ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಕೆ.ಬಿ.ನಾಗರಾಜು ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಂ.ಬಿ.ತಮ್ಮಣ್ಣಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಬಿ ಬಸವರಾಜು, ಖಜಾಂಚಿಯಾಗಿ ಕೆ.ವಿ.ಶ್ರೀನಿವಾಸ್ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಜಿ.ಡಿ.ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಬಿ.ನಾಗರಾಜು, ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮಣ್ಣಗೌಡ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಸವರಾಜು, ಖಜಾಂಚಿ ಸ್ಥಾನಕ್ಕೆ ಶ್ರೀನಿವಾಸ, ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಾಯಕ ಕೃಷಿ ನಿರ್ದೇ ಶಕಿ ಎಚ್. ಜಿ.ಪ್ರತಿಭಾ ಅಂತಿಮವಾಗಿ ಘೋಷಣೆ ಮಾಡಿದರು.
ಕೃಷಿಕ ಸಮಾಜದ ನಿರ್ದೇಶಕ ಸ್ಥಾನಕ್ಕೆ ಈ ಹಿಂದೆ ನಡೆದ ಚುನಾವಣೆಯಲ್ಲಿ ಟಿ.ಎಂ. ರಾಜಶೇಖರ್, ಬಿ.ಜಿ.ರಮೇಶ್, ಕೆ.ಕೃಷ್ಣಪ್ಪ, ಎಂ. ಶಿವಣ್ಣ, ಸಿ.ಎಸ್.ಲೋಕೇಶ್, ಎಂ.ಪಿ. ಶಂಕರ್, ಎಸ್.ವೆಂಕಟಾಚಲುವಯ್ಯ, ಡಿ.ಎನ್. ರಘು, ಎಂ.ವಿ. ಪ್ರಕಾಶ್ ಹಾಗೂ ಪುಟ್ಟರಾಮ ಆಯ್ಕೆಯಾಗಿದ್ದಾರೆ.ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಸಮಾಜದ ಮಾಜಿ ಅಧ್ಯಕ್ಷ ಕೆ.ಪಿ.ದೊಡ್ಡಿ ಶಿವರಾಮು, ಮಾಜಿ ಜಿಲ್ಲಾ ಪ್ರತಿನಿಧಿ ಜಿ.ಟಿ.ಪುಟ್ಟಸ್ವಾಮಿ, ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕೆಂಪೇಗೌಡ, ಮಾರಸಿಂಗನಹಳ್ಳಿ ಕೃಷ್ಣೇಗೌಡ, ಖ್ಯಾತಘಟ್ಟ ಗಿರೀಶ್, ಶಿವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಯಲ್ಲಾದಹಳ್ಳಿ ನಿಂಗೇಗೌಡ, ನೀಲಕಂಠನಹಳ್ಳಿ ರಾಜು, ವಳಗೆರೆದೊಡ್ಡಿ ನಾಗೇಶ್, ದೀಪಕ್ ಸೇರಿದಂತೆ ಅನೇಕ ಮುಖಂಡರುಗಳು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.