ಸಾರಾಂಶ
ಪಾಂಡವಪುರ: ತಾಲೂಕಿನ ಕಟ್ಟೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೆ.ಎಸ್.ರಜನಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಸಂಘದ ಹಿಂದಿನ ಅಧ್ಯಕ್ಷ ಕೆ.ಎನ್.ಅನಂತು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೆ.ಎಸ್.ರಜನಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಲಾಗಿದೆ ಎಂದು ಚುನಾವಣಾಧಿಕಾರಿ ನಿರ್ಮಲಾ ಘೋಷಿಸಿದರು.
ಪಾಂಡವಪುರ: ತಾಲೂಕಿನ ಕಟ್ಟೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೆ.ಎಸ್.ರಜನಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಸಂಘದ ಹಿಂದಿನ ಅಧ್ಯಕ್ಷ ಕೆ.ಎನ್.ಅನಂತು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೆ.ಎಸ್.ರಜನಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಲಾಗಿದೆ ಎಂದು ಚುನಾವಣಾಧಿಕಾರಿ ನಿರ್ಮಲಾ ಘೋಷಿಸಿದರು. ನೂತನ ಅಧ್ಯಕ್ಷ ಕೆ.ಎಸ್.ರಜಿನಿ ಅವರನ್ನು ಎಲ್ಲಾ ನಿರ್ದೇಶಕರು, ಮುಖಂಡರು ಅಭಿನಂದಿಸಿದರು. ಅಧ್ಯಕ್ಷ ಕೆ.ಎಸ್.ರಜನಿ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಹಾಗೂ ಎಲ್ಲಾ ನಿರ್ದೇಶಕರ ಸಹಕಾರದಿಂದ ಡೇರಿ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಡೇರಿಯ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಶಶಿಕಲಾ, ನಿರ್ದೇಶಕರಾದ ಕೆ.ವಿ.ರಘು, ಕೆ.ಜೆ.ರಾಮಚಂದ್ರು, ಕೆ.ಎಸ್.ಸತೀಶ್, ನಾಗರಾಜು, ಅನಿಲ್ ಕುಮಾರ್, ಕೆ.ಜೆ.ಕುಮಾರ್, ಯಶೋಧಮ್ಮ, ಮಂಜುನಾಥ್, ನಾಮ ನಿರ್ದೇಶನ ಸದಸ್ಯ ಅನಂತು, ಮುಖಂಡರಾದ ಕೆ.ಜೆ.ರಾಜೇಂದ್ರ ಕುಮಾರ್, ವಿ.ಟಿ.ಎಲ್.ನಾಗಣ್ಣ, ಕೆ.ಎಲ್.ಕಾಳೇಗೌಡ, ಅನಿಲ್ ಕುಮಾರ್, ಜಯಶಂಕರ್, ಕೆ.ಎಸ್.ಚಂದ್ರಶೇಖರ್, ಇಂದ್ರಕುಮಾರ್, ಕೆ.ಎನ್.ಶಂಕರೇಗೌಡ, ಶಿವರಾಮು, ಚಂದ್ರಶೇಖರ್, ಕಾರ್ಯದರ್ಶಿ ದೇವರಾಜು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.