ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಲು ನ್ಯಾ.ವಿ.ಉರ್ಮಿಳಾ ಕರೆ

| Published : Nov 18 2025, 12:45 AM IST

ಸಾರಾಂಶ

ತರೀಕೆರೆ, ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿ.ಊರ್ಮಿಳಾ ಹೇಳಿದ್ದಾರೆ.ತರೀಕೆರೆ ತಾಲೂಕು ಕಾನೂನು ನೆರವು ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಜಯಪ್ರಕಾಶ್ ನಾರಾಯಣ ಪ್ರೌಢಶಾಲೆ ಬೆಟ್ಟದಹಳ್ಳಿ ಸಂಯುಕ್ತ ಆಶ್ರಯದಲ್ಲಿ ಶಾಲೆಯಲ್ಲಿ ನಡೆದ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

-ಬೆಟ್ಟದಹಳ್ಳಿಯಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿ.ಉರ್ಮಿಳಾ ಹೇಳಿದ್ದಾರೆ.

ತರೀಕೆರೆ ತಾಲೂಕು ಕಾನೂನು ನೆರವು ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಜಯಪ್ರಕಾಶ್ ನಾರಾಯಣ ಪ್ರೌಢಶಾಲೆ ಬೆಟ್ಟದಹಳ್ಳಿ ಸಂಯುಕ್ತ ಆಶ್ರಯದಲ್ಲಿ ಶಾಲೆಯಲ್ಲಿ ನಡೆದ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಮತ್ತು ವಿದ್ಯಾಭ್ಯಾಸ ಹಾಳಾಗುತ್ತದೆ. ಗೊತ್ತಿಲ್ಲದೆ ಈ ಕೃತ್ಯಕ್ಕೆ ಬೀಳುತ್ತಿದ್ದಾರೆ, ಆದ್ದರಿಂದ ಎಚ್ಚರದಿಂದ ಇರಬೇಕು ಎಂದು ಹೇಳಿದರು.ಮೊಬೈಲ್ ಬಳಕೆಯಿಂದ ದೂರ ಇರಬೇಕು. ಬಳಕೆ ಮಿತಿ ಇರಬೇಕು. ಬಹಳಷ್ಟು ಜನ ಫೇಸ್ ಬುಕ್, ವಾಟ್ಸಾಪ್.ಗಳಿಂದ ಮೋಸ ಹೋಗುತ್ತಿದ್ದಾರೆ. ತಪ್ಪು ಮಾಡಿದ ವ್ಯಕ್ತಿಗಳಿಗೆ ಶಿಕ್ಷೆ ಕೊಡುವ ಜವಾಬ್ದಾರಿ ಕಾನೂನಿಗೆ ಇದೆ. ಕಾನೂನಿಗೆ ನೀವು ಗೌರವ ಕೊಟ್ಟರೆ, ನಿಮ್ಮನ್ನು ಕಾನೂನು ರಕ್ಷಿಸುತ್ತದೆ, 18 ವರ್ಷದ ಒಳಗಿನ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದರೆ. ಶಿಕ್ಷೆ ಗ್ಯಾರಂಟಿ, ಇದು ಫೋಕ್ಸೋ ಕಾಯಿದೆಯಡಿ ಬರುತ್ತದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ವಿ.ದಿನೇಶ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಕಾನೂನು ತಿಳಿದುಕೊಳ್ಳಬೇಕು ಎಂದು ಹೇಳಿದರು.ವಕೀಲರಾದ ಎಸ್.ಸುರೇಶ್ ಚಂದ್ರ ಕಾನೂನು ಸೇವಾ ದಿನಾಚರಣೆ ಮಹತ್ವ ತಿಳಿಸಿದರು. ಕಾರ್ಯದರ್ಶಿ ಎಂ.ಕೆ. ಮಂಜುನಾಥ್, ಎಂ.ಕೆ.ತೇಜಮೂರ್ತಿ, ಸುಮಂತ್, ಅಂತೋಣಿ, ಬಿ.ಪಿ.ವಿಕಾಸ್ ಮಾತನಾಡಿದರು. ಶಿಕ್ಷಕರಾದ ಹಾಲೇಶ್, ರಾಧಾಕೃಷ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-

16ಕೆಟಿಆರ್.ಕೆ.3ಃ

ತರೀಕೆರೆ ಸಮೀಪದ ಬೆಟ್ಟದಹಳ್ಳಿ ಜಯಪ್ರಕಾಶ್ ನಾರಾಯಣ ಪ್ರೌಢಶಾಲೆಯಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿ.ಉರ್ಮಿಳಾ ಉದ್ಘಾಟಿಸಿದರು. ವಕೀಲರ ಸಂಘದ ಅದ್ಯಕ್ಷ ಬಿ.ವಿ.ದಿನೇಶ್ ಕುಮಾರ್, ವಕೀಲಕರಾದ ಎಸ್.ಸುರೇಶ್ ಚಂದ್ರ ಮತ್ತಿತರರು ಇದ್ದರು.