ಸಾರಾಂಶ
ಚುನಾವಣಾಧಿಕಾರಿ ಎ.ಆರ್.ದಯಾನಂದ್ ಘೋಷಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಾಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ ರಾಗಿ ಜ್ಯೋತಿ ಯೋಗೀಶ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎ.ಆರ್.ದಯಾನಂದ್ ಕಾರ್ಯನಿರ್ವಹಿಸಿದರು.ಈ ವೇಳೆ ಅಭಿನಂದನೆ ಸಲ್ಲಿಸಿದ ಜಿಪಂ ಮಾಜಿ ಉಪಾಧ್ಯಕ್ಷ ಬೀಕನಹಳ್ಳಿ ಸೋಮಶೇ ಖರ್ ಸದಸ್ಯರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಪಂಚಾಯಿತಿ ವ್ಯಾಪ್ತಿಯ ಏಳಿಗೆಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.ಗ್ರಾಮಸ್ಥರಿಗೆ ಗ್ರಾಪಂ ನಿಂದ ಲಭ್ಯವಾಗುವ ಇ-ಸ್ವತ್ತು, ಖಾತೆ, ಬೀದಿದೀಪ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷ ರಾಜೀವ್ ಮಾತನಾಡಿ ಪ್ರಸ್ತುತ ಅಧಿಕಾರ ಸ್ವೀಕರಿಸಿರುವ ನೂತನ ಅಧ್ಯಕ್ಷರು ಹಿಂದೆ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡು ಅನೇಕ ಅನುಭವ ಪಡೆದುಕೊಂಡಿದ್ದಾರೆ. ಉಳಿದಿರುವ ಅಲ್ಪಾವಧಿಯಲ್ಲಿ ಗ್ರಾಪಂನ ಬಾಕಿ ಕಾಮಗಾರಿಗಳಿಗೆ ಸರ್ವರ ಸಹಕಾರ ಪಡೆದು ಶೀಘ್ರವೇ ಪೂರೈಸ ಬೇಕು ಎಂದು ಆಶಿಸಿದರು.ಗ್ರಾಪಂ ನೂತನ ಅಧ್ಯಕ್ಷೆ ಜ್ಯೋತಿ ಯೋಗೀಶ್ ಮಾತನಾಡಿ ತಮ್ಮ ಅಧ್ಯಕ್ಷಗಾದಿಗೆ ಸಹಕರಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಗ್ರಾಪಂ ಸದಸ್ಯರು, ಪಕ್ಷದ ಮುಖಂಡರಿಗೆ ಧನ್ಯವಾದ ತಿಳಿಸಿದರು. ಉಳಿದಿರುವ ಅವಧಿಯಲ್ಲೇ ಶ್ರದ್ದೆಯಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ತಾಪಂ ಮಾಜಿ ಅಧ್ಯಕ್ಷ ನೆಟ್ಟೆ ಕೆರೆಹಳ್ಳಿ ಜಯಣ್ಣ, ಇಂದಾವರ ಪ್ರಾ.ಕೃ.ಪ.ಸ ಸಂಘದ ಅಧ್ಯಕ್ಷ ಐ.ಎಸ್.ಯತೀಶ್, ಗ್ರಾಪಂ ನಿಕಟ ಪೂರ್ವ ಅಧ್ಯಕ್ಷ ಐ.ಬಿ.ಸುಭಾಶ್, ಸದಸ್ಯರಾದ ದಾಕ್ಷಾಯಣಿ, ನೇತ್ರಾವತಿ, ಕೆಂಚಯ್ಯ, ನಗರಸಭೆ ಸದಸ್ಯ ಸುಜಾತ ಶಿವಕುಮಾರ್, ಮುಖಂಡರಾದ ಐ.ಎಂ.ಸುರೇಶ್, ರವಿಕುಮಾರ್, ಶಂಕರ್, ಕೋಟೆ ರಂಗನಾಥ್ ಮತ್ತಿ ತರರು ಹಾಜರಿದ್ದರು.
;Resize=(128,128))
;Resize=(128,128))