ರಾಮನಗರ: ಮಾಜಿ ಶಾಸಕ ಕೆ.ರಾಜು ಅವರು ಮನೆಯಲ್ಲಿದ್ದ ಚಿನ್ನಾಭರಣ ಅಡ ಇಟ್ಟು, ಅನ್ಯರ ಬಳಿ ಬಡ್ಡಿಗೆ ಸಾಲ ಪಡೆದು ಜೆಡಿಎಸ್ ಪಕ್ಷ ಕಟ್ಟಿದ್ದರು
ರಾಮನಗರ: ಮಾಜಿ ಶಾಸಕ ಕೆ.ರಾಜು ಅವರು ಮನೆಯಲ್ಲಿದ್ದ ಚಿನ್ನಾಭರಣ ಅಡ ಇಟ್ಟು, ಅನ್ಯರ ಬಳಿ ಬಡ್ಡಿಗೆ ಸಾಲ ಪಡೆದು ಜೆಡಿಎಸ್ ಪಕ್ಷ ಕಟ್ಟಿದ್ದರು. ಅವರು ಎಂದೂ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಟಿಕೆಟ್ ಕೇಳಿರಲಿಲ್ಲ, ಕುಮಾರಸ್ವಾಮಿ ಅವರೇ ಒತ್ತಾಯ ಮಾಡಿ ಚುನಾವಣೆಗೆ ನಿಲ್ಲಿಸಿದ್ದರು.ಇದೆಲ್ಲವನ್ನು ಅರಿಯದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಕೆ.ರಾಜು ಅವರನ್ನು ಟೀಕಿಸುವುದು ಸರಿಯಲ್ಲ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವಥ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಸಹ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ವೇಳೆ ಕೆ.ರಾಜು ಅವರು ಪಕ್ಷ ಕಟ್ಟಿದ್ದನ್ನು ಕಣ್ಣಾರೆ ಕಂಡಿದ್ದೇವೆ. ಸೈಟು, ಭೂಮಿ ಮಾರಿ ಪಕ್ಷ ಕಟ್ಟಿದ್ದಾರೆಯೇ ವಿನಾ ಶಾಸಕರಾದ ನಂತವೂ ಎಂದೂ ಹಣದಾಸೆ ಪಡಲಿಲ್ಲ. ಅಧಿಕಾರದ ದುರುಪಯೋಗ ಮಾಡಿಕೊಳ್ಳಲಿಲ್ಲ. ಇಂತಹ ವ್ಯಕ್ತಿತ್ವವಿದ್ದರೂ ಇಂದು ಜೆಡಿಎಸ್‌ನ ಕೆಲವರು ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.ಕೆ.ರಾಜು ಯಾರ ಮರ್ಜಿನಲ್ಲಿ ಬೆಳೆದವರಲ್ಲ. ಆ ಪಕ್ಷಕ್ಕಾಗಿ ತನು, ಮನ, ಧನ ತ್ಯಾಗ ಮಾಡಿದ್ದಾರೆ. ಅವರು ರಾಜಕಾರಣ ಆರಂಭಿಸಿದಾಗ ಈ ಟೀಕಿಸುತ್ತಿರುವವರ ಪೈಕಿ ಅನೇಕರು ಇನ್ನು ಹುಟ್ಟಿರಲೇ ಇಲ್ಲ. ಈ ಹಿಂದೆ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕೆ.ರಾಜು ಅವರು ಸೋತಿದ್ದು ನಿಜ. ಆದರೆ, ಅವರನ್ನು ಸೋಲಿಸುವಂತೆ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಹೇಳಿದ್ದರು. ಇದಕ್ಕೆ ಅನೇಕ ಜೆಡಿಎಸ್ ಮುಖಂಡರೇ ಸಾಕ್ಷಿ ಇದ್ದಾರೆ ಎಂದು ಆರೋಪಿಸಿದರು.
ಪಕ್ಷ ನಿಷ್ಠೆ ಹೊಂದಿದ್ದ ಕೆ.ರಾಜು :ಮಾಜಿ ಶಾಸಕ ಕೆ.ರಾಜು ಅವರು ಪಕ್ಷನಿಷ್ಟೇ, ಸ್ವಾಮಿ ನಿಷ್ಟೇಯಿಂದ ಬೇರೆಯವರಿಗೆ ಸುಳ್ಳು ಮೋಸ ಮಾಡದೆ ನೇರವಾದಿಯಾಗಿ ನಡೆದವರು ರಾಜಣ್ಣ ತಮ್ಮ ರಾಜಕೀಯದಲ್ಲಿ ಹಲವಾರು ಜನರಿಗೆ ಕೆಲಸ ಕೊಡಿಸಿ ಯಾರಿಂದಲೂ ಬಿಡಿಗಾಸಿಗೆ ಆಸೆ ಬಿದ್ದವರಲ್ಲ. ಯಾವ ಅಧಿಕಾರಿ ಮುಂದೆಯೂ ಕೈಚಾಚಿ ನಿಂತವರಲ್ಲ. ಇಂದು ಕೆ.ರಾಜು ಅವರ ವಿರುದ್ದ ಮಾತನಾಡುವವರು ತಮ್ಮ ಆತ್ಮಸಾಕ್ಷಿ ಇಟ್ಟು ಮಾತನಾಡಲಿ ಎಂದು ತಿಳಿಸಿದರು.
ವಿಧಾನಸಭೆಗೆ ನಡೆದ ಉಪಚುನಾವಣೆ ವೇಳೆ ಟಿಕೆಟ್ ಕೇಳದಿದ್ದರೂ ಜನ ಮತ್ತು ಕುಮಾರಸ್ವಾಮಿಯವರೇ ಒತ್ತಾಯ ಮಾಡಿ ಟಿಕೆಟ್ ನೀಡಿದ್ದರು. ಮತದಾರರು ಕೆ.ರಾಜು ಅವರನ್ನು ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆ ಮಾಡಿದರು. ಪಕ್ಷ ಕಟ್ಟಿದ್ದರಿಂದಲೇ ಕೆ.ರಾಜು ಆಯ್ಕೆಯಾದರು. ಕುಮಾರಸ್ವಾಮಿ ಅವರೇ ಕೆ.ರಾಜು ಅವರನ್ನು ಶಾಸಕರನ್ನಾಗಿ ಮಾಡಿದ್ದು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಅಶ್ವಥ್ ಬೇಸರ ವ್ಯಕ್ತಪಡಿಸಿದರು.ನಾವೇ ಸಾಕ್ಷಿ ಇದ್ದೇವೆ:
ಕೈಲಾಂಚ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ವಿವಿಧ ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಚನ್ನೇನಹಳ್ಳಿ ನಾಗಣ್ಣ, ಅಕ್ಕೂರು ಸುಮಿತ್ರಮ್ಮ, ಅಂಜನಾಪುರ ಭದ್ರಯ್ಯ, ಹುಣಸನಹಳ್ಳಿ ಲಕ್ಷ್ಮೀಕಾಂತ್, ರಾಮನಗರದ ಶೇಷಾದ್ರಿ, ಬಾಲಣ್ಣನವರ ತಮ್ಮ ಅಶೋಕ್ ತಮ್ಮಾಜಿ ಇವರನ್ನು ಸಹ ಸೋಲಿಸಿ ಎಂದು ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆಲ್ಲ ಅಂದು ಜೆಡಿಎಸ್‌ನಲ್ಲಿದ್ದ ನಾವೇ ಸಾಕ್ಷಿ ಇದ್ದೇವೆ. ಯಾವ ದೇವಾಲಯದಲ್ಲಿ ಬೇಕಾದರೂ ಪ್ರಮಾಣ ಮಾಡಲು ನಾವು ಸಿದ್ದ. ಕೆ.ರಾಜು ಅವರು ಶಾಸಕರಾಗಿದ್ದಾಗ ಸಹಜವಾಗಿ ಸರ್ಕಾರದಿಂದ ಪೆಡಯಬೇಕಿದ್ದ ನಿವೇಶನ ಕೂಡ ಪಡೆದವರಲ್ಲ. ಬಿಜೆಪಿಯಿಂದ ಆಫರೇಷನ್ ಕಮಲ ಮಾಡಿದಾಗ 30 ಕೋಟಿ ಹಣ, ಮಂತ್ರಿ ಸ್ಥಾನದ ಆಮಿಷ ನೀಡಿದರೂ ಒಪ್ಪದೆ ಪಕ್ಷ ನಿಷ್ಟೇ ತೋರಿದ್ದಾರೆ. ಅಂತವರ ಬಗ್ಗೆ ಜೆಡಿಎಸ್ ಮುಖಂಡರು ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರಾ.ಚ.ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಶೇಖರ್, ತಾಪಂ ಮಾಜಿ ಅಧ್ಯಕ್ಷ ಜಗದೀಶ್, ಭದ್ರಯ್ಯ, ಮುಖಂಡರಾದ ಕೆಂಪೇಗೌಡನದೊಡ್ಡಿ ಮಂಚೇಗೌಡ, ದೇವರದೊಡ್ಡಿ ಚಂದ್ರಗಿರಿ, ಆಲೇಮರದದೊಡ್ಡಿ ಕರಿಯಪ್ಪ ಇದ್ದರು.
ಬಾಕ್ಸ್............ಎಚ್ಡಿಕೆ ರಾಮನಗರಕ್ಕೆ ಬರಲು ಕೆ.ರಾಜು ಕಾರಣ1999ರಲ್ಲಿ ಸಾತನೂರು ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಎದುರು ಹೀನಾಯವಾಗಿ ಕುಮಾರಸ್ವಾಮಿ ಅವರು ಸೋತಾಗ ರಾಮನಗರಕ್ಕೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬಂದು ಅವರ ನಾಯಕತ್ವದಲ್ಲಿ ಚುನಾವಣೆ ನಡೆಸಬೇಕೆಂದು ನಿರ್ಧಾರ ತೆಗೆದುಕೊಂಡವರಲ್ಲಿ ಕೆ.ರಾಜು ಪ್ರಮುಖರು. 1999-2004ರವರೆಗಿನ ಗ್ರಾಪಂ, ತಾಪಂ, ಜಿಪಂ, ಸಹಕಾರ ಸಂಘಗಳ ಚುನಾವಣೆಗಳಿಗೆ ತಮ್ಮ ಸ್ವಂತ ಹಣ ಖರ್ಚು ಮಾಡಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ತಾವು ಸಾಲಗಾರರಾಗಿದ್ದರು ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವತ್ಥ್ ಹೇಳಿದರು.
ಕೋಟ್ .................ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಅವರನ್ನು ಮತದಾರರು ತಿರಸ್ಕರಿಸಿದರು. ಜೆಡಿಎಸ್ ಪ್ರಮುಖರು ಕಾಂಗ್ರೆಸ್‌ಗೆ ಬುಕ್ ಆಗಿದ್ದರಿಂದ ಸೋಲಾಯಿತೆಂದು ನಿಖಿಲ್ ಅವರೇ ಅಪಪ್ರಚಾರ ಮಾಡಿದರು. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ನಿಷ್ಠೆಯಿಂದ ಶ್ರಮಿಸಿದ್ದೇವೆ. ತಮ್ಮ ಶ್ರಮ ಸತ್ಯ ಎಂಬುದಕ್ಕೆ ನಗರದೇವತೆ ಚಾಮುಂಡೇಶ್ವರಿ ಅಮ್ಮನವರ ಮುಂದೆ ಉಪ್ಪಿನ ಮೇಲೆ ನಿಂತು ಪ್ರಮಾಣ ಮಾಡುತ್ತೇವೆ. ನಿಖಿಲ್ ಹೇಳಿಕೆಯಿಂದ ಬೇಸೆತ್ತು ನಾವೆಲ್ಲ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇವೆ.
-ಎಸ್.ಮಹೇಶ್, ಮಾಜಿ ಅಧ್ಯಕ್ಷರು, ಕೈಲಾಂಚ ಗ್ರಾಪಂ30ಕೆಆರ್ ಎಂಎನ್ 7.ಜೆಪಿಜಿರಾಮನಗರದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.