ಕಬಡ್ಡಿ ತರಬೇತಿ ಒಳಾಂಗಣ ಕ್ರೀಡಾಂಗಣ 6 ತಿಂಗಳಲ್ಲಿ ಪೂರ್ಣ

| Published : Oct 27 2025, 12:30 AM IST

ಕಬಡ್ಡಿ ತರಬೇತಿ ಒಳಾಂಗಣ ಕ್ರೀಡಾಂಗಣ 6 ತಿಂಗಳಲ್ಲಿ ಪೂರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡಾಪಟುಗಳ ವೈಯಕ್ತಿಕ ಸಾಮರ್ಥ್ಯ ಹೆಚ್ಚಿಸುವ ಕುರಿತು ಕಾಲೇಜು ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದು, ಬ್ಯಾಡಗಿ ಪಟ್ಟಣದ ಪ್ರಚಲಿತ ಕಬಡ್ಡಿ ಕ್ರೀಡೆ ತರಬೇತಿಗಾಗಿ ಕಾಲೇಜು ಆವರಣದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದು, ಇನ್ನಾರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಜಿ ಶಾಸಕ ಹಾಗೂ ಬಿಇಎಸ್ ಪದವಿ ಮಹಾವಿದ್ಯಾಲಯ ಅಧ್ಯಕ್ಷ ಸುರೇಶಗೌಡ ಪಾಟಿಲ ತಿಳಿಸಿದರು.

ಬ್ಯಾಡಗಿ: ಕ್ರೀಡಾಪಟುಗಳ ವೈಯಕ್ತಿಕ ಸಾಮರ್ಥ್ಯ ಹೆಚ್ಚಿಸುವ ಕುರಿತು ಕಾಲೇಜು ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದು, ಬ್ಯಾಡಗಿ ಪಟ್ಟಣದ ಪ್ರಚಲಿತ ಕಬಡ್ಡಿ ಕ್ರೀಡೆ ತರಬೇತಿಗಾಗಿ ಕಾಲೇಜು ಆವರಣದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದು, ಇನ್ನಾರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಜಿ ಶಾಸಕ ಹಾಗೂ ಬಿಇಎಸ್ ಪದವಿ ಮಹಾವಿದ್ಯಾಲಯ ಅಧ್ಯಕ್ಷ ಸುರೇಶಗೌಡ ಪಾಟಿಲ ತಿಳಿಸಿದರು. ಪಟ್ಟಣದ ಬಿಇಎಸ್ ಕಾಲೇಜು ಆಶ್ರಯದಲ್ಲಿ ಹಾವೇರಿ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ತಂಡದ 10 ದಿನಗಳ ತರಬೇತಿ ಶಿಬಿರದ ಮುಕ್ತಾಯ ಸಮಾರಂಭ ಹಾಗೂ ತಮಿಳುನಾಡಿನ ಪಯನ್ನೂರ-ಚೆಂಗಲಪಟ್ಟಿಯಲ್ಲಿ ಅ.29 ಆರಂಭವಾಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಹಾವೇರಿ ವಿವಿ ಮಹಿಳಾ ಕಬಡ್ಡಿ ತಂಡಕ್ಕೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

ಒಲಿಂಪಿಕ್ಸ್ ಮತ್ತು ವಿಶ್ವಕಪ್‌ನಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಜಾಗತಿಕ ಮಟ್ಟದಲ್ಲಿ ದೇಶಗಳ ನಡುವಿನ ಸಂಬಂಧಗಳನ್ನ ವೃದ್ಧಿಸುವುದರ ಜೊತೆಗೆ ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸಲಿವೆ. ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಬಹುತೇಕ ರಾಷ್ಟ್ರೀಯ ಕ್ರೀಡಾಪಟುಗಳು ಮಾದರಿಯಾಗಬೇಕು ಅದರಲ್ಲೂ ಇತ್ತೀಚೆಗೆ ಭಾರತದ ಮಣ್ಣಿನ ಕಬಡ್ಡಿ ಆಟಕ್ಕೆ ಪ್ರೋಆವೃತ್ತಿ ಬಳಿಕ ಅಂತರಾಷ್ಟ್ರೀಯ ಮಾನತ್ಯೆ ಸಿಗುತ್ತಿದೆ, ಶೀಘ್ರದಲ್ಲೇ ಓಲಂಪಿಕ್ ಕ್ರೀಡಾಟಕೂಟಕ್ಕೆ ಸೇರ್ಪಡೆಯಾಗುವಂತನ ಎಲ್ಲಾ ಲಕ್ಷಣಗಳಿದ್ದು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕ್ರೀಡಾ ಇಲಾಖೆಯೂ ಸಹ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿ ಎಂದರು.

ಶಿಫಾರಸುಗಳಿಗೆ ಅವಕಾಶವಿಲ್ಲ: ಕ್ರೀಡಾ ವಿಭಾಗದ ನಿರ್ದೇಶಕ ಸಿ.ಎನ್. ಸೊರಟೂರ ಮಾತನಾಡಿ, ಹಾವೇರಿ ವಿವಿ ಕುಲಪತಿಗಳ ಸಲಹೆ ಸೂಚನೆ ಸೇರಿದಂತೆ ಅಗತ್ಯ ಮಾರ್ಗದರ್ಶನದ ಮೇರೆಗೆ ವಿವಿ ವ್ಯಾಪ್ತಿಯಲ್ಲಿ ಯಾವುದೇ ಶಿಫಾರಸುಗಳಿಗೆ ಅವಕಾಶ ನೀಡದಂತೆ ಪಾರದರ್ಶಕ ಹಾಗೂ ನ್ಯಾಯುಸಮ್ಮತ ಆಯ್ಕೆ ಪ್ರಕ್ರಿಯೆ ನಡೆಸುವ ಮೂಲಕ ಕ್ರೀಡಾಪಟುಗಳಿಗೆ ಸಮಾನ ಅವಕಾಶಗಳನ್ನು ನೀಡುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಪ್ರತಿಭಾನ್ವಿತ ಕ್ರೀಡಾಪಟುಗಳು ಸ್ವಯಂ ತರಬೇತಿ ಪಡೆದು ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದಾರೆ ಎಂದರು.ಪ್ರಾಚಾರ್ಯ ಡಾ.ಎನ್.ಎಸ್. ಪ್ರಶಾಂತ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಿಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ಎನ್. ನಿಡಗುಂದಿ, ನಿರ್ದೇಶಕರಾದ ಸಂಗಪ್ಪ ಮಾಳಗಿ, ಸಿದ್ದನಗೌಡ ಪಾಟೀಲ, ರಾಜು ಮೋರಿಗೇರಿ, ಅಂಬಾ ಲಾಲ್ ಜೈನ್ ಆನಂದ ಜೈನ್ ಉಪನ್ಯಾಸಕರಾದ ಡಾ. ಸುರೇಶಕುಮಾರ ಪಾಂಗಿ, ಡಾ. ಪ್ರಭು ದೊಡ್ಡಮನಿ, ದೈಹಿಕ ನಿರ್ದೇಶಕ ಶಶಿಧರ ಮಾಗೋಡ, ರಾಷ್ಟ್ರೀಯ ತೀರ್ಪುಗಾರ ಮಲ್ಲಿಕಾರ್ಜುನ ಕೋಡಿಹಳ್ಳಿ, ತಂಡದ ಕೋಚ್ ಮಂಜುಳ ಭಜಂತ್ರಿ ವ್ಯವಸ್ಥಾಪಕ ಮಹೇಶ ಕಂಬಳಿ ಸೇರಿದಂತೆ ಇನ್ನಿತರರಿದ್ದರು.ತಂಡದ ಇಂತಿದೆ: ಅರ್ಪಿತ ಮಡಿವಾಳರ (ನಾಯಕಿ), ಅಶ್ವಿನಿ ಕರಿಯಣ್ಣನವರ, ರೇಖಾ ಜಾಡರ, ರಕ್ಷಿತ ಮಡಿವಾಳರ, ಡಿ.ಎನ್. ರಕ್ಷಿತ (ಬಿಇಎಸ್‌ಎಂ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬ್ಯಾಡಗಿ) ರಕ್ಷಿತಾ ಬಾಸೂರ, ಸುಜಾತ ಸೂರದ (ಪ್ರಿಯದರ್ಶಿನಿ ಕಾಲೇಜು ರಟ್ಟೀಹಳ್ಳಿ) ಚನ್ನಮ್ಮ ಲಮಾಣಿ, ದಿವ್ಯ ಕಾಟೇನಹಳ್ಳಿ, ತನುಜಾ ಮಾತನವರ (ಜಿ.ಎಚ್. ಕಾಲೇಜು ಹಾವೇರಿ) ರಾಣಿ ದೊಡ್ಡಮನಿ, ಸಂಜನಾ ಮೂಲಿಮನಿ (ಸರ್ಕಾರಿ ಪದವಿ ಮಹಾ ವಿದ್ಯಾಲಯ ಸವಣೂರು) ಸ್ಫೂರ್ತಿ ಸೂರದ (ಸರ್ಕಾರಿ ಪದವಿ ಮಹಾವಿದ್ಯಾಲಯ ಬ್ಯಾಡಗಿ), ರೇಣುಕಾ ಈಳಗೇರ (ಶ್ರೀ ಕುಮಾರೇಶ್ವರ ಪದವಿ ಕಾಲೇಜು ಹಾನಗಲ್ಲ), ಕೋಚ್: ಮಂಜುಳ ಭಜಂತ್ರಿ (ಜಿಲ್ಲಾ ಪಂಚಾಯತ್ ಹಾವೇರಿ) ವ್ಯವಸ್ಥಾಪಕ: ಮಹೇಶ ಕಂಬಳಿ (ಬಿಎಜೆಎಸ್‌ಎಸ್ ಕಾಲೇಜು ರಾಣೆಬೆನ್ನೂರ)