ಸಾರಾಂಶ
ಟಿ. ನರಸೀಪುರ ತಾಲೂಕಿನ ಜಿ.ಆರ್. ಉಮೇಶ್ ಮತ್ತು ವೀಣಾ,
ಕನ್ನಡಪ್ರಭ ವಾರ್ತೆ ಮೈಸೂರು
ಬೆಂಗಳೂರಿನ ಜಿಕೆವಿಕೆಯ ಕೃಷಿ ವಿವಿಯಲ್ಲಿ ಕೃಷಿ ಮೇಳ ಆಯೋಜಿಸಿದ್ದು, ಮೇಳದಲ್ಲಿ ಪ್ರತೀ ವರ್ಷ ನೀಡುವಂತೆ 2024-25ರ ತಾಲೂಕು ಮಟ್ಟದ ಯುವ ರೈತ ಮತ್ತು ಯುವರೈತ ಮಹಿಳೆ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ನೀಡಲಾಗಿದೆ.ಈ ವೇಳೆ ಮೈಸೂರು ಜಿಲ್ಲೆಯ ಏಳು ತಾಲೂಕುಗಳ ಯುವ ರೈತ, ಯುವರೈತ ಮಹಿಳೆ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರ ರೈತ ಮತ್ತು ರೈತ ಮಹಿಳೆಯರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೈಸೂರು ತಾಲೂಕಿನ ಎಸ್. ರವಿಚಂದ್ರ ಹಾಗೂ ಎಚ್.ಎಸ್. ಅಂಬಿಕಾ, ಕೆ.ಆರ್. ನಗರ ತಾಲೂಕಿನ ಸಂದೀಪ್ ರಾಜು ಮತ್ತು ಎಸ್. ಸಿಂಧು, ನಂಜನಗೂಡು ತಾಲೂಕಿನ ಎಸ್. ಕೆಂಪಣ್ಣ ಮತ್ತು ಧನಲಕ್ಷ್ಮೀ, ಟಿ. ನರಸೀಪುರ ತಾಲೂಕಿನ ಜಿ.ಆರ್. ಉಮೇಶ್ ಮತ್ತು ವೀಣಾ, ಹುಣಸೂರು ತಾಲ್ಲೂಕಿನ ಬಿ. ಅಖಿಲ್ ಮತ್ತು ಶಾಂಭವಿ, ಎಚ್.ಡಿ. ಕೋಟೆ ತಾಲೂಕಿನ ಎಸ್. ಚೇತನ್ ಕುಮಾರ್ ಮತ್ತು ಕೆ.ಎಸ್. ಚೇತನಾ ಹಾಗೂ ಪಿರಿಯಾಪಟ್ಟಣ ತಾಲೂಕಿನ ಟಿ.ಎನ್. ದಿನೇಶ್ ಮತ್ತು ಎಚ್.ಡಿ. ಸಹನಾ ಅವರು ತಾಲೂಕು ಮಟ್ಟದ ಯುವ ರೈತ ಮತ್ತು ಯುವ ರೈತ ಮಹಿಳೆ ಪ್ರಶಸ್ತಿ ಪಡೆದಿದ್ದಾರೆ.ಎಸ್.ಪಿ. ಪ್ರತಾಪ್ ಹಾಗೂ ಮಹದೇವಮ್ಮ ಅವರು ಜಿಲ್ಲಾ ಮಟ್ಟದ ಪ್ರಗತಿ ಪರ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪಡೆದಿದ್ದಾರೆ. ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಕೃಷಿ ವಿಶ್ವವಿದ್ಯಾನಿಲಯದ ಪರವಾಗಿ ಹಾಗೂ ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ.ಸಿ. ರಾಮಚಂದ್ರ ಹಾಗೂ ಇತರೆ ವಿಜ್ಞಾನಿಗಳು ಅಭಿನಂದಿಸಿದ್ದಾರೆ.