಿ ನಾಗಮೋಹನ್ ದಾಸ್‌ರವರ ನೇತೃತ್ವದಲ್ಲಿ ನಡೆಯಲಿರುವ ಜಾತಿ ಸಮೀಕ್ಷೆಯ ವೇಳೆ ತಾಲೂಕಿನ ಬೋವಿ ಸಮಾಜದ ನಾಗರೀಕರು ಕಡ್ಡಾಯವಾಗಿ ಪಾಲ್ಗೊಂಡು, ಸಮಾಜ ಮಂದಿ ಸಮೀಕ್ಷೆಯ ವೇಳೆ ಜಾತಿ ಬೋವಿ, ಉಪಜಾತಿ ಭೋವಿ ಎಂದಷ್ಟೆ ಬರೆಸಬೇಕು ಎಂದು ಅಂತಾರಾಷ್ಟ್ರೀಯ ಭಾರತೀಯ ಬೋವಿ ವಡ್ಡರ ಸಮಾಜದ ಖಜಾಂಚಿ ಎನ್.ವೆಂಕಟೇಶ್ ಸಮುದಾಯಕ್ಕೆ ಮನವಿ ಮಾಡಿದ್ದಾರೆ.ರಾಜ್ಯದ ಬೋವಿ ವಡ್ಡರ್ ಜನಾಂಗವನ್ನು ಸಮೀಕ್ಷೆ ವೇಳೆ ಅನುಸರಿಸಬೇಕಾದ ಕ್ರಮದ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವ ವೇಳೆ ಪಟ್ಟಣದ ಪ್ರವಾಸಿಮಂದಿರಕ್ಕೆ ಭೇಟಿ ನೀಡಿದ ಅವರು, ಮಾಧ್ಯಮಾದೊಂದಿಗೆ ಮಾತನಾಡಿ, ಪರಿಶಿಷ್ಟ ಜಾತಿಯ ಪೈಕಿ 101 ಉಪಜಾತಿಗಳಿದ್ದು, ಆ ಸಮುದಾಯಗಳಿಗೆ ಒಳಮೀಸಲಾತಿ ಅಥವಾ ಉಪ ವರ್ಗೀಕರಣ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಅಯೋಗ ರಚಿಸಿ ರಾಜ್ಯದೆಲ್ಲೆಡೆ ಮುಂದಿನ 5ನೇ ತಾರೀಖಿನಿಂದ ಮನೆ, ಮನೆಗೆ ತೆರಳಿ ಸಮೀಕ್ಷೆಯ ಮೂಲಕ ದತ್ತಾಂಶ ಸಂಗ್ರಹಕ್ಕೆ ಮುಂದಾಗಿದೆ. ೪೦ ದಿನದೊಳಗೆ ಸಮೀಕ್ಷೆ ಪೂರ್ಣಗೊಂಡು ಹೊಸ ದತ್ತಾಂಶದ ಆಧಾರದ ಮೇಲೆ ಉಪಜಾತಿಗಳ ವರ್ಗೀಕರಣ ಮಾಡಿ ನಂತರ ಲಭ್ಯವಿರುವ ಮೀಸಲು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸಮೀಕ್ಷೆಗೆ ಆಗಮಿಸುವ ಸಿಬ್ಬಂದಿಯ ಬಳಿ ಯಾವುದೇ ಒಳಜಾತಿ ಬರೆಸದೇ ಕೇವಲ ವಡ್ಡರ್, ಬೋವಿ ಎಂದಷ್ಟೇ ಬರೆಸಬೇಕು. ಇನ್ನೂ ಕೆಲಸದ ನಿಮಿತ್ತ ವಲಸೆ ಹೋದವರ ಮತ್ತು ಊರ ಬಿಟ್ಟು ಹೋದವರ ಹೆಸರನ್ನು ಕುಟುಂಬದ ಎಲ್ಲಾ ಸದಸ್ಯರನ್ನು ನೋಂದಾಯಿಸುವoತೆ ಮನವಿ ಮಾಡಿ, ಕುಟಂಬದ ಒಬ್ಬ ಸದಸ್ಯನೂ ನೋಂದಣಿಯಿಂದ ಹೊರಗುಳಿಯಬಾರದೆಂದರು. ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಸಂಚರಿಸುತ್ತಿದ್ದು, ಇದಕ್ಕಾಗಿ ಮೇ 4ರಂದು ಬೆಂಗಳೂರಿನ ಮಠ್ಕಲ್‌ನ ಮಾಕಳಿಯಲ್ಲಿ ಸಮುದಾಯದ ಸಂಸದರು, ಮತ್ತು ಶಾಸಕರು ಭಾಗವಹಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ. ಇದಕ್ಕಾಗಿ ಸಮಾಜದ ಎಲ್ಲ ಮುಖಂಡರು ಭಾಗವಹಿಸುವಂತೆ ಕರೆ ನೀಡಿದರು.ತಾಲೂಕು ಬೋವಿ ವಡ್ಡರ್ ಸಮಾದ ಅಧ್ಯಕ್ಷ ದಿಲೀಪ್ ಮಾತನಾಡಿ, ಇದೇ ತಿಂಗಳು 5ನೇ ತಾರೀಖಿನಿಂದ ನಡೆಯಲಿರುವ ಜಾತಿ ಜನಗಣತಿಯಲ್ಲಿ ತಾಲೂಕಿನ ಭೋವಿ ಸಮಾಜದ ಸಮುದಾಯದವರು, ಜಾತಿ ಬೋವಿ, ಉಪಜಾತಿ ವಡ್ಡರ್ ಎಂದು ನಮೂದಿಸಬೇಕು. ಇದರಿಂದ ನಮ್ಮ ಸಮುದಾಯ ಹೆಚ್ಚಿಗೆಯಾಗುವ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆಯಲು, ಮತ್ತು ನಮ್ಮ ಜಾತಿಯನ್ನು ಬೆಳೆಸಲು ನೆರವಾಗಬೇಕು. ಹಾಗಾಗಿ ಎಲ್ಲ ಕುಲಬಾಂಧವರು ಮತ್ತು ಸಮುದಾಯಯ ಮುಖಂಡರು ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಜಾಗೃತಿ ಮೂಡಿಸಬೇಕೆಂದರು.ಈ ವೇಳೆ ಸಮಾಜದ ನಗರಘಟಕದ ಅಧ್ಯಕ್ಷ ರವಿಚಂದ್ರ, ಮುಖಂಡರಾದ ಕುಮಾರ್, ಕೃಷ್ಣ, ರಾಜು, ಮಂಜು, ಮಹಿಳಾ ಮುಖಂಡೆ ಲಕ್ಷ್ಮಮ್ಮ ಸೇರಿ ಇತರರು ಇದ್ದರು.