ತಾಲೂಕಿನ ಡಿ. ಕಲ್ಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ವಿ.ದಂಡೇಗೌಡ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭವಾರ್ತೆ, ತುರುವೇಕೆರೆ
ತಾಲೂಕಿನ ಡಿ. ಕಲ್ಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ವಿ.ದಂಡೇಗೌಡ ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷರಾಗಿದ್ದ ಡಿ.ಪಿ.ರಾಜು ರವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕೆ.ವಿ.ದುಂಡೇಗೌಡರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ನೂತನ ಅಧ್ಯಕ್ಷರಾಗಿ ಕೆ.ವಿ.ದುಂಡೇಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಹಾಗೂ ಚುನಾವಣಾಧಿಕಾರಿಯಾದ ಕೆ.ವಿ.ನಾಗರಾಜು ಪ್ರಕಟಿಸಿದರು. ನಿಕಟಪೂರ್ವ ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ ತಮ್ಮ ಅವಧಿಯಲ್ಲಿ ನೂರಾರು ರೈತರಿಗೆ ಮರು ಸಾಲ ನೀಡಲಾಗಿದೆ. ಈ ಹಿಂದೆ ಸಾಲ ಪಡೆದವರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರುವುದರಿಂದ ಸಂಘ ಸದ್ಯ ಸುಸ್ಥಿತಿಯಲ್ಲಿದೆ. ತಾವು ಉತ್ತಮವಾಗಿ ಅಧಿಕಾರ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ನೂತನ ಅಧ್ಯಕ್ಷ ಕೆ.ವಿ.ದಂಡೇಗೌಡ ಮಾತನಾಡಿ ತಮ್ಮ ಸಂಘದಲ್ಲಿ ಸುಮಾರು 1181 ಮಂದಿ ಷೇರುದಾರರಿದ್ದಾರೆ. ಒಟ್ಟು 3.37 ಕೋಟಿ ಕೆಸಿಸಿ ಸಾಲ ನೀಡಲಾಗಿದೆ ಎಂದರು. ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ಷೇರುದಾರರು, ಸಂಘದ ನಿರ್ದೇಶಕರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ವೇಳೆ ನೂತನ ಅಧ್ಯಕ್ಷರಿಗೆ ಜಿಲ್ಲಾ ಬ್ಯಾಂಕ್ ನ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ, ಸಂಘದ ಉಪಾಧ್ಯಕ್ಷ ಕೆ.ಎಚ್.ನಾಗರಾಜು, ನಿರ್ದೇಶಕರಾದ ಡಿ.ಪಿ.ರಾಜು, ಎ.ಬಿ.ಉಮೇಶ್, ಕೆ.ವಿ.ಮೃತ್ಯುಂಜಯ, ಜಿ.ಎಸ್.ರಾಮಲಿಂಗೇಗೌಡ, ಎನ್.ಪಾಂಡುರಂಗನಾಥ್, ವನಜ, ಲಕ್ಷ್ಮಮ್ಮ, ಚಿಕ್ಕನಾಗಯ್ಯ, ಕೆ.ಸೋಮಶೇಖರ್, ಕೆ.ಆರ್.ನಂಜಪ್ಪ, ಮೇಲ್ವಿಚಾರಕರಾದ ಎಚ್. ಹರ್ಷ, ಭರತ್, ನಾಮಿನಿ ಸದಸ್ಯರಾದ ಜಿ.ಎಸ್.ಪ್ರಸನ್ನ, ವಿ.ಕೆ.ಪುಟ್ಟಸ್ವಾಮಿಗೌಡ ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು.