ಸಾರಾಂಶ
ಮೂಡುಬಿದಿರೆ: ಸಜ್ಜನ ರಾಜಕಾರಣಿಯಾಗಿ ರಾಜಕೀಯ ರಂಗದಲ್ಲಿ ಮಾತ್ರವಲ್ಲ ಸಾಮಾಜಿಕ, ಧಾರ್ಮಿಕ ಸೇವೆಯಲ್ಲೂ ತನ್ನದೇ ಛಾಪು ಮೂಡಿಸಿದವರು ಅಮರನಾಥ ಶೆಟ್ಟಿ. ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಟ್ರಸ್ಟ್ ಅವರ ಆಶಯಗಳನ್ನು ಈಡೇರಿಸುವ ಪ್ರಯತ್ನವನ್ನು ನಿರಂತರ ಮಾಡಲಿ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಮಾಜಿ ಸಚಿವ, ಮಾಜಿ ಶಾಸಕ ದಿ.ಕೆ.ಅಮರನಾಥ ಶೆಟ್ಟಿ ಹೆಸರಿನಲ್ಲಿ ಸ್ಥಾಪನೆಯಾಗಿರುವ ಚಾರಿಟೇಬಲ್ ಟ್ರಸ್ಟ್ ಅನ್ನು ಮೂಡುಬಿದಿರೆ ಕನ್ನಡ ಭವನದಲ್ಲಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.ಡಾ.ಅಮರಶ್ರೀ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಗಳನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸಿದ ಅವರ ಆದರ್ಶ ಜೀವನ ಟ್ರಸ್ಟ್ ಸ್ಥಾಪನೆಗೆ ಕಾರಣವಾಗಿದೆ. ಈ ಮೂಲಕ ನಾವು ಆರೋಗ್ಯ, ಬಡ ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಪರಿಸರ ಜಾಗೃತಿಯ ಆಶಯವನ್ನು ಇಟ್ಟುಕೊಂಡು ಮುನ್ನಡೆಯಲಿದ್ದೇವೆ ಎಂದರು.ಡಾ.ಎಂ ಶಾಂತರಾಮ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಶಾಸಕ ಉಮಾನಾಥ ಎ.ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ದೇವಳದ ಕೋಶಾಧಿಕಾರಿ ಪದ್ಮರಾಜ್ ರಾಮಯ್ಯ, ಅಮರನಾಥ ಶೆಟ್ಟಿ ಮನೆತನದ ಹಿರಿಯರಾದ ಪ್ರತಾಪ್‌ಚಂದ್ರ ಶೆಟ್ಟಿ ಅದಾನಿ ಯುಪಿಸಿಎಲ್‌ನ ಅಧ್ಯಕ್ಷ ಕಿಶೋರ್ ಆಳ್ವ, ಉದ್ಯಮಿ ಕೆ.ಶ್ರೀಪತಿ ಭಟ್, ಡಾ. ಪ್ರಶಾಂತ್ ಶೆಟ್ಟಿ ಡಾ. ಕಮಲಾಕ್ಷ ಶೆಣೈ, ಡಾ.ಕವಿತಾ ಮುಖ್ಯ ಅತಿಥಿಯಾಗಿದ್ದರು. ಟ್ರಸ್ಟಿಗಳಾದ ಜಯಶ್ರೀ ಅಮರನಾಥ ಶೆಟ್ಟಿ, ಆಶ್ರಿತಾ ಪಿ.ಶೆಟ್ಟಿ ಉಪಸ್ಥಿತರಿದ್ದರು. ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು.