ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ 2025-26ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯಯಲ್ಲಿ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ ಪಡೆದುಕೊಂಡಿದ್ಧಾರೆ.

ವಿದ್ಯಾರ್ಥಿನಿ ಅನುಷಾ ಹೊಸುರ ಅಗ್ರಿಯಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್‌ ಹಾಗೂ ವೆಟರನರಿ ಸೈನ್ಸ್‌ನಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್‌ ಪಡೆದುಕೊಂಡರೆ, ನಿಖಿಲ ಕಿತ್ತೂರ ಅಗ್ರಿಯಲ್ಲಿ ರಾಜ್ಯಕ್ಕೆ 13 ಹಾಗೂ ವೆಟರ್ನರಿ ಸೈನ್ಸ್‌ನಲ್ಲಿ 20ನೇ ರ್‍ಯಾಂಕ್‌ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಕಳೆದ ಬಾರಿ ಸಹ ವಿದ್ಯಾರ್ಥಿಗಳು ಕೆ-ಸಿಇಟಿ ಅಗ್ರಿ ಹಾಗೂ ವೆಟರ್ನರಿಯಲ್ಲಿ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಕಾಲೇಜಿನ ಹೆಸರು ಬೆಳಗಿಸಿದ್ದರು. ರ‍್ಯಾಂಕ್ ಪರಂಪರೆ ಮುಂದುವರಿಸಿದ್ದಾರೆ. ಪರಿಶ್ರಮ ಪಟ್ಟು ಅಧ್ಯಯನ ಮಾಡುತ್ತಾರೋ ಅವರು ಖಂಡಿತ ಯಶಸ್ಸು ಪಡೆಯುತ್ತಾರೆ ಎನ್ನುವುದಕ್ಕೆ ಈ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ. ರೈತರ ಮಕ್ಕಳಾಗಿದ್ದುಕೊಂಡು ಅಗ್ರಿಯಲ್ಲಿ ರ‍್ಯಾಂಕ್ ಪಡೆದು ಹೆತ್ತವರ ಕನಸನ್ನು ನನಸು ಮಾಡಿದ್ದಾರೆ. ಈ ವಿದ್ಯಾರ್ಥಿಗಳು ಮಾಡಿದ ಸಾಧನೆ ಪ್ರಸ್ತುತ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೂ ಸಹ ಮಾರ್ಗಸೂಚಿಯಾಗಿದ್ದು, ವಿದ್ಯಾರ್ಥಿಗಳು ಅವರ ದಾರಿ ಅನುಸರಿಸಬೇಕು ಎಂದು ಹೇಳಿದರು.

ಸಲ್ಮಾನ್ ಗೋಡಿಹಾಳ (ಎಂಜಿನಿಯರಿಂಗ್-1048, ಬಿ.ಎಸ್.ಸಿ ಅಗ್ರಿ-232, ವೆಟರ್ನರಿ-291), ಪ್ರತೀಕ ಚವ್ಹಾಣ ಎಂಜಿನಿಯರಿಂಗ್-1437, ಬಿ.ಎಸ್.ಸಿ ಅಗ್ರಿ-264, ವೆಟರ್ನರಿ-1541), ಚೇತನ ಮಠದ (ಬಿಎಸ್.ಸಿ ಅಗ್ರಿ-54, ವೆಟರ್ನರಿ-141), ಸಂಕೇತ ಬಿರಾದಾರ (ಎಂಜಿನಿಯರಿಂಗ್-2440), ಅನುಷ್ಕಾ ಮಹಿಶಾಳೆ (ಎಂಜಿನಿಯರಿಂಗ್-2727, ಬಿ.ಎಸ್.ಸಿ ಅಗ್ರಿ-552, ವೆಟರ್ನರಿ-209), ರುಮೇಜಾ ಶೇಖ (ಎಂಜಿನಿಯರಿಂಗ್-3220, ಬಿ.ಎಸ್.ಸಿ ಅಗ್ರಿ-560, ವೆಟರ್ನರಿ-787), ಮಂಜುನಾಥ ಹೊನವಾಡ (ಎಂಜಿನಿಯರಿಂಗ್-3519), ಆಕಾಶ ಗೊರನಾಳ (ಎಂಜಿನಿಯರಿಂಗ್-3588), ಶೈಲೇಶ ಕುಲಕರ್ಣಿ (ಎಂಜಿನಿಯರಿಂಗ್-3680), ರಜತ.ಎನ್ (ಎಂಜಿನಿಯರಿಂಗ್-3685), ರವಿ ಹಳ್ಳೂರ (ಎಂಜಿನಿಯರಿಂಗ್-4107, ಬಿ.ಎಸ್.ಸಿ ಅಗ್ರಿ -1887, ವೆಟರ್ನರಿ-1856), ನಿಖಿಲ ಕಿತ್ತೂರ (ಎಂಜಿನಿಯರಿಂಗ್-4314), ಅಮೋಘ ಬೊಂಬಳೇಕರ (ಎಂಜಿನಿಯರಿಂಗ್-4517, ಬಿ.ಎಸ್.ಸಿ ಅಗ್ರಿ-2907, ವೆಟರ್ನರಿ-935), ಅನುಷಾ ಹೊಸುರ (ಎಂಜಿನಿಯರಿಂಗ್-4648), ಮಲ್ಲಿಕಾರ್ಜುನ ಹೂಗಾರ (ಎಂಜಿನಿಯರಿಂಗ್-4865 ಬಿ.ಎಸ್.ಸಿ ಅಗ್ರಿ-1232, ವೆಟರ್ನರಿ-437), ಸಹಾನಾ ಮಾವಿನಗಿಡದ (ಎಂಜಿನಿಯರಿಂಗ್-5043), ಮಲ್ಲಿಕಾರ್ಜುನ ಮುಚ್ಚಂಡಿ ( ಎಂಜಿನಿಯರಿಂಗ್-5145), ಅನುಷಾ ಎಡವಣ್ಣವರ (ಎಂಜಿನಿಯರಿಂಗ್-5312), ನಿವೇಶ ಮೋಗಲಿ (ಎಂಜಿನಿಯರಿಂಗ್-5409), ರುಚಿತಾ ಘಟನಟ್ಟಿ (ಎಂಜಿನಿಯರಿಂಗ್-5502), ಚನ್ನವೀರೇಶ ಕುಂಬಾರ (ಎಂಜಿನಿಯರಿಂಗ್-5761) ಬಸವ ಗೊಳಸಂಗಿ (ಎಂಜಿನಿಯರಿಂಗ್-5993).


ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಮಂಜುನಾಥ ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ, ಆಡಳಿತ ಮಂಡಳಿ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ನಾನು ರೈತಾಪಿ ಕುಟುಂಬದಿಂದ ಬಂದಿದ್ದು ಚಿಕ್ಕವಳಿದ್ದಾಗಿನಿಂದ ಒಳ್ಳೆಯ ಕಾಲೇಜಿನಲ್ಲಿ ಕಲಿಯಬೇಕು ಎಂದು ಆಸೆ ಪಟ್ಟಿದ್ದೆ. ಇಲ್ಲಿಗೆ ಬಂದ ನಂತರ ಏನಾದರೂ ಸರಿ ಒಳ್ಳೆಯ ರ‍್ಯಾಂಕ್ ಪಡೆದುಕೊಂಡು ಅಪ್ಪ ಅಮ್ಮನ ಶ್ರಮ ಸಾರ್ಥಕ ಮಾಡಬೇಕು ಎಂದು ಯತ್ನಿಸುತ್ತಿದ್ದೆ. ನನ್ನ ಕನಸು ನನಸು ಮಾಡುವಲ್ಲಿ ಇಂದು ನಮ್ಮ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಹಾಸ್ಟೆಲ್ ವಾರ್ಡನ್‌ಗಳು ನೆರವಾಗಿದ್ದು ಅವರಿಗೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. ನನ್ನ ಈ ರ‍್ಯಾಂಕ್‌ನ್ನು ನನ್ನ ಹೆತ್ತವರಿಗೆ ಅರ್ಪಿಸುತ್ತೇನೆ.

-ಅನುಷಾ ಹೊಸುರ, ಸಾಧನೆಗೈದ ವಿದ್ಯಾರ್ಥಿನಿ