ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ 21 ಪೊಲೀಸ್ ವಸತಿ ಗೃಹಗಳಿವೆ. ಈ ಮನೆಗಳಿಗೆ ನೀರು ಪೂರೈಕೆ ಮಾಡುತ್ತಿದ್ದ ಏಕೈಕ ಕೊಳವೆ ಬಾವಿ ತೀವ್ರ ಬರಗಾಲದಿಂದ ಸ್ಥಗಿತಗೊಂಡಿದೆ. 400 ಅಡಿ ಅಳಕ್ಕೆ ಕೊರೆಸಿದರೂ ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಪೊಲೀಸ್ ಠಾಣೆ ಹಿಂಭಾಗದ ವಸತಿ ಗೃಹಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ವಸತಿ ಗೃಹದ ಪೊಲೀಸ್ ಕುಟುಂಬದ ಗೃಹಣಿಯರು ಖಾಲಿ ಕೊಡಗಳನ್ನಿಟ್ಟು ಪ್ರತಿಭಟಿಸಿ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ 21 ಪೊಲೀಸ್ ವಸತಿ ಗೃಹಗಳಿವೆ. ಈ ಮನೆಗಳಿಗೆ ನೀರು ಪೂರೈಕೆ ಮಾಡುತ್ತಿದ್ದ ಏಕೈಕ ಕೊಳವೆ ಬಾವಿ ತೀವ್ರ ಬರಗಾಲದಿಂದ ಸ್ಥಗಿತಗೊಂಡಿದೆ. 400 ಅಡಿ ಅಳಕ್ಕೆ ಕೊರೆಸಿದರೂ ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಇದರ ಪರಿಣಾಮ ಪೊಲೀಸ್ ವಸತಿ ಗೃಹಗಳಿಗೆ ಕಳೆದ 15 ದಿನಗಳಿಂದ ಕುಡಿಯುವ ನೀರಿನಿಂದ ಹಿಡಿದು ನಿತ್ಯ ಕರ್ಮಗಳಿಗೆ ನೀರಿನ ಅಭಾವ ಕಾಣಿಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪುರಸಭೆಯಿಂದ ಕುಡಿಯುವ ನೀರು ಪೂರೈಕೆಗೆ ಪೈಪ್ ಲೈನ್ ಇದ್ದರೂ ತಾಂತ್ರಿಕ ಕಾರಣಗಳಿಂದ ಈ ವಸತಿ ಗೃಹಗಳಿಗೆ ನೀರು ಪೂರೈಕೆ ಮಾಡುತ್ತಿಲ್ಲ. ಪೊಲೀಸರ ವಸತಿ ಗೃಹಗಳಿಗೆ ನೀರಿನ ಸಮಸ್ಯೆಯಿದ್ದರೂ ಅದರ ಪರಿಹಾರಕ್ಕೆ ಇಲಾಖೆ ಅಧಿಕಾರಿಗಳೂ ತುರ್ತು ಕ್ರಮ ವಹಿಸಿಲ್ಲ ಎಂದು ಕಿಡಿಕಾರಿದರು.

ಕನಿಷ್ಠ ಟ್ಯಾಂಕರ್ ಮೂಲಕವಾದರೂ ವಸತಿ ಗೃಹಗಳಿಗೆ ನೀರಿಗೆ ಪೂರೈಕೆ ಮಾಡುತ್ತಿಲ್ಲ. ಇದರಿಂದ ಹತಾಶರಾದ ಪೊಲೀಸ್ ಕುಟುಂಬದ ಗೃಹಣಿಯರು ಪುಟ್ಟ ಮಕ್ಕಳೊಂದಿಗೆ ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಠಾಣೆ ಆವರಣದ ದೇವಾಲಯದ ಮೆಟ್ಟಿಲುಗಳ ಮೇಲೆ ಕುಳಿತು ನೀರಿಗಾಗಿ ಪ್ರತಿಭಟಿಸಿದರು.ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಮಕ್ಕಳು, ಮಹಿಳೆಯರು

ಕನ್ನಡಪ್ರಭ ವಾರ್ತೆ ದೇವಲಾಪುರವೀರಶೈವ ಲಿಂಗಾಯತ ಸಮುದಾಯದಿಂದ ಪೇಟೆ ಬೀದಿಯ ಶ್ರೀಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ವಿದ್ಯಾ ಗಣಪತಿಯ ವಿಸರ್ಜನಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.

ಗಣಪತಿ ವಿಸರ್ಜನಾ ಅಂಗವಾಗಿ ಗಣಪತಿ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣಪತಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಡಿಜೆ ಸದ್ದಿಗೆ ಮಕ್ಕಳು, ಮಹಿಳೆಯರು ಕುಣಿದು ಕುಪ್ಪಳಿಸಿದರು.ಮೆರವಣಿಗೆಯುದ್ದಕ್ಕೂ ಕೇಳಿಬಂದ ಭಕ್ತಿಗೀತೆ ಹಾಗೂ ಡಿಜೆ ಸಂಗೀತಕ್ಕೆ ಮಕ್ಕಳು, ಯುವಕರು ಮತ್ತು ಮಹಿಳೆಯರು ಉತ್ಸಾಹದಿಂದ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಸಣ್ಣ ಮಕ್ಕಳ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು. ಗಣಪತಿ ಬಪ್ಪಾ ಮೋರಿಯಾ ಘೋಷಣೆಗಳೊಂದಿಗೆ ಭಕ್ತರು ಗಣಪತಿಗೆ ಭಕ್ತಿಪೂರ್ವಕವಾಗಿ ವಿದಾಯ ಕೋರಿದರು.

ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.