ಅಮರ ಜ್ಯೋತಿ ಸಮೂಹ ವಿದ್ಯಾಸಂಸ್ಥೆ ತಾಲೂಕಿನಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವಿವಿಧ ಕ್ರೀಡಾಕೂಟ ಏರ್ಪಡಿಸಲಾಗುತ್ತಿದೆ,

ಮುಳಬಾಗಿಲು: ಅಮರ ಜ್ಯೋತಿ ಸಮೂಹ ವಿದ್ಯಾಸಂಸ್ಥೆ ತಾಲೂಕಿನಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವಿವಿಧ ಕ್ರೀಡಾಕೂಟ ಏರ್ಪಡಿಸಲಾಗುತ್ತಿದೆ, ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಬರುತ್ತಿದೆ ಎಂದು ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ತಿಳಿಸಿದರು. ನಗರದ ವಿದ್ಯಾಸಂಸ್ಥೆಯ ಆವರಣದಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಸಂಸ್ಥೆ ಪ್ರಾರಂಭಿಸಿ ೨೫ ವರ್ಷವಾಗುತ್ತಿದ್ದು, ಎಲ್ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೂ ಶಿಕ್ಷಣ ನೀಡಲಾಗುತ್ತಿದೆ, ಹೊಸದಾಗಿ ಎಂಬಿಎ, ಎಂಕಾಂ, ಬಿ ಎಸ್ ಸಿ, ಬಿಸಿಎ ಬಿಬಿಎ ಪದವಿಗಳನ್ನು ಪ್ರಾರಂಭಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದು, ತಾಲೂಕಿನ ಪೋಷಕರ ಮತ್ತು ಪತ್ರಕರ್ತರು, ಸಾರ್ವಜನಿಕರ, ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ವಿದ್ಯಾಸಂಸ್ಥೆ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಲುವಹಳ್ಳಿ ಆರ್.ಅಶೋಕ್ ಕುಮಾರ್, ಪಿಜಿ ನಿರ್ದೇಶಕ ಕೆ.ಶ್ರೀನಿವಾಸ ಕೃಷ್ಣ, ಪ್ರಾಂಶುಪಾಲ ಸತ್ಯಮಯ ಇದ್ದರು.