ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಒಲಂಪಿಕ್ ಅಸೋಸಿಯೇಷನ್‌ಗೆ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ಕೆ.ಎಸ್.ಶಶಿ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಎಂ.ಗಿರೀಶ್ ಕುಮಾರ್, ಖಜಾಂಚಿಯಾಗಿ ರಾಘವೇಂದ್ರ ಆರ್. ಕೆಂಬಾವಿ, ಹಿರಿಯ ಉಪಾಧ್ಯಕ್ಷರಾಗಿ ಎಂ.ವೈ.ನವೀನ್, ಉಪಾಧ್ಯಕ್ಷರಾಗಿ ಡಿ.ಎಸ್.ಅರುಣ್, ಉಮಾಪತಿ, ವಿಜಯಕುಮಾರ್, ಯಶವಂತ ನಾಯ್ಕ್, ಆರ್.ಮೋಹನ್, ದೊರೆಚಿನ್ನಪ್ಪ, ಶಬ್ಬೀರ್ ಅಹಮದ್, ಜಂಟಿ ಕಾರ್ಯದರ್ಶಿ ಮೈಕಲ್ ಕಿರಣ್, ಸಂಘಟನಾ ಕಾರ್ಯದರ್ಶಿಯಾಗಿ ಉದಯಕುಮಾರ್, ಕೆ.ಎಂ.ಶೇಖರ್ ಬಾಬು, ಎ.ಎಸ್.ಸಂತೋಷ್ ಕುಮಾರ್, ಎಸ್.ಎಲ್.ವಿನೋದ್, ಗೋಪಾಲಕೃಷ್ಣ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಜಿ.ಎಸ್. ನಾಗರಾಜ್, ಪ್ರಕಾಶ್ ಕಾರಂತ್, ಎಸ್.ಆರ್. ಶ್ರೀನಾಥ್, ಇ.ವಿಶ್ವಾಸ್, ಎಸ್.ಗಿರೀಶ್, ಭಾಸ್ಕರ್, ಅನಿಲ್ ಕುಮಾರ್, ಎಂ.ಎಂ. ಗೋಪಿ, ಕೆ.ಜೆ. ಮಠಮತಿ, ಚಂದ್ರಕಾಂತ್ ಭಟ್, ಆರ್.ಆದಿತ್ಯ, ಪಿ.ಪರಮೇಶ್ವರ, ಮುಖೀಬ್ ಅಹಮದ್ ಧರ್ವೇಶ್, ಆರ್.ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್‌ನ ನೂತನ ಅಧ್ಯಕ್ಷ ಕೆ.ಎಸ್.ಶಶಿ ತಿಳಿಸಿದರು.ಜಿಲ್ಲಾ ಒಲಂಪಿಕ್ ಅಸೋಸಿಯೇಷನ್ ವತಿಯಿಂದ ಈ ಬಾರಿ ಜಿಲ್ಲೆಯಲ್ಲಿ ಹಲವು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಉದ್ದೇಶ ಹೊಂದಿದ್ದು, ಎಲ್ಲ ಕ್ರೀಡೆಗಳ ಬೆಳವಣಿಗೆಗೆ ಸಂಸ್ಥೆಯು ಶ್ರಮಿಸಲಿದೆ. ಏಪ್ರಿಲ್ 5ರಿಂದ 20ರವರೆಗೆ ಶಿವಮೊಗ್ಗದ ಕ್ರೀಡಾಪಟುಗಳಿಗೆ 25ರಿಂದ 30 ಕ್ರೀಡೆಗಳ ಉಚಿತ ತರಬೇತಿ ಶಿಬಿರ ಮತ್ತು ಪ್ರಾತ್ಯಕ್ಷತೆಯನ್ನು ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ನುರಿತ ತರಬೇತುದಾರರು, ಅಂತರ ರಾಷ್ಟ್ರೀಯ ಆಟಗಾರರು ತರಬೇತಿ ಶಿಬಿರವನ್ನು ನಡೆಸಿಕೊಡಲಿದ್ದಾರೆ ಎಂದರು.
ಈ ಶಿಬಿರದಲ್ಲಿ ಭಾಗವಹಿಸುವವರು ತಮ್ಮ ಸ್ವ-ವಿವರಗಳನ್ನು ಒಳಗೊಂಡ ಅರ್ಜಿಯನ್ನು ನೆಹರೂ ಕ್ರೀಡಾಂಗಣದಲ್ಲಿರುವ ಒಲಂಪಿಕ್ ಸಂಸ್ಥೆಗೆ ನೀಡಬೇಕು. ಮಾ.10ರಿಂದ ಒಲಂಪಿಕ್ ಅಸೋಸಿಯೇಷನ್ ಕಚೇರಿಯಲ್ಲಿ ಪ್ರತಿದಿನ ಸಂಜೆ 5ರಿಂದ 7 ಗಂಟೆವರೆಗೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಏಪ್ರಿಲ್ 2ರಂದು ಕೊನೆ ದಿನ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಆರ್.ಮೋಹನ್, ಡಿ.ಎಸ್. ಅರುಣ್, ಎಸ್.ಗಿರೀಶ್, ವಿಜಯಕುಮಾರ್. ರಮೇಶ್ ಮತ್ತಿತರರು ಇದ್ದರು.
- - - -7ಎಸ್‌ಎಂಜಿಕೆಪಿ02:ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒಲಂಪಿಕ್ ಅಸೋಸಿಯೇಷನ್ ನೂತನ ಅಧ್ಯಕ್ಷ ಕೆ.ಎಸ್.ಶಶಿ ಮಾತನಾಡಿದರು.