ದರಸಗುಪ್ಪೆ ಕೃಷಿ ಪತ್ತಿನ ಸಂಘಕ್ಕೆ ಕೆ.ಎನ್.ರಾಮಚಂದ್ರು ಅಧ್ಯಕ್ಷರಾಗಿ ಆಯ್ಕೆ

| Published : Mar 27 2025, 01:09 AM IST

ದರಸಗುಪ್ಪೆ ಕೃಷಿ ಪತ್ತಿನ ಸಂಘಕ್ಕೆ ಕೆ.ಎನ್.ರಾಮಚಂದ್ರು ಅಧ್ಯಕ್ಷರಾಗಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘದ ಒಟ್ಟು 12 ಮಂದಿ ನಿರ್ದೇಶಕರಲ್ಲಿ 8 ಮಂದಿ ಮೈತ್ರಿ ಬೆಂಬಲಿತರಾಗಿ ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ 4 ಮಂದಿ ನಿರ್ದೇಶಕರಿದ್ದರು. ಅಧ್ಯಕ್ಷಗಾಧಿಗೆ ಮೈತ್ರಿ ಬೆಂಬಲಿತ ಕೆ.ಎನ್ ರಾಮಚಂದ್ರು ಹಾಗೂ ಕಾಂಗ್ರೆಸ್ ಬೆಂಬಲಿತ ಡಿ.ಎಸ್ ಕಿರಣ್ ಅವರ ನಡುವೆ ಚುನಾವಣೆ ಏರ್ಪಟ್ಟಿತ್ತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ದರಸಗುಪ್ಪೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬೆಂಬಲಿತ ಕೆ.ಎನ್.ರಾಮಚಂದ್ರು, ಪ್ರತಿಮಾ ಆಯ್ಕೆಯಾಗಿದ್ದಾರೆ.

ಸಂಘದ ಒಟ್ಟು 12 ಮಂದಿ ನಿರ್ದೇಶಕರಲ್ಲಿ 8 ಮಂದಿ ಮೈತ್ರಿ ಬೆಂಬಲಿತರಾಗಿ ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ 4 ಮಂದಿ ನಿರ್ದೇಶಕರಿದ್ದರು. ಅಧ್ಯಕ್ಷಗಾಧಿಗೆ ಮೈತ್ರಿ ಬೆಂಬಲಿತ ಕೆ.ಎನ್ ರಾಮಚಂದ್ರು ಹಾಗೂ ಕಾಂಗ್ರೆಸ್ ಬೆಂಬಲಿತ ಡಿ.ಎಸ್ ಕಿರಣ್ ಅವರ ನಡುವೆ ಚುನಾವಣೆ ಏರ್ಪಟ್ಟಿತ್ತು.

ನಂತರ ಕೆ.ಎನ್. ರಾಮಚಂದ್ರ 8 ಮತಗಳ ಪಡೆದು ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಪ್ರತಿಮಾ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಸಿಡಿಒ ಪಾರ್ವತಮ್ಮ ಕಾರ್ಯ ನಿರ್ವಹಿಸಿದರು. ಸಂಘದ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನ ಅಭಿನಂದಿಸಿದರು.ಮಹಿಳೆಯರಿಗೆ ನಾಳೆ ರಾಗಿಬೀಸುವ ಸ್ಪರ್ಧೆ

ಪಾಂಡವಪುರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆಯಿಂದ ಮಾ.28 ರಂದು ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಮಹಿಳೆಯರಿಗೆ ರಾಗಿಬೀಸುವ ಸ್ಪರ್ಧೆ ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು 18 ರಿಂದ 20 ವರ್ಷ ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಹಿಳೆಯರು, ಅಂಗನವಾಡಿ, ಆಶಾ ಕಾರ್‍ಯಕರ್ತೆಯರು, ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ಸಹ ಭಾಗವಹಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೂರು ಮಹಿಳೆಯರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಮಹಿಳೆಯರು ಸ್ಪರ್ಧೆಗೆ ಬೇಕಾಗುವ ರಾಗಿಯನ್ನು ಸ್ಪರ್ಧಾಳುಗಳೇ ತಮ್ಮ ಮನೆಯಿಂದ ತರಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಮಹಿಳೆಯರು ಇದೇ ಮಾರ್ಚ್ 27 ರ ಸಂಜೆ 5.30ರೊಳಗೆ ಖುದ್ದು ಕೃಷಿ ಇಲಾಖೆಗೆ ಭೇಟಿಕೊಟ್ಟು ಅಥವಾ ದೂರವಾಣಿ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ-7760618978, 9740163795 ನಂಬರ್‌ಗೆ ಸಂಪರ್ಕಿಸುವಂತೆ ಸಹಾಯಕ ಕೃಷಿ ಇಲಾಖೆ ನಿರ್ದೇಶಕ ಟಿ.ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ಕೋರಿದ್ದಾರೆ.